ಜಿಲ್ಲಾ ಸುದ್ದಿತಾಜಾ ಸುದ್ದಿ

ಡಿ.೬: ಭೀಮ ನಮನ ಕಾರ್ಯಕ್ರಮ

Share Below Link

ಚನ್ನರಾಯಪಟ್ಟಣ : ಇಲ್ಲಿನ ನೆಲದನಿ ಫೌಂಡೇಶನ್‌ನಿಂದ ಡಿ.೬ರ ನಾಳೆ ಡಾ. ಅಂಬೇಡ್ಕರ್ ಭವನದಲ್ಲಿ ಭೀಮ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೆಲದನಿ ಫೌಂಡೇಶನ್ ನ ಕಾರ್ಯದರ್ಶಿ ನಂದಿನಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಂಗಕರ್ಮಿ ದಿಂಡಗೂರು ಸಂತೋಷ್ ನೇತೃತ್ವದಲ್ಲಿ ಭೀಮರಾವ್ ಅಂಬೇಡ್ಕರ್ ರವರ ಪುಣ್ಯ ಸ್ಮರಣೆಯ ದಿನ ನಿಮಿತ್ತ ಅಂಬೇಡ್ಕರ್ ಕುರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು, ಅಂದು ಸಂಜೆ ೫ ಗಂಟೆಗೆ ಐದನೇ ವಾರ್ಡಿನ ತಗ್ಯಮ್ಮ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಭೀಮರಾವ್ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ನಡೆಸಲಾಗುವುದು, ಉಪನ್ಯಾಸಕ ಎಂ ಜೆ ರತ್ನಾಕರ್ ಕಾರ್ಯಕ್ರಮ ಉದ್ಘಾಟಿಸಲಿzರೆ ಎಂದರು.
ನೀನಾಸಂ ಸಂತೋಷ್, ನಂದಿನಿ, ರಾಮು, ವೆಂಕಟೇಶ್, ಮಂಜುನಾಥ್ ಹಾಜರಿದ್ದರು.