ಡಿ. ೨೦ ಮತ್ತು ೨೧:ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಜ್ರ ಮಹೋತ್ಸವ..
ಶಿವಮೊಗ್ಗ : ನಗರದ ಬಿ.ಹೆಚ್. ರಸ್ತೆಯ ಸೇಕ್ರೆರ್ಡ್ ಹಾರ್ಟ್ ಚರ್ಚ್ ಆವರಣ ದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಜ್ರ ಮಹೋತ್ಸವ ಸಂಭ್ರಮಾಚರಣೆ ಹಾಗೂ ಹಳೆಯ ವಿದ್ಯಾರ್ಥಿಗಳ ಹೃದಯಾಂಜಲಿ ಸಮ್ಮಿಲನ ಕಾರ್ಯಕ್ರಮವನ್ನು ಡಿ.೨೦ ಮತ್ತು ೨೧ರಂದು ಸಂಜೆ ೫ ಗಂಟೆಗೆ ಶಾಲಾ ಆವರಣದ ಸೇಕ್ರೆಡ್ ಹಾರ್ಟ್ ಕ್ರೀಡಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಹ್ಯೂಬರ್ಟ್ ಮಿರಾಂಡ ಅವರು ತಿಳಿಸಿzರೆ.
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಡಾ| ಧನಂಜಯ ಸರ್ಜಿ (ಶಾಲೆಯ ಹಿರಿಯ ವಿದ್ಯಾರ್ಥಿ), ಡಿ.ಎಸ್. ಅರುಣ್, ಬಲ್ಕಿಸ್ ಬಾನು, ಎಂಎಡಿಬಿ ಅಧ್ಯಕ್ಷ ಅರ್.ಎಂ. ಮಂಜುನಾಥ ಗೌಡ, ಮಾಜಿ ಶಾಸಕ ಸಿದ್ದರಾಮಣ್ಣ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರೆ|ಫಾ| ಸ್ಟ್ಯಾನಿ ಡಿಸೋಜ ಅವರು ಅಧ್ಯಕ್ಷತೆ ವಹಿಸಲಿದ್ದು, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರೆ|ಫಾ| ಕ್ಲಿಫರ್ಡ್ ರೋಷನ್ ಪೊಂಟೊ, ಕ್ಯಾಂಪಸ್ ನಿರ್ದೇಶಕರಾದ ರೆ|ಫಾ| ಫ್ರಾನ್ಸಿಸ್ ನೊರೋನ ಎಸ್.ಜೆ. ಅವರುಗಳು ಘನ ಉಪಸ್ಥಿತಿ ಇರುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿzರೆ.



