ಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಎಫ್‌ಡಿ ನಿಯಂತ್ರಿಸಲು ಡಿಸಿ ಸೂಚನೆ…

Share Below Link

ಶಿವಮೊಗ್ಗ: ಜನುವಾರುಗಳ ಮೇಲಿನ ಉಣ್ಣಿ(ಟಿಕ್) ಸಂಖ್ಯೆ ನಿಯಂತ್ರಣ ಮತ್ತು ಪರೀಕ್ಷೆಗಳಿಂದ ಶೀಘ್ರ ರೋಗ ಪತ್ತೆ ಮಾಡುವ ಮೂಲಕ ಕ್ಯಾಸನೂರು ಫಾರೆಸ್ಟ್ ಡಿಸೀಸ್‌ನ್ನು ಪರಿಣಾಮಕಾರಿ ಯಾಗಿ ನಿಯಂತ್ರಿಸಬೇಕೆಂದು ಜಿಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ತಿಳಿಸಿದರು.
ಜಿಡಳಿತ ಕಚೇರಿ ಸಭಾಂಗ ಣದಲ್ಲಿ ಆಯೋಜಿಸಲಾಗಿದ್ದ ಕೆಎಫ್‌ಡಿ ಮತ್ತು ರೇಬಿಸ್ ಕುರಿತಾದ ಅಂತರ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಲೆನಾಡಿನ ಅತಿ ಹೆಚ್ಚು ಉಣ್ಣಿ ಗಳಿರುವ ಪ್ರದೇಶಗಳನ್ನು ಗುರು ತಿಸಿ, ಜನುವಾರುಗಳಿಗೆ ಅಂತಹ ಪ್ರದೇಶದಲ್ಲಿ ಮೇಯದಂತೆ ಕ್ರಮ ವಹಿಸಬೇಕು. ಕಾಲ ಕಾಲಕ್ಕೆ ಜನುವಾರುಗಳಿಗೆ ಐವರ್‍ಮೆಕ್ಟಿನ್/ಡೊರಾಮೆಕ್ಟಿನ್ ಲಸಿಕೆ ನೀಡಬೇಕು. ಜನುವಾರುಗಳ ಬೆನ್ನಿನ ಮೇಲೆ ಪೊರಾನ್ ಸಿಂಪಡಿಸಬೇಕು. ರೈತರು ಜನುವಾರುಗಳು ಮತ್ತು ಕೊಟ್ಟಿಗೆಗಳನ್ನು ಸ್ವಚ್ಚವಾಗಿಟ್ಟುಕೊ ಳ್ಳಬೇಕು.ಉಣ್ಣಿಗಳ ಹೊಸ ಹಾಟ್ ಸ್ಪಾಟ್‌ಗಳನ್ನು ಕಡಿಮೆ ಮಾಡ ಬೇಕು. ರೈತರಿಗೆ ಉಣ್ಣಿ ನಿಯಂ ತ್ರಣ ಮತ್ತು ಕೆಎಫ್‌ಡಿ ಕುರಿತು ಜಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯವರು ಟಿಕ್ ಮಾದರಿ ಪರೀಕ್ಷೆ, ಟಿಕ್ ಸರ್ವೇಕ್ಷಣೆ ಯನ್ನು ಕೈಗೊಳ್ಳಬೇಕು. ಸಂಶಯಾ ಸ್ಪದ ಕೆಎಫ್‌ಡಿ ಪ್ರಕರಣಗಳನ್ನು ಶೀಘ್ರ ಪತ್ತೆಗಾಗಿ ಪರೀಕ್ಷೆಗೆ ಒಳಪಡಿ ಸಬೇಕು. ಆರೋಗ್ಯ ಶಿಕ್ಷಣವನ್ನು ಹೆಚ್ಚಿಸಬೇಕು ಎಂದರು.
ಕೆಎಫ್‌ಡಿ ನಿಯಂತ್ರಣದಲ್ಲಿ ಪಶುಪಾಲನ ಇಲಾಖೆಯ ಜವಾ ಬ್ದಾರಿ ಹೆಚ್ಚಿರುತ್ತದೆ. ತರಬೇತಿ ಹೊಂದಿದ ಸಿಬ್ಬಂದಿಗಳಿಂದ ಜನು ವಾರುಗಳಿಗೆ ಲಸಿಕೆ ಹಾಕಿಸಬೇಕು. ಸಾಕು ಪ್ರಾಣಿಗಳಲ್ಲಿ ಉಣ್ಣಿ ನಿಯಂ ತ್ರಕಗಳನ್ನು ಬಳಸಬೇಕು.ಮಂಗ ಸತ್ತರೆ ಅರಣ್ಯ, ಪಶುಪಾಲನೆ, ಆರೋಗ್ಯ ಇಲಾಖೆಯರು ಮತ್ತು ಸಂಬಂಧಿಸಿದ ಪಿಡಿಓ ರವರು ಅz ನ್ನು ವರದಿ ಮಾಡಬೇಕು. ಹಾಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ೬೦ ಮೀಟರ್ ಒಳಗೆ ರಾಸಾಯನಿಕ ಸಿಂಪಡಿಸಿ, ಇಲ್ಲಿ ಮಾನವರ, ಇತರೆ ಪ್ರಾಣಿಗಳ ಪ್ರವೇಶವನ್ನು ತಡೆಯಬೇಕು ಎಂದರು.
ಗ್ರಾಮ ಸಭೆಗಳಲ್ಲಿ ಕೆಎಫ್‌ಡಿ ಕುರಿತು ಅರಿವು ಮೂಡಿಸಿ, ಗ್ರಾಮ ಗಳಲ್ಲಿ ಈ ಕುರಿತಾದ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿ ಕೆಗಳು ಹೆಚ್ಚಬೇಕು. ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ತಂಡ ಕ್ಷೇತ್ರ ಭೇಟಿ ನೀಡಬೇಕು. ಸ್ಥಳೀಯ ಸಭೆಗಳಲ್ಲಿ ಇದರ ಬಗ್ಗೆ ಮಾಹಿತಿ ನಿಡಬೇಕು. ಪಿಡಿಓ ಗಳು ಸಹ ಸಹಕರಿಸಬೇಕು.ಡಿಹೆಚ್‌ಓ ೨೪ ಗಂಟೆಗೂ ಅಧಿಕವಾದ ಜ್ವರವನ್ನು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯ ಬೇಕು ಎಂದು ಹೇಳಿದರು.
ಜಿ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಯಲ್ಲಿ ೨೦೨೧ ರಲ್ಲಿ ೧೪೮೩೯ ನಾಯಿ ಕಡಿತದಲ್ಲಿ ೦೩ ರೇಬಿಸ್ ಸಾವು ಸಂಭವಿಸಿದೆ. ೨೦೨೨ ರಲ್ಲಿ ೧೯೫೯೩ ನಾಯಿ ಕಡಿತ ಪ್ರಕರಣ ಗಳಲ್ಲಿ ೧ ರೇಬಿಸ್‌ನಿಂದ ಸಾವು ಹಾಗೂ ೨೦೨೩ ರಲ್ಲಿ ೧೬೯೩೪ ನಾಯಿ/ಬೆಕ್ಕು ಕಡಿತ ಪ್ರಕರಣ ದಾಖಲಾಗಿದ್ದು ಬೆಕ್ಕು ಕಡಿತದಿಂದ ಸೊರಬದಲ್ಲಿ ೦೧ ಸಾವು ಸಂಭವಿ ಸಿದೆ. ೨೦೨೦ ರಿಂದ ೨೦೨೩ ರ ಆಗಸ್ಟ್ ಮಾಹೆವರೆಗೆ ಜಿಯಲ್ಲಿ ರೇಬಿಸ್‌ನಿಂದ ೮ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಜಿಧಿಕಾರಿಗಳು, ರೇಬಿಸ್ ಕುರಿತು ಜನರಲ್ಲಿ ಜಗೃತಿ ಮೂಡಿ ಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ರೇಬಿ ಸ್ ಲಸಿಕೆಗಳ ಲಭ್ಯತೆ ಇರಬೇಕು. ಹಾವು ಕಡಿತ ಮತ್ತು ರೇಬಿಸ್ ಲಸಿಕೆಗಳನ್ನು ಯಾವುದೇ ದಾಖಲೆ ಗಳಿಗೆ ಕಾಯದೆ ಶೀಘ್ರವಾಗಿ ನೀಡಬೇಕೆಂದು ಸೂಚಿಸಿದರು.
ಜಿ ಏಡ್ಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ :
ಜಿಧಿಕಾರಿಗಳು ಮಾತ ನಾಡಿ, ಪ್ರತಿ ಗರ್ಭಿಣಿಯರನ್ನು ಮೊದಲನೇ ಮೂರು ತಿಂಗಳ ಅವಧಿಯಲ್ಲಿ ಹೆಚ್‌ಐವಿ ಪರೀಕ್ಷೆಗೆ ಒಳಪಡಿಸಿ ವರದಿಯನ್ನು ಅಪ್ ಡೇಟ್ ಮಾಡಬೇಕು. ಏಡ್ಸ್ ದುಬ ಲ ವರ್ಗದಿಂದ ಈ ಸೋಂಕು ಹೆಚ್ಚಾಗಿ ಹರಡುವ ಕಾರಣ ಇದಕ್ಕಾಗಿಯೇ ಇರುವ ೬ ಎನ್‌ಜಿಓ ಗಳು ಇಂತಹವನ್ನು ಗುರುತಿಸಿ, ಕಾಲ ಕಾಲಕ್ಕೆ ಪರೀಕ್ಷೆ ಗೊಳಪಡಿಸಿ, ಸೂಕ್ತ ಚಿಕಿತ್ಸೆ ಮತ್ತು ಈ ಬಗ್ಗೆ ಜಗೃತಿ-ಶಿಕ್ಷಣವನ್ನು ಹೆಚ್ಚಿಸಬೇ ಕು.೨೦೨೨-೨೩ ರಲ್ಲಿ ೨೬೫ ಮತ್ತು ೨೦೨೩-೨೪ ರಲ್ಲಿ ಈವರೆಗೆ ೧೧೧ ಹೆಚ್‌ಐವಿ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ೮ ವಿದ್ಯಾ ರ್ಥಿಗಳಿಗೆ ಹೆಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ, ಇದನ್ನು ಗಂಭೀರ ವಾಗಿ ಪರಿಗಣಿಸಬೇಕು. ಕಾಲೇಜು ಗಳಲ್ಲಿ ಏಡ್ಸ್ ಕುರಿತು ಜಗೃತಿ ಕಾರ್ಯಕ್ರಮಗಳು ಹೆಚ್ಚಬೇಕು. ಇದಕ್ಕೆ ಕಾರಣವಾಗುತ್ತಿರುವ ಮೂ ಲವನ್ನು ಹುಡುಕಿ ನಿಯಂತ್ರಣ ಕ್ರಮ ವಹಿಸಬೇಕು ಎಂದರು.
ಜಿ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ಗುಡ ದಪ್ಪ ಕಸಬಿ ಮಾತನಾಡಿ, ಹವಾಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಅನೇಕ ಪರಿಣಾಮಗಳಾಗುತ್ತಿದ್ದು, ಇದರ ಕುರಿತು ಜಗೃತಿ ಹಾಗೂ ನಿಯಂತ್ರಿಸಲು ೨೦೧೯ ರಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಪ್ರೋಗ್ರಾಮ್ ಆನ್ ಕ್ಲೈಮೇಟ್ ಚೇಂಜ್ ಕಾರ್ಯ ಕ್ರಮ ಜರಿಗೊಳಿಸಿದೆ. ಹವಾ ಮಾನ ಬದಲಾವಣೆ ಯಿಂದ ಶಾಖ ತರಂಗ, ಚಂಡ ಮಾರುತ, ತೀವ್ರ ಉಸಿರಾಟದ ಖಾಯಿಲೆಗಳು ಇತರೆ ದುಷ್ಪರಿಣಾ ಮಗಳು ಹೆಚ್ಚುತ್ತಿದ್ದು, ಸಂಶೋಧನೆ ಪ್ರಕಾರ ವಿಶ್ವದಲ್ಲಿ ೩.೬ ಬಿಲಿಯನ್ ಜನರು ಹವಾಮಾನ ವೈಪರೀತ್ಯ ದಿಂದಾಗುವ ಖಾಯಿಲೆಗಳಿಗೆ ಒಳಗಾಗುವ ಹಾಗೂ ೨೦೨೩ ರ ಹೊತ್ತಿಗೆ ೨.೫ ಲಕ್ಷ ಹೆಚ್ಚುವರಿ ಸಾವು ಇದರಿಂದ ಸಂಭವಿಸಬ ಹುದು ಎಂದು ಸಂಶೋಧನೆಗಳು ಹೇಳುತ್ತಿವೆ. ಆದ್ದರಿಂದ ಈ ಕಾರ್ಯಕ್ರಮದಡಿ ಈ ಬಗ್ಗೆ ಜಗೃತಿ ಮೂಡಿಸಲು ಜಿ ಮಟ್ಟದಲ್ಲಿ ಜಿಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಲ್ಟಿಸೆಕ್ಟರಲ್ ಟಾಸ್ಕ್‌ಫೋರ್ಸ್ ಸಮಿತಿ ರಚಿಸಬೇ ಕೆಂದರು.ಜಿಧಿಕಾರಿಗಳು ಸಮಿತಿ ರಚನೆ ಮಾಡಿ, ಕಾರ್ಯಕ್ರಮ ದನ್ವಯ ಎಲ್ಲ ಆಸ್ಪತ್ರೆಗಳಲ್ಲಿ ಉಸಿರಾಟದ ಖಾಯಿಲೆಗಳನ್ನು ಆನ್‌ಲೈನ್ ಎಂಟ್ರಿ ಮಾಡಬೇಕು. ಇತರೆ ದುಷ್ಪರಿಣಾಮ ತಡೆಗಟ್ಟಲು ನಿಯಮಾನುಸಾರ ಕ್ರಮ ವಹಿಸಬೇಕೆಂದರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸುಜತ ಕೆಆರ್, ಡಿಹೆಚ್‌ಓ ಡಾ.ರಾಜೇಶ್ ಸುರಗಿ ಹಳ್ಳಿ, ಜಿಯ ವಿವಿಧ ಕಾರ್‍ಯ ಕ್ರಮಗಳ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.