ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾನಾಲಾ ನೀರು ವಿಚಾರದಲ್ಲಿ ದಾವಣಗೆರೆ ಭಾಗದ ರೈತರಿಗೆ ಮಲತಾಯಿ ಧೋರಣೆ…

Share Below Link

ದಾವಣಗೆರೆ : ನುಡಿದಂತೆ ಭದ್ರಾ ನಾಲೆಯಲ್ಲಿ ಸತತ ೧೦೦ ದಿನ ನೀರು ಹರಿಸುವ ಮೂಲಕ ದಾವಣಗೆರೆ ಭಾಗದ ರೈತ ಹಿತ ಕಾಯುವ ರಾಜ್ಯ ಸರ್ಕಾರ ಮುಂದಾಗಬೇಕೆಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಆಗ್ರಹಿಸಿzರೆ.
ಭದ್ರಾನಾಲೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ನಿನ್ನೆ ನಡೆದ ದಾವಣಗೆರೆ ಬಂದ್ ಬೆಂಬಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯದ ನೀರಿನ ಮಟ್ಟ ೧೬೬ ಅಡಿಗೆ ಬರುತ್ತಿ ದ್ದಂತೆಯೇ ಮಳೆಗಾಲದ ಭತ್ತದ ಬೆಳೆಗೆ ಸತತ ೧೦೦ ದಿನ ನೀರು ಹರಿಸುವುದಾಗಿ ಐಸಿಸಿ ಆದೇಶ ಹೊರಡಿಸಿತ್ತು. ಇದನ್ನೇ ನಂಬಿ ಕೊಂಡು ದಾವಣಗೆರೆ ಜಿಯಲ್ಲಿ ೭೦ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಡಿ ಮಾಡಿ zರೆ. ಇದಾದ ಒಂದು ತಿಂಗಳ ಬಳಿಕ ಮಳೆ ಕೊರತೆಯೆ ನೆಲವೊಡ್ಡಿ ನಾಲೆಗಳಲ್ಲಿ ನೀರು ನಿಲ್ಲಿಸಿರುವುದು ಈ ಭಾಗದ ರೈತರ ಭವಿಷ್ಯದ ಜೊತೆ ಚಟವಾಡಿದಂತಾಗಿದೆ ಎಂದು ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿ, ಶಿವಮೊಗ್ಗ ಭಾಗದ ಅಡಿಕೆ ಬೆಳೆಗಾರರನ್ನು ಗಮನದಲ್ಲಿ ಇಟ್ಟುಕೊಂಡು ದಾವಣಗೆರೆ ಜಿಯ ಭತ್ತ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ೧೦೦ ದಿನ ನೀರು ಕೊಡುವುದಾಗಿ ಭರವಸೆ ನೀಡಿದ ಸರಕಾರ ಮಾತಿನಂತೆ ನಡೆದುಕೊಳ್ಳಬೇಕು ಇದೀಗ ಭೂಮಿಗೆ ಹಾಕಿರುವ ಬಂಡವಾಳ ವಾಪಾಸು ಕೊಡುವವರು. ಪ್ರತಿ ಎಕರೆಗೆ ೩೦ ಸಾವಿರ ಬಂಡವಾಳ ದಂತೆ ೭೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಗುವ ಹಾನಿಯ ಅಂದಾಜು ಲೆಕ್ಕಕ್ಕೆ ಸಿಗುವುದಿಲ್ಲ. ಇದರ ಹೊಣೆ ಹೊರುವವರ ಯಾರು ಎಂದು ಪ್ರಶ್ನಿಸಿದರು.
ಇಂದಿನ ದಾವಣಗೆರೆ ಬಂದ್ ಇದು ಪಕ್ಷಾತೀತ ಸಂಘಟನೆಯಿಂದ ನಡೆಯುತ್ತಿರುವ ಹೋರಾಟವಾ ಗಿದ್ದು, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ರೈತರು ಹೇಗೋ ಬದುಕಬಹುದು. ನೀರು ಹರಿಸದಿದ್ದರೆ ಜನುವಾರುಗಳಿಗೆ ಮೇವು ಇಲ್ಲದಂತಾಗಿ ಅವುಗಳು ಸಾಯುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಐಸಿಸಿ ಅಧ್ಯಕ್ಷರೂ ಆಗಿರುವ ಶಿವಮೊಗ್ಗ ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಕೂಡಲೇ ದಾವಣಗೆರೆ ಭಾಗದ ಅನ್ನದಾತನ ಬಗ್ಗೆ ಚಿಂತಿಸಬೇಕೆಂದು ಅವರು ಕೆ.ಬಿ.ಕೊಟ್ರೇಶ್ ಆಗ್ರಹಿಸಿದರು.
ಕಳೆದ ಎಂಟತ್ತು ದಿನಗಳಿಂದ ದಾವಣಗೆರೆ – ಮಲೇಬೆನ್ನೂರು ಭಾಗದಲ್ಲಿ ರಸ್ತೆತಡೆ, ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ರೈತರ ಸಮಸ್ಯೆ ಆಲಿಸುತ್ತಿಲ್ಲ. ಈಗಾಗಲೇ ಕಾಳುಕಟ್ಟುವ ಹಂತದಲ್ಲಿರುವ ಭತ್ತದ ಬೆಳೆ ಒಣಗುವ ಸ್ಥಿತಿಗೆ ಬಂದಿದೆ. ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಒತ್ತಾಯಿಸಿದರು.