ಡಿ.೯: ಹಳೆಯ ಚಿತ್ರಗೀತೆಗಳ ಗಾಯನ… ರಾಗ-ಅನುರಾಗ …
ಶಿವಮೊಗ್ಗ : ನಗರದ ಅನಿಕೇತನ ಸೇವಾ ಟ್ರಸ್ಟ್ನಿಂದ ಡಿ.೯ರಂದು ಸಂಜೆ ೬ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶಾಸ್ತ್ರೀಯ ಸಂಗೀತದ ರಾಗಾಧರಿತ ಹಳೆಯ ಚಲನ ಚಿತ್ರ ಗೀತೆಗಳ ಗಾಯನ ಸಂಜೆ ರಾಗ-ಅನುರಾಗ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ರಮೇಶ್ ಜಾಧವ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅನಿಕೇತನ ಸೇವಾ ಟ್ರಸ್ಟ್ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಈಗ ಒಂದೇ ರಾಗದಲ್ಲಿ ಹೊರಹೊಮ್ಮಿರುವ ಹಲವು ಮಾಧುರ್ಯ ಪೂರ್ಣವಾದ ಚಿತ್ರಗೀತೆ ಗಳನ್ನು ವಿಶೇಷ ವಾದ್ಯಗೋಷ್ಟಿಯ ಹಿನ್ನಲೆಯಲ್ಲಿ ಪ್ರಸ್ತುತಪಡಿಸಲಾ ಗುವುದು. ಸಂಗೀತ ಪ್ರಿಯರಿಗೆ ಒಂದು ಇದು ಹಬ್ಬವೇ ಆಗಿದೆ ಎಂದರು.
ಈ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಶೃತಿ ರಾಘವೇಂದ್ರನ್, ಪೃಥ್ವಿಗೌಡ, ಪಾರ್ಥಚಿರಂತನ್, ಸಂಜನಕುಮಾರ್ ಮುಂತಾದವರು ಹಾಡಲಿದ್ದಾರೆ. ಅಂತರರಾಷ್ಟ್ರೀಯ ಕಲಾವಿದರಾದ ಶಿವಮೊಗ್ಗದ ದೀಪಕ್ ಜೈಶೀಲನ್ ಸಂಗೀತ ಸಾರಥ್ಯದಲ್ಲಿ ಈ ಗಾನ ಸಂಭ್ರಮ ಮೂಡಿ ಬರಲಿದೆ. ವಿನಯ್ರವರು ರಾಗಗಳ ಬಗ್ಗೆ ನಿರೂಪಣೆ ಮಾಡಲಿದ್ದಾರೆ ಎಂದರು.
ಟ್ರಸ್ಟಿನ ವಿಶ್ವೇಶ್ವರಯ್ಯ ಮಾತನಾಡಿ ನಮ್ಮ ಅಧ್ಯಕ್ಷರಾದ ರಮೇಶ್ಬಾಬು ಜಧವ್ರವರ ಆಯೋಜನೆಯಲ್ಲಿ ಈ ಕಾರ್ಯಕ್ರಮ ಮೂಡಿ ಬರಲಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಜೀವಾಳವಾದ ರಾಗಗಳ ವಿವಿಧ ಸ್ವರೂಪಗಳನ್ನು ಬಳಸಿ ಸಂಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ರಂಗ ಭೂಮಿ ಹಾಗೂ ಕಿರುತೆರೆ ಕಲಾವಿದ ವಿಹಾನ್ ಪ್ರಭಂಜನ್ ಮುಖ್ಯ ಅತಿಥಿಯಾಗಿ ಆಗಮಿಸಲಿ ದ್ದಾರೆ. ಈ ಶುದ್ಧ ಮನರಂಜನೆಯ ಸಂಗೀತಮಯ ಕಾರ್ಯಕ್ರಮದಲ್ಲಿ ಸಂಗೀತ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಪೃಥ್ವಿಗೌಡ, ಆನಂದರಾವ್ ಉಪಸ್ಥಿತರಿದ್ದರು.