ಆರೋಗ್ಯಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಯಶಸ್ವಿಯಾಗಿ ಜರುಗಿದ ಸೈಕ್ಲೋಥಾನ್…

Share Below Link

ಶಿವಮೊಗ್ಗ : ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾ ಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಫೆ ೯ರ ಭಾನು ವಾರ ಬೆಳಿಗ್ಗೆ ಜರುಗಿದ ಕ್ಯಾನ್ಸರ್ ಜಗತಿಗಾಗಿ ಆಯೋಜಿಸಿದ್ದ ಸೈಕ್ಲೋ ಥಾನ್ ನಲ್ಲಿ ನಗರದ ನಿವಾಸಿಗಳು ಹಾಗೂ ಶಿವಮೆಗ್ಗ ಸೈಕಲ್ ಕ್ಲಬ್ಬಿನ ಸದಸ್ಯರು ನೂರಾರು ಸಂಖ್ಯೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ಈ ಸೈಕ್ಲೊಥಾನ್ ಗೆ ಎ ವಯೋಮಾನದ ಸುಮಾರು ೩೦೦ ಕ್ಕೂ ಅಧಿಕ ಸಂಖ್ಯೆಯ ಸಾರ್ವಜ ನಿಕರು ಪಾಲ್ಗೊಂಡಿದ್ದು ವಿಶೇಷವಾ ಗಿತ್ತು ಕಾರ್ಯಕ್ರಮಕ್ಕೆ ಸೈಕಲ್ ಕ್ಲಬ್ ನಿರ್ದೇಶಕ ಡಾಕ್ಟರ್ ಹೆಚ್ ಎಮ್ ನಟರಾಜ್, ವಾಯುಪಡೆ ನಿವತ್ತ ಅಧಿಕಾರಿ ಹಾಗೂ ರಾಜ್ಯ ಲೆಕ್ಕಪತ್ರ ವಿಭಾಗದ ಮಾಜಿ ಜಯಿಂಟ್ ಅಂಕೋಲಾಜಿಸ್ಟ್ ಅವರುಗಳು ಹಸಿರು ನಿಶಾನೆ ತೋರಿಸಿದರು.
ಕುವೆಂಪುರ ರಸ್ತೆಯ ನಾರಾ ಯಣ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಿಂದ ಆರಂಭಗೊಂಡ ಸೈಕ್ಲೋ ಥಾನ್ ಉಶಷಾ ನರ್ಸಿಂಗ್ ಹೋಮ್, ವಿನೋಬನಗರ ಪೊಲೀಸ್ ಠಾಣೆ, ಆಲ್ಕೊಳ ಸರ್ಕಲ್, ಗೋಪಾಲ ಬಸ್ ನಿಲ್ದಾಣ, ಎನ್ ಟಿ ರಸ್ತೆ ಮೂಲಕ ಸಾಗಿ ಹರಕೆರೆಯ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಮಾಪ್ತಿಗೊಂಡಿತು.


ಈ ಸಂದರ್ಭದಲ್ಲಿ ಸಾರ್ವಜನಿ ಕರನ್ನು ಉದ್ದೇಶಿಸಿ ಮಾತನಾಡಿದ ಡಾ. ಅಪರ್ಣಾ ಶ್ರೀವತ್ಸ ಅವರು, ಕ್ಯಾನ್ಸರ್ ನ ಮುನ್ಸೂಚನೆ ಮತ್ತು ತಡೆಗಟ್ಟುವಿಕೆ ಕುರಿತು ಮಾತನಾಡಿ, ಕೆಲವರಲ್ಲಿ ಕ್ಯಾನ್ಸರ್ ಗೆ ಕಾರಣವೇ ನೆಂದು ತಿಳಿಯುವುದಿಲ್ಲ ಆದರೆ ಇದು ಯಾರಿಗಾದರೂ ಬರುವ ಸಾಧ್ಯತೆಗಳಿವೆ ಎಂದರಲ್ಲದೆ, ಅನಾರೋಗ್ಯಕರ ಗೆಡ್ಡೆ ಅನಿರೀಕ್ಷಿತ ರಕ್ತಸ್ರಾವ (ಮೂಗು, ಮೂತ್ರ ಅಥವಾ ಗುದದ್ವಾರದಿಂದ) ಕಂಡು ಬಂದರೆ ವೈದ್ಯಕೀಯ ಸಲಹೆ ಪಡೆ ಯುವುದು ಅಗತ್ಯ ವಿಶೇಷವಾಗಿ ೪೦ ವರ್ಷ ಮೇಲ್ಪಟ್ಟವರು ವರ್ಷ ಕೊಮ್ಮೆ ಕ್ಯಾನ್ಸರ್ ಕುರಿತು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಜಿಕಲ್ ಅಂಡ್ ಕಾಲೇಜ್ ವಿವೇಕ್ ಎಂ.ಏ.ಅವರು ಮಾತ ನಾಡಿ, ಧೂಮಪಾನ, ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿ, ಚಟುವಟಿಕೆ ಇಲ್ಲದ ಜೀವನ ಶೈಲಿ ಮುಂತಾದವು ಕ್ಯಾನ್ಸರ್ ರೋಗಕ್ಕೆ ಪ್ರಮುಖ ಕಾರಣಗಳು ಎಂದರಲ್ಲದೆ ಜನರು ಆರೋಗ್ಯಕರ ಆಹಾರ ಸೇವನೆ ನಿಯಮಿತ ವ್ಯಾಯಾಮ ಮತ್ತು ಶಿಸ್ತುಬದ್ಧ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು ಕೆಲವು ಕ್ಯಾನ್ಸರ್ ಗಳನ್ನು ಲಸಿಕೆ ಮೂಲಕ ಕೂಡ ತಡೆಗಟ್ಟಬಹುದು ಎಂದು ಕೂಡ ಸೂಚಿಸಿದರು.
ಸೈಕ್ಲನ್ನ ಸೌಂದರ್ಯ ಮತ್ತು ಪ್ರಯೋಜನ ಕುರಿತು ವಿವರಣೆ ನೀಡಿ ಮಾತನಾಡಿದ ಡಾಕ್ಟರ್ ಎಚ್ ಎಮ್ ನಟರಾಜ್ ಅವರು, ಸೈಕ್ಲಿಂಗ್ ಶಾರೀರಿಕ ಆರೋಗ್ಯದ ಒಂದು ಭಾಗವಾಗಿದೆ ಎಂದರಲ್ಲದೆ, ಕೆಲವರು ತಮಗೆ ಸೈಕ್ಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ ಆದರೆ ಇದು ಸುಳ್ಳು ಕಲ್ಪನೆ ಎಂದರ ಲ್ಲದೇ, ನಾನು ಕೂಡ ಈ ಇಳಿವ ಯಸ್ಸಿನಲ್ಲಿಯೂ ನಿರಂತರವಾಗಿ ಸೈಕ್ಲಿಂಗ್ ಮಾಡುತ್ತೇನೆ ಮತ್ತು ಆಗಿಂದಾಗೆ ನನ್ನ ಸ್ವಂತ ಊರಿಗೆ ಸೈಕಲ್ ನ ಹೋಗಿ ಬರುತ್ತೇನೆ ಎಂದು ಅಲ್ಲಿದ್ದ ಸಾರ್ವಜನಿಕರನ್ನು ಉರಿದುಂಬಿಸಿದರಲ್ಲದೆ ವಿಶೇ ವಾಗಿ ವೈದ್ಯರು ಸಹ ಸಾಧ್ಯವಾದಾಗ ಸೈಕ್ಲಿಂಗ್ ಮಾಡಬೇಕು ಅಥವಾ ಸೈಕಲ್ ಮೂಲಕ ತಮ್ಮ ಕರ್ತವ್ಯಕ್ಕೆ ತೆರಳುವಂತೆ ಕರೆ ನೀಡಿದರು.
ಅಂತಯೇ ಸೈಕ್ಲಿಂಗ್ ಕೇವಲ ಸಾರಿಗೆ ವಿಧಾನವಲ್ಲ ಇದು ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುವ ಒಂದು ಸುಂದರವಾದ ವಿಧಾನ ಎಂದು ವಿವರಿಸಿದರು.
ಸಮಾರಂಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ ಜನ್, ಡಾ. ಶ್ರೀವತ್ಸ ನಾಡಿಗ್, ಡಾ. ರವಿ ಕೆಆರ್, ಡಾ. ವಿಕ್ರಂ ಎಂಕೆ, ಡಾ. ರಾಮ ಸುಂದರ್ ಪ್ರಮುಖರಾದ ರಾಜಸಿಂಗ್, ಶೈಲೇಶ್, ವಿಜಯಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.