ವಿದ್ಯಾರ್ಥಿಗಳೌ ಕ್ರೀಡಾ ಮನೋಭಾವನೆ ಬೆಳಸಿಕೊಸಿಕೊಳ್ಳಿ…
ದಾವಣಗೆರೆ: ಇಲ್ಲಿನ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಹಾಗೂ ದಾವಣಗೆರೆ ವಿವಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಹಯೋಗದಲ್ಲಿ ಅಂತರ್ ಕಾಲೇಜುಗಳ ಟೇಬಲ್ ಟೆನ್ನಿಸ್ ಪುರುಷ ಮತ್ತು ಮಹಿಳಾ ಪಂದ್ಯಾವಳಿ ನಡೆಸಲಾಯಿತು.
ಪಂದ್ಯಾವಳಿಯನ್ನು ಟೇಬಲ್ ಟೆನ್ನಿಸ್ ತರಬೇತುದಾರ ಎ ಜೆ ಸಣ್ಣಕ್ಕಿ ಉದ್ಘಾಟಿಸಿದರು.
ನಂತರ ಮಾತನಾಡಿದ ದೇವರಾಜ್ ಅರಸು ವಿದ್ಯಾ ಸಂಸ್ಥೆಯ ಸಂಸ್ಥಾಪಕ ಪ್ರೊ| ಎನ್ ಲಿಂಗಣ್ಣ ಅವರು, ಕ್ರೀಡೆಗೆ ಇಂದು ಬಹಳ ಮಹತ್ವ ವಿದೆ. ವಿದ್ಯಾರ್ಥಿಗಳು ಕ್ರೀಡೆಗೆ ಮಹತ್ವವನ್ನು ನೀಡಬೇಕು. ಅಲ್ಲದೇ ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿ ಕೊಳ್ಳಬೇಕು. ಸ್ಪರ್ಧಾತ್ಮಕ ಭಾವನೆಯನ್ನು ಬಳಸಿಕೊಳ್ಳಬೇಕು. ಆಟವನ್ನು ದ್ವೇಷದ ಭಾವನೆಯಿಂದ ಆಡಬಾರದು. ಒಳ್ಳೆಯ ಮನಸ್ಸಿನಿಂದ ಆಡಿ ಅತ್ಯಂತ ಉತ್ಸಾಹ ದಿಂದ, ಖುಷಿಯಿಂದ ಈ ಕ್ರೀಡೆಗಳಲ್ಲಿ ಭಾಗವಹಿಸಿ ಡಿವಿಜನ್ ಮಟ್ಟಕ್ಕೆ, ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿ ಕಾಲೇಜಿಗೂ ಹಾಗೂ ವಿವಿಗೂ ಹೆಸರನ್ನು ತರಬೇಕೆಂದು ಕರೆ ನೀಡಿದರು.
ದಾವಣಗೆರೆ ವಿವಿ ಕ್ರೀಡಾಧಿಕಾರಿ ಡಾ|ವೀರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಂಶುಪಾಲ ಎಂ ಡಿ. ಅಣ್ಣಯ್ಯ , ಪ್ರಮುಖರಾದ ಅಂಜಿನಪ್ಪ ಡಿ. ಬಸವರಾಜ ವಿ ದಮ್ಮಳ್ಳಿ, ತ್ರಿವೇಣಿ, ಡಾ ರಾಕೇಶ್ ಬಿ ಸಿ. ಮೌನೇಶ್ವರ ಟಿ ಎನ್. ನಾಗರಾಜ ಎನ್. ಸುಮ,ಮಂಜುಳ ಎಂ ಎಸ್. ಗಣೇಶ, ಗೀತಾ ಪಾಟೇಲ್ ಬೋಧಕೇತರರಾದ ಷಣ್ಮುಖಪ್ಪ, ಶಾರದಮ್ಮ ಫಕ್ಕೀರಪ್ಪ, ಶಂಭು, ಮತ್ತು ವಿವಿಧ ಕಾಲೇಜುಗಳಿಂದ ಬಂದ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.