ಜಿಲ್ಲಾ ಸುದ್ದಿತಾಜಾ ಸುದ್ದಿ

ಓದುವ ಹವ್ಯಾಸ-ಬರೆಯುವ ಆಸಕ್ತಿ ಬೆಳೆಸಿಕೊಳ್ಳಿ…

Share Below Link

ಶಿವಮೊಗ್ಗ : ಬದಲಾಗುತ್ತಿರುವ ತಂತ್ರeನ ಯುಗದಲ್ಲಿ ಯುವ ಜನತೆ ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಎನ್.ಎಸ್.ಎಸ್. ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪುರಸ್ಕೃತ ಡಾ.ಬಲಕಷ್ಣ ಹೆಗಡೆ ತಿಳಿಸಿದರು.


ಇಲ್ಲಿಗೆ ಸಮೀಪದ ಹಾರನಹಳ್ಳಿ ಯಲ್ಲಿ ಪಿಇಎಸ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವ ಜನತೆ ಮತ್ತು ಮಾಧ್ಯಮ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಪ್ರಚಲಿತವಿರುವ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಪ್ರಕಾರಗಳಲ್ಲಿ ಅನೇಕ ಪರಿವರ್ತನೆ ಗಳಾಗಿವೆ. ವಿವಿಧ ರೀತಿಯ ಸುಧಾರಣೆಗಳಿಗೆ ಒಗ್ಗಿಕೊಂಡಿವೆ. ಯುವ ಸಮೂಹ ಇವುಗಳ ಕುರಿತು ಅರಿತುಕೊಳ್ಳುವ ಆಸಕ್ತಿ ತಳೆಯ ಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಕಾಲೇಜು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕೆಲಸಗಳೊಂದಿಗೆ ಸಮಾಜದಲ್ಲಿ ಆಗು ಹೋಗುವ ವಿಷಯಗಳ ಬಗ್ಗೆಯೂ ಕೊಂಚ ಗಮನ ಹರಿಸಬೇಕಾಗಿದೆ. ಅದಕ್ಕಾಗಿ ದಿನ ಸ್ವಲ್ಪ ಸಮಯವಾದರೂ ವೃತ್ತ ಪತ್ರಿಕೆ, ನಿಯತಕಾಲಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಬರೆವಣಿಗೆ ವ್ಯಾಕರಣದ ಬಗ್ಗೆಯೂ ಆಸಕ್ತಿ ಹೊಂದಿರುವುದು ಅವಶ್ಯವಾಗಿದೆ ಎಂದು ಹೇಳಿದರು.
ಪದವಿ ನಂತರ ಬದುಕು ಕಟ್ಟಿಕೊಳ್ಳಲು ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಜಲತಾಣಗಳನ್ನು ಸರಿಯಾಗಿ ಬಳಸಿಕೊಂಡು ಆಸಕ್ತಿಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಉದ್ಧೇಶ ಈಡೇರುತ್ತದೆ. ಸಾಮಾಜಿಕ ಜಲತಾಣಗಳ ಅತಿಯಾದ ಅವ ಲಂಬನೆಯಿಂದ ಓದುವ ಮತ್ತು ಬರೆಯುವ ಎರಡೂ ರೂಢಿ ಗಳಿಂದ ಯುವ ಜನತೆ ವಿಮುಖ ರಾಗುತ್ತಿzರೆ ಎಂದ ಅವರು ಜೀವನದಲ್ಲಿ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಲು ಓದಿನತ್ತ ಗಮನ ಹರಿಸಬೇಕು ಎಂದ ಸಲಹೆ ನೀಡಿದರು.
ಬರವಣಿಗೆ ಹವ್ಯಾಸವಿದ್ದರೆ ತಮ್ಮ ಶಿಕ್ಷಣದ ವೆಚ್ಚವನ್ನು ಪಾಲಕ ರಿಂದ ಭರಿಸಿಕೊಳ್ಳುವ ಬದಲು ತಾವೇ ಅದನ್ನು ಸಂಪಾದಿಸ ಬಹುದು. ಇದಕ್ಕಾಗಿ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಮುಕ್ತ ಅವಕಾಶಗಳು ಯುವ ಸಮೂಹ ವನ್ನು ಕೈಬೀಸಿ ಕರೆಯುತ್ತಿವೆ ಎಂದು ವಿವಿಧ ಉದಾಹರಣೆಗಳ ಮೂಲಕ ಅವರು ವಿವರಿಸಿದರು.
ಎನ್.ಎಸ್.ಎಸ್. ಕಾರ್ಯಕ್ರ ಮಾಧಿಕಾರಿ ಡಾ. ಪ್ರವೀಣಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರಂಜನ್, ಪ್ರೊ. ಕಾಂತರಾಜ, ಪ್ರೊ. ಶಿವಾನಿ, ಪ್ರೊ. ಅನು, ಪವನ ಮೊದಲಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿ ಸಿಂಚನಾ ಎಚ್.ಬಿ. ಸ್ವಾಗತಿಸಿದರು. ಹರ್ಷಿತಾ ಡಿ. ವಂದಿಸಿದರು. ಯಶಸ್ವಿನಿ ಎಂ.ಜಿ. ಕಾರ್ಯಕ್ರಮ ನಿರ್ವಹಿಸಿದರು.