ಕೃಷಿ ಮೇಳಕ್ಕೆ ಮೊದಲ ದಿನದಿಂದಲೇ ಹರಿದುಬರುತ್ತಿರುವ ಜನಸಾಗರ; ಸುಮಾರು ೨ ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ
ಶಿವಮೊಗ್ಗ : ಕೃಷಿ ಮತ್ತು ತೋಟಗಾರಿಕೆ ಮೇಳ ೨೦೨೫ರಲ್ಲಿ ಸುಮಾರು ೨೨೫ ಹೈಟೆಕ್ ಮಳಿಗೆ ಗಳು, ೧೫೦ ಎಕಾನಮಿ ಮಳಿಗೆಗಳು ೨೫ ಯಂತ್ರೋಪಕರಣ ಮಳಿಗೆ ಗಳು, ೪೦ ಆಹಾರ ಮಳಿಗೆಗಳು ಒಟ್ಟಾರೆಯಾಗಿ ಸುಮಾರು ೪೫೦ ಮಳಿಗೆಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಬಂಧಿತ ತಾಂತ್ರಿಕ ಮಾಹಿತಿಗಳು ಯಂತ್ರೋಪಕರಣಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಮೊದಲ ದಿನವಾದ ನಿನ್ನೆ ೫೦,೦೦೦ಕ್ಕೂ ಹೆಚ್ಚು ಸಾರ್ವಜನಿಕರು, ರೈತರು ಹಾಗೂ ವಿವಿಧ ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಈ ಮೇಳದಲ್ಲಿ ಭಾಗವಹಿಸಿ ಮಾಹಿತಿ ಪಡೆದರು. ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು ಕೂಡ ಗಮನ ಸೆಳೆದಿದ್ದು, ಪ್ರಮುಖವಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ-ಸೂಚನೆ ಹಾಗೂ ಅರಿವು ಮೂಡಿಸುವ ಮಳಿಗೆ ಮತ್ತು ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಹಕ್ಕುಗಳು ಮತ್ತು ಪರಿತ್ಯಕ್ತ ಮಕ್ಕಳಿಗೆ ಸರ್ಕಾರದ ಸಹಾಯಹಸ್ತದ ಅರಿವು ನೀಡುವ ಮಳಿಗೆ ಅಲ್ಲದೆ ಕೃಷಿಯಲ್ಲಿ ನೂತನ ಆವಿಷ್ಕಾರದ ಯಂತ್ರೋಪಕರಣ ಹಾಗೂ ಔಷಧಿ ಮಳಿಗೆಗಳು, ಅಣಬೆ ಕೃಷಿ, ತೆಂಗು, ಬಾಳೆ, ಅಡಿಕೆ, ಭತ್ತ ಮುಂತಾದ ಬೆಳೆಗಳ ಹಾಗೂ ವಿವಿಧ ಸಂಶೋಧನಾ ತಳಿಗಳ ಮಾದರಿ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ನಿನ್ನೆಯಿಂದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಬಗ್ಗೆ ಮತ್ತು ಮಾರುಕಟ್ಟೆಯ ಬಗ್ಗೆ ಉಪನ್ಯಾಸ ರ್ಪಡಿಸಲಾಗಿತ್ತು. ಸಾಧನೆಗೈದ ಪ್ರಗತಿಪರ ರೈತರನ್ನು ವೇದಿಕೆಯಲ್ಲಿ ಅಭಿನಂದಿಸ ಲಾಯಿತು.
ನ.೧೦ರ ವರೆಗೆ ನಡೆಯುವ ಈ ಕೃಷಿಮೇಳದಲ್ಲಿ ೨ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಯಿದ್ದು, ಕೃಷಿಕರು ಇದರ ಪ್ರಯೋಜನ ಪಡೆಯುವಂತೆ ಆಯೋಜಕರು ವಿನಂತಿಸಿzರೆ.





