ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ವನ್ನಿಕುಲ ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸಿ…

Share Below Link

ಶಿವಮೊಗ್ಗ : ವನ್ನಿಕುಲ ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಹಾಗೂ ೨ಎ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಕರುನಾಡು ರಾಜ್ಯ ವನ್ನಿಕುಲ ಕ್ಷತ್ರೀಯ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಟಿ.ಪೆರುಮಾಳ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ನಿಕುಲ ಕ್ಷತ್ರೀಯ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ ಸುಮಾರು ೪೫ ಲಕ್ಷ ಇದೆ. ನಮ್ಮ ಜಾತಿಯನ್ನು ೨-ಎಗೆ ಸೇರಿಸಬೇಕು ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿzವೆ. ಆದರೆ ನಮಗೆ ೨-ಎ ನೀಡದೆ ೩ -ಎನ ಇಟ್ಟಿzರೆ. ನಮ್ಮದು ತೀರಾ ಹಿಂದುಳಿದ ಜಾತಿಯಾಗಿದ್ದು, ಈ ಸಮಾಜಕ್ಕೆ ಗೌಂಡರ್, ಪಳ್ಳಿ, ವನ್ಯರ್, ಪಡೆಯಾಚ್ಚಿ ಉಪಜತಿಗಳು ಕೂಡ ಸೇರುತ್ತವೆ. ಈ ಯಾವ ಜಾತಿಗಳಿಗೂ ಇದೂವರೆಗೂ ನಿಗಮ ಮಂಡಳಿ ಇಲ್ಲ ಎಂದರು.


ಆದರೆ ನಮ್ಮ ಜಾತಿಯನ್ನು ತಿಗಳ ಜಾತಿಯ ಅಡಿಯಲ್ಲಿ ಸೇರಿಸಲಾಗುತ್ತಿದೆ. ಅವರ ಆಚಾರ- ವಿಚಾರಗಳೇ ಬೇರೆ. ನಮ್ಮ ಆಚಾರ- ವಿಚಾರಗಳೇ ಬೇರೆ. ನಮಗೂ ತಿಗಳರ ಜಾತಿಗೂ ಸಂಬಂಧವೇ ಇಲ್ಲ. ಅವರ ಜಾತಿಯಲ್ಲಿ ನಮ್ಮನ್ನು ಯಾವುದೇ ಕಾರಣಕ್ಕೂ ಸೇರಿಸ ಬಾರದು. ತಿಗಳರ ಜಾತಿ ಅಡಿಯಲ್ಲಿ ನಿಗಮ ಮಂಡಳಿ ಇದೆ, ಆದರೆ ನಮಗೂ ಅದಕ್ಕೂ ಸಂಬಂಧವಿಲ್ಲ. ನಮಗೆ ನಮ್ಮದೇ ಆದ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದರು.
ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ಮಾತನಾಡಿ, ನಮ್ಮ ಸಮಾಜದ ವೇದಿಕೆಗಳಿಗೆ ಸಂಬಂಧಪಟ್ಟಂತೆ ಶಾಸಕರಾದ ಶ್ರೀಮತಿ ಶಾರದಾ ಪೂರ್‍ಯಾನಾಯ್ಕ್ , ಎಸ್.ಎನ್. ಚನ್ನಬಸಪ್ಪ ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್ ಅವರು ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಿzರೆ. ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿzರೆ ಹಾಗಾಗಿ ಅವರೆಲ್ಲರಿಗೂ ನಮ್ಮ ಸಮಾಜದ ವತಿಯಿಂದ ಕೃತಜ್ಞತೆಗಳು ಎಂದರು.
ಆದರೆ ಗೋವಿಂದರಾಜು ಎಂಬುವರು ಅವರು ಶಾಸಕಿ ಶ್ರೀಮತಿ ಶಾರದಾ ಪೂರ್‍ಯಾನಾಯ್ಕ್ ಅವರ ಬಗ್ಗೆ ಹಗುರವಾಗಿ ಮಾತನಾಡಿzರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಬೇಡಿಕೆಗೆ ಅನುಗುಣವಾಗಿ ಸಮಾಜ ದವರ ಮನವಿಯ ಮೇರೆಗೆ ಶ್ರೀಮತಿ ಶಾರದಾ ಪೂರ್‍ಯಾನಾಯ್ಕ್ ಅವರು ಸದನದಲ್ಲಿ ಧ್ವನಿ ಎತ್ತಿzರೆ. ಅವರ ಬಗ್ಗೆ ಸಣ್ಣತನದ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದರು.
ನಿಗಮ ಮಂಡಳಿ ಸ್ಥಾಪಿಸುವುದರ ಜೊತೆಗೆ ನಮ್ಮ ಸಮಾಜಕ್ಕೆ ೨-ಎ ಮೀಸಲಾತಿ ನೀಡಬೇಕು. ರಾಜ್ಯದ ಎ ಕಡೆಗಳಲ್ಲಿ ೨-ಎ ಸರ್ಟಿಫಿಕೇಟ್ ನಿಡುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು. ಯಾವುದೇ ಕಾರಣಕ್ಕೂ ತಿಗಳರ ಜಾತಿಯೊಂದಿಗೆ ನಮ್ಮನ್ನು ಸಮೀಕರಿಸಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಶೋಕ್ ಎಂ., ಗೌರವಾಧ್ಯಕ್ಷ ಗೋಪಾಲ್ ಮತ್ತೂರ್, ಪದಾಧಿಕಾರಿಗಳಾದ ಮುರುಗನ್, ಮಾಣಿಕಂ, ರಾಜು ಇನ್ನಿತರರಿದ್ದರು