ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸದ್ದಿಲ್ಲದೇ ಹೆಚ್ಚುತ್ತಲೇ ಇದೆ ಕೋವಿಡ್: ಒಂದೇ ದಿನಕ್ಕೆ 6000 ಕೇಸ್ ಪತ್ತೆ

Share Below Link

ನವದೆಹಲಿ: ದಿನೇ ದಿನೇ ಕೋವಿಡ್ ಸೋಂಕಿನ ಏರಿಕೆ ಹಾಗೂ ಸಾವುಗಳ ಪ್ರಮಾಣವೂ ತೀವ್ರಗೊಳ್ಳುತ್ತಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯಗಳಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಜಗತಗೊಳಿಸುವಂತೆ ಸೂಚನೆ ನೀಡಿದೆ.
ಇಂದು ಬೆಳಗ್ಗೆ ಬಿಡುಗಡೆ ಮಾಡಲಾದ ದೈನಂದಿನ ವರದಿಯ ಪ್ರಕಾರ ಸೋಂಕಿನ ಪ್ರಮಾಣ ಆರು ಸಾವಿರ ಗಡಿ ದಾಟಿದೆ. ೨೦೩ ದಿನಗಳ ಬಳಿಕ ಈ ಪ್ರಮಾಣದ ಹೆಚ್ಚು ಸೋಂಕು ದಾಖಲಾಗಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.೩.೩೯ರಷ್ಟಿದೆ.
ಜೊತೆಯಲ್ಲಿ ಸಕ್ರಿಯ ಸೋಂಕಿನ ಪ್ರಕರಣಗಳು ೨೮,೩೦೩ ರಷ್ಟಾಗಿದೆ. ಆಘಾತಕಾರಿ ಎಂದರೆ ನಿನ್ನೆ ಒಂದೇ ದಿನ ೧೪ ಸಾವಿನ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಮೂರು, ಕರ್ನಾಟಕ, ರಾಜಸ್ತಾನದಲ್ಲಿ ತಲಾ ಎರಡು, ದೆಹಲಿ, ಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ ಮತ್ತು ಪಂಜಬ್ ನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದ್ದರೆ, ಕೇರಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ೧೦ ದಿನಗಳಿಂದ ಕೋವಿಡ್ -೧೯ ಪ್ರಕರಣಗಳು ಗಣನೀಯವಾಗಿ ಏರಿಕೆಯಾ ಗುತ್ತಿವೆ. ಒಟ್ಟು ಸೋಂಕಿನ ಪ್ರಕರಣಗಳು ಶೇ|೪.೪೭ರಷ್ಟಾಗಿವೆ. ೪,೪೭,೪೫,೧೦೪ ಮಂದಿಗೆ ಸೋಂಕು ತಗುಲಿದೆ. ೪,೪೧,೮೫,೮೫೮ ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಇದರ ಶೇಕಡಾವಾರು ಪ್ರಮಾಣ ಶೇ.೯೮.೭೫ರಷ್ಟಿದೆ. ಈವರೆಗೂ ಒಟ್ಟು ೫,೩೦೯೪೩ ಮಂದಿ ಸಾವನ್ನಪ್ಪಿದ್ದು, ಇದರ ಪ್ರಮಾಣ ಶೇ.೧.೧೯ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿದೆ.
ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಟ್ಟೆಚ್ಚರ ವಹಿಸಲು ಮುಂದಾಗಿದ್ದು, ಕೆಲ ರಾಜ್ಯಗಳಲ್ಲಿ ಮುಂಜಗತ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.