ಹಾಲಿನ ದರ ಏರಿಕೆ ಜೊತೆಯಲ್ಲಿ ಪಶು ಆಹಾರದ ಬೆಲೆ ನಿಯಂತ್ರಿಸಿ…
ಶಿವಮೊಗ್ಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಾಕಷ್ಟು ಚರ್ಚೆ ನಡೆಸಿ ಅಳೆದು-ತೂಗಿ ಆ.೧ರ ಇಂದಿನಿಂದ ಹಾಲಿನದರ ಏರಿಕೆ ಮಾಡಿರುವುದರಿಂದ ಗ್ರಾಹಕರಿಗೆ ಸ್ಪಲ್ಪ ಮಟ್ಟಿನ ಹೊರೆಯಾಗುತ್ತದೆ. ಆದರೆ, ಕಳೆದ ಕೆಲ ವರ್ಷಗಳಿಂದ ದೇಶದಾದ್ಯಂತ ಎ ಪದಾರ್ಥಗಳ ಬೆಲೆ ಹೆಚ್ಚಿದ್ದು, ಒಂದು ಲೀಟರ್ ನೀರಿನ ಬಾಟಲ್ ಬೆಲೆ ೨೦ರೂ. ಆಗಿದೆ. ಉತ್ಪದನಾ ವೆಚ್ಚ, ತೆರಿಗೆ ಹೆಚ್ಚಾಗಿದೆ. ಈ ಕಾರಣಗಳಿಂದ ದೇಶದ ಜನತೆ ಬೆಲೆ ಏರಿಕೆಗೂ ಹೊಂದಿಕೊಂಡು ಜೀವನ ಸಾಗಿಸುತ್ತಿzರೆ.
ಆದರೆ, ರೈತರು ಉತ್ಪಾದಿಸುವ ಅಮೃತಕ್ಕೆ ಸಮಾನವಾದ ಹಾಲು, ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಾದಾಗ ಜನ ಚರ್ಚೆ ಮಾಡುತ್ತಾರೆ. ಹಾಲಿನ ಬೆಲೆ ಮತ್ತೆ ಮತ್ತೆ ಹೆಚ್ಚಾಗಬಾರದೆಂದರೆ ಸರ್ಕಾರ ರೈತರಿಗೆ ಉತ್ಪದನಾ ವೆಚ್ಚ ಕಡಿಮೆ ಮಾಡಲು ಪಶು ಆಹಾರದ ಬೆಲೆ ನಿಯಂತ್ರಿಸಬೇಕಾಗಿದೆ. ಹಾಲಿನದರ ಹೆಚ್ಚಿಸುವಾಗ ಸಾಕಷ್ಟು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸರ್ಕಾರ ಪಶು ಆಹಾರದ ಬೆಲೆ ಹೆಚ್ಚಿಸುವಾಗ ಯಾವುದೇ ಚರ್ಚೆ ನಡೆಸದಿರುವುದು ವಿಪರ್ಯಾಸವಾಗಿದೆ ಎಂದು ನವಕರ್ನಾಟಕ ನಿರ್ಮಾಣ ವೇದಿಕೆ ರಾಜಧ್ಯಕ್ಷ ಗೋ. ರಮೇಶ್‌ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಪಶು ಆಹಾರದ ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಾದರೆ ಸರ್ಕಾರ ರೈತರಿಗೆ, ಹೈನುಗಾರರಿಗೆ ಪಶು ಆಹಾರಕ್ಕೆ ಸಬ್ಸಿಡಿ ನೀಡಿ ಪಶು ಆಹಾರದ ಬೆಲೆ ನಿಯಂತ್ರಿಸಬೇಕು ಅಥವಾ ರೈತರ ಉತ್ಪದನಾ ವೆಚ್ಚಕ್ಕೆ ತಕ್ಕಂತೆ ಯಾವುದೇ ಚರ್ಚೆ ಇಲ್ಲದೆ ಹಾಲಿನದರ ಏರಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ರೈತರು ಹೈನುಗಾರಿಕೆಯಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಹಾಲಿನದರ ಏರಿಕೆಯ ಜೊತೆಯಲ್ಲಿ ಪಶು ಆಹಾರದ ಬೆಲೆ ನಿಯಂತ್ರಿಸಬೇಕೆಂದು ನವಕರ್ನಾಟಕ ನಿರ್ಮಾಣ ವೇದಿಕೆ ರಾಜಧ್ಯಕ್ಷ ಗೋ. ರಮೇಶ್‌ಗೌಡ ಸರ್ಕಾರವನ್ನು ಒತ್ತಾಯಿಸಿzರೆ.