ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಲೇರಿಯ ಮುಕ್ತ ರಾಜ್ಯ ನಿರ್ಮಾಣಕ್ಕೆ ಸಹಕರಿಸಿ …

Share Below Link

ಶಿಕಾರಿಪುರ: ಮಲೇರಿಯಾ ಮುಕ್ತ ರಾಜ್ಯ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ತಾಲೂಕು ದಂಡಾಧಿಕಾರಿ ಶಂಕ್ರಪ್ಪ ನುಡಿದರು.
ಶಿಕಾರಿಪುರ ಖಾಸಗಿ ಬಸ್ ನಿಲ್ದಾಣದಲ್ಲಿ ವಿಶ್ವ ಮಲೇರಿಯ ದಿನಾಚರಣೆಯ ಜಗೃತಿ ಜಥಾ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ೨೦೨೫ನೇ ಸಾಲಿಗೆ ರಾಜ್ಯವನ್ನ ಶೂನ್ಯ ಮಲೇರಿಯಾದತ್ತ ಕೊಂಡೊಯ್ಯಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರ ಬಹಳ ಮುಖ್ಯ ಎಂದು ಕರೆ ನೀಡಿದರು.
ತಾಲೂಕು ಆರೋಗ್ಯಧಿಕಾರಿ ಡಾ| ನವೀನ್ ಖಾನ್ ಅವರು ಮಾತನಾಡಿ, ಇಂದು ರಾಜದ್ಯಂತ ವಿಶ್ವ ಮಲೇರಿಯ ದಿನ ಆಚರಿಸಲಾಗುತ್ತಿದ್ದು, ಆ ನಿ ಟ್ಟಿನಲ್ಲಿ ಸ್ಥಳೀಯ ಬಾಪೂಜಿ ಪ್ಯಾರ ಮೆಡಿಕಲ್ ಕಾಲೇಜ್ ಹಾಗೂ ರೋಟರಿ ಕ್ಲಬ್ ಕದಂಬ ಇವರ ನೆರವಿನೊಂದಿಗೆ ಇಂದು ತಾಲೂಕು ಮಟ್ಟದ ಜಗೃತಿ ಜಥ ಹಾಗೂ ಮಾಹಿತಿ ಸಭೆ ಏರ್ಪಡಿಸಿದೆ ಎಂದರು.
ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಮಲೇರಿಯಾ ಡೆಂಗು, ಚಿಕನ್ ಗುನ್ಯ ಆನೆಕಾಲು ರೋಗ, ಮೆದುಳು ಜ್ವರ ಮುಂತಾದವುಗಳಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದ ಅವರು, ಸ್ವಯಂ ರಕ್ಷಣಾ ವಿಧಾನಗಳು. ಜೈವಿಕ ಹಾಗೂ ರಾಸಾಯನಿಕ ವಿಧಾನಗಳಿಂದ ನಿಯಂತ್ರಣಕ್ಕೆ ಕರೆ ನೀಡಿದರು.
ತಾಲೂಕು ಆರೋಗ್ಯ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುರೇಶ್ ರವರು ಜೈವಿಕ ವಿಧಾನದ ಪ್ರತ್ಯಕ್ಷತೆಯನ್ನ ಗಪಿ ಮೀನು, ಲಾರ್ವ ಹಾಗೂ ಲಾರ್ವ ನಾಶಕ ಟೆಮಿಪಾಸನ್ನ ಬಳಸಿ ಪ್ರಾತ್ಯಕ್ಷತೆ ಮಾಡಿ ವಿವರಿಸಿದರು.
ಪ್ರಮುಖರಾದ ಪಾಪಯ್ಯ, ರಘು, ಶ್ರೀಮತಿ ಸೌಭಾಗ್ಯ, ತಾಜ್ ಫಿರ್ ಖಾನ್, ಜ್ಯೋತಿ ಕಿರಣ್, ಶ್ರೀಮತಿ ಮಮತಾ, ಮಂಜುನಾಥ್, ಶ್ರೀಮತಿ ಲಕ್ಷ್ಮಮ್ಮ, ಶ್ರೀಮತಿ ಶೀಲಾ ಕುಮಾರಿ, ಸುಮಾ, ಆಶಾ ಕಾರ್ಯಕರ್ತೆಯರು ಹಾಗೂ ಬಾಪೂಜಿ ಪ್ಯಾರ್ ಮೆಡಿಕಲ್ ಕಾಲೇಜಿನ ಶಿಕ್ಷಕ ವರ್ಗದವರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.