ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಿಕಾರಿಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ: ಗಜೇಂದ್ರ

Share Below Link

ಶಿಕಾರಿಪುರ: ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಹಲವು ವರ್ಷಗಳಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದು, ಕುಮಾರಸ್ವಾಮಿಯವರು ಶಿಕಾರಿಪುರದಿಂದ ಸ್ಪರ್ಧಿ ಸುವುದಾದಲ್ಲಿ ಇರುವ ಜಮೀನು ಮಾರಾಟ ಮಾಡಿ ಜಯಗಳಿಸಲು ಎಲ್ಲ ರೀತಿಯಲ್ಲಿ ಸಹಕರಿಸಲಿದ್ದೇನೆ ತಪ್ಪಿದಲ್ಲಿ ನನಗೆ ಸ್ಪರ್ಧಿಸಲು ಟಿಕೇಟು ನೀಡುವಂತೆ ಜೆಡಿಎಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸೇವಾ ಸಹಕಾರ ಸಂಘದ ನಿರ್ದೇಶಕ ಗಜೇಂದ್ರ ಮನವಿ ಮಾಡಿzರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ೩ ದಶಕದಿಂದ ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸಂಘಟನೆಗಾಗಿ ಶ್ರಮಿಸುತ್ತಿದ್ದು, ೨೦೦೮ರ ವಿಧಾನಸಭೆಯ ಚುನಾವಣೆಗೆ ಅಭ್ಯರ್ಥಿಯಾಗುವ ಆಸೆ ಹೊಂದಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರ ವಿರುದ್ದ ಬಂಗಾರಪ್ಪರವರು ಕಣದಲ್ಲಿದ್ದರು. ಆಗ ದೇವೇಗೌಡರ ಸಮಕಾಲೀನರಾದ ಬಂಗಾರಪ್ಪ ನವರಿಗಾಗಿ ದೇವೇಗೌಡರ ಮಾತಿಗೆ ಗೌರವ ನೀಡಿ ಹಿಂದೆ ಸರಿದಿದ್ದಾಗಿ ತಿಳಿಸಿದ ಅವರು, ೨೦೧೩ರ ಚುನಾವಣೆಯಲ್ಲಿ ಎಚ್.ಟಿ ಬಳಿಗಾರ್‌ರವರಿಗೆ ಪಕ್ಷದಿಂದ ಟಿಕೇಟು ಘೋಷಣೆಯಾಯಿತು. ನಂತರ ೨೦೧೮ರ ಚುನಾವಣೆಯಲ್ಲಿಯೂ ಪುನಃ ಎಚ್.ಟಿ ಬಳಿಗಾರ್ ರವರಿಗೆ ಟಿಕೆಟ್ ನೀಡಲಾಯಿತು. ಹೀಗೆ ಪಕ್ಷದಿಂದ ಟಿಕೇಟ್ ನೀಡಿದವರಿಗೆ ೨೦೦೮ ರಿಂದಲೂ ಅವರ ಪರವಾಗಿ ಪ್ರಾಮಾಣಿಕವಾಗಿ ಗೆಲುವಿಗಾಗಿ ಶ್ರಮಿಸಿದ್ದು ಪ್ರಸಕ್ತ ಚುನಾವಣೆ ಯಲ್ಲಿ ಜೆಡಿಎಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದರು.
ಕ್ಷೇತ್ರದಿಂದ ಹಲವು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನ ಪಟ್ಟರೂ, ಪಕ್ಷದ ಹಿತಕ್ಕಾಗಿ ವರಿಷ್ಠರ ಮಾತಿಗೆ ಗೌರವ ನೀಡಿ ತ್ಯಾಗ ಮಾಡಿದ್ದೇನೆ. ೩ ದಶಕದಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಪಕ್ಷದ ಕಾರ್ಯಕರ್ತನಾಗಿ ತಾಲೂಕಿನಲ್ಲಿ ನೊಂದವರಿಗೆ ಸಾಂತ್ವನ ಹೇಳುತ್ತಾ, ರೈತರ ಪರವಾಗಿ ಹೋರಾಟ, ಹಲವು ಸಮಸ್ಯೆಗಳಿಂದ ಪೊಲೀಸ್ ಠಾಣೆ, ತಾಲೂಕು ಕಛೇರಿ ಮೆಟ್ಟಲೇರಿದವರ ಪರವಾಗಿ ನಿಂತು ನ್ಯಾಯ ಕೊಡಿಸಿದ್ದೇನೆ ನನಗೆ ಜನಬೆಂಬಲವಿದೆ ಎಂದರಲ್ಲದೇ, ಅಲ್ಲದೇ ತಾಲೂಕಿನಲ್ಲಿ ಲಿಂಗಾಯತರ ಮತ ಹೆಚ್ಚಾಗಿದ್ದು, ಜತಿವಾರು ಮತ ಪಡೆಯಲಿದ್ದೇನೆ. ಈ ದಿಸೆಯಲ್ಲಿ ನನಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕುಮಾರಸ್ವಾಮಿ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.
ಈ ಬಾರಿ ಶಿಕಾರಿಪುರ ಕ್ಷೇತ್ರ ದಿಂದ ಎಚ್.ಡಿ ಕುಮಾರಸ್ವಾಮಿ ಸ್ಪರ್ಧಿಸಲು ಇಚ್ಚಿಸಿದಲ್ಲಿ ನನ್ನ ಹೆಸರಿನಲ್ಲಿರುವ ಎಕರೆ ಜಮೀನು ಮಾರಾಟ ಮಾಡಿ ಬಂದ ಹಣ ದಿಂದ ಅವರ ಪರವಾಗಿ ಮತದಾರರ ಬಳಿ ಮತ ಬಿಕ್ಷೆ ಬೇಡಿ ಗೆಲ್ಲಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಜಿ ಪ್ರಧಾನ ಕಾರ್ಯದರ್ಶಿ ರಾಮಾನಾಯ್ಕ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಶೇಖರಪ್ಪ, ಮುಖಂಡ ಹನುಮಂತಪ್ಪ, ಆನಂದಪ್ಪ ಉಪಸ್ಥಿತರಿದ್ದರು.