ಕಾನೂನು ಉಲ್ಲಂಘಿಸಿ ವಾಣಿಜ್ಯ ಕಟ್ಟಡ ನಿರ್ಮಾಣ : ಕ್ರಮಕ್ಕೆ ಆಯುಕ್ತರಿಗೆ ಮನವಿ
ಶಿವಮೊಗ್ಗ: ಕಾನೂನು ಉಲ್ಲಂಘಿಸಿ ನಗರದ ಮಿಳ್ಳಘಟ್ಟ ಮುಖ್ಯ ರಸ್ತೆ ಅಣ್ಣ ನಗರದ ನಾಲ್ಕನೇ ತಿರುವು ಬಲ ಭಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನದ ಪ್ರಾಧಿಕಾರ ಜಿ ಸದಸ್ಯೆ ಬಿ.ಎ. ಅರ್ಚನಾ ನಿರಂಜನ್ ಆರೋಪಿಸಿದರು.
ರಾಜಕಾಲುವೆ ಒಡೆದು ಹಾಕಿರುವ ಪರಿಣಾಮ ಕಸ ಕಡ್ಡಿ ಗಲೀಜು ತುಂಬಿಕೊಂಡು ಸಾಂಕ್ರಾಮಿಕ ಕಾಯಿಲೆಗೆ ಅಹ್ವಾನ ವಾಗಿದೆ ಹಾಗಾಗಿ ಇದರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವಂತೆ ಆಯಕ್ತರಿಗೆ ಮನವಿ ಮೂಲಕ ಒತ್ತಾಯಿಸಿದರು.
ವಾಣಿಜ್ಯ ಕಟ್ಟಡವು ನೀಲಿ ನಕ್ಷೆ ಯಲ್ಲಿ ತೋರಿಸಿರುವಂತೆ ನಿರ್ಮಾಣ ಮಾಡದೇ, ಅಕ್ಕ-ಪಕ್ಕ ಒತ್ತವರಿ ಮಾಡಿಕೊಂಡು, ಯಾವುದೇ ರೀತಿ ಪಾರ್ಕಿಂಗ್ ಸ್ಥಳಾವಕಾಶ ಬಿಡದೆ ನಿರ್ಮಿಸಲಾ ಗುತ್ತಿದೆ, ರಸ್ತೆಯಲ್ಲಿ ಮರಳು, ಜಲ್ಲಿ ಕಲ್ಲು ಹಾಗೂ ಸಿಮೆಂಟ್ ಬ್ರಿಕ್ಸ್‌ನ್ನು ಎಂದರಲ್ಲಿ ಹಾಕಿರುವುದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯರಿಗೆ ಓಡಾಡಲು ತೊಂದರೆ ಯಾಗುತ್ತಿದೆ ಎಂದು ದೂರಿದರು.



