ತಾಜಾ ಸುದ್ದಿರಾಜಕೀಯ

ಕ್ಷೇತ್ರದ ಮತದಾರರು ನನ್ನ ದೇವರು…

Share Below Link

ಅಥಣಿ: ನನ್ನ ಕ್ಷೇತ್ರದ ಮತದಾರರು ನನ್ನ ದೇವರು ಆದ್ದರಿಂದ ಒಟ್ಟಾರೆಯಾಗಿ ಎ ಸಮುದಾಯಗಳ ಅಭಿಪ್ರಾಯದ ಮೇರೆಗೆ ನಾನು ಚುನಾವಣೆಗೆ ಪಕ್ಷದ ಟಿಕೆಟ್ ಕೇಳಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧಾರವನ್ನು ಮಾ. ೨೭ರೊಳಗಾಗಿ ಮಾಡುವುದಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ವಿವಿಧ ಗ್ರಾಮ ಗಳಲ್ಲಿ ರಸ್ತೆ ಮತ್ತು ಸಮುದಾಯ ಭವನಗಳಿಗೆ ಸುಮಾರು ೧೬ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಜನರ ಒತ್ತಾಯದ ಮೇರೆಗೆ ನಾನು ವಿವಿಧ ಸಮುದಾಯಗಳ ಜನಾಭಿಪ್ರಾಯ ಸಂಗ್ರಹಿಸಿ ಜನರ ನಿರ್ಧಾರದ ಮೇರೆಗೆ ಟಿಕೆಟ್ ಕುರಿತು ನಿರ್ಧಾರಿಸುವೆ ಎಂಬುದಷ್ಟೆ ನನ್ನ ಹೇಳಕೆಯಾಗಿತ್ತು. ಈ ನನ್ನ ಹೇಳಿಕೆ ಯನ್ನ ಜಾರಕಿಹೋಳಿ ಅವರು ತಪ್ಪಾಗಿ ಅಪಾರ್ಥ ಮಾಡಿಕೊಂಡಿ zರೆ. ನಾನು ಎಲ್ಲಿಯೂ ಟಿಕೆಟ್ ಬೇಕು ಎಂದು ಈವರೆಗೆ ಹೇಳಿಲ್ಲ, ಅವರು ಸಹ ಹಿರಿಯರು, ಪ್ರಭುದ್ಧರು ಜಿಯಲ್ಲಿ ಸಾಹುಕಾರ ಅಂತಾ ಹೆಸರು ಮಾಡಿದವರು. ಅವರ ಹೇಳಿಕೆ ಕುರಿತು ನಾನು ಯಾವುದೇ ಟೇಕೆ ಟಿಪ್ಪಣೆ ಮಾಡಲು ಹೋಗುವದಿಲ್ಲ ಎಂದರು.
ಎಲ್ಲವೂ ಜನರ ಅಭಿಪ್ರಾಯಕ್ಕೆ ಬಿಟ್ಟಿರುವೆ. ಅವರು ಕೇಳು ಅಂದರೆ ಕೇಳುವೆ, ಇಲ್ಲ ಅಂದರೆ ಇಲ್ಲ ಅಷ್ಟೇ ಎಂಬುದು ನನ್ನ ಹೇಳಿಕೆ ಆಗಿತ್ತು ಎಂದು ಸಮಜಾಯಿಸಿ ನೀಡಿದರು.
ಪಶುವೈದಕೀಯ ಕಾಲೇಜು ಉದ್ಘಾಟನೆಗೆ ಕೇಂದ್ರದ ಹಲವು ಸಚಿವರು ಬರಬೇಕು ಎಂಬ ನೀರಿಕ್ಷೆ ಇದೆ. ಕೇಂದ್ರ ಸರಕಾರದ ಅನುಮತಿ ನೀರಿಕ್ಷೆಯಲ್ಲಿರುವೆ, ಅದು ಬಂದ ಮೇಲೆ ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ ಮುಗಿದ ತಕ್ಷಣ ಆದಷ್ಟು ಬೇಗ ಪ್ರಾರಂಭಿಸಲಾಗುವುದು ಎಂದರು.
ಪ್ರಮುಖರಾದ ಪ್ರದೀಪ ನಂದಗಾಂವ, ಸಿದ್ದರಾಯ ನಾಯಕ, ಶ್ರೀಶೈಲ ನಾಯಕ, ತಿಪ್ಪಣ್ಣ ಭಜಂತ್ರಿ, ಶಿವರುದ್ರ ಗೂಳಪ್ಪನವರ, ಶ್ರೀಶೈಲ ಹಳದಮಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.