ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅಶಾಂತಿ ಸೃಷ್ಠಿಗೆ ಸಂಚು: ವಿಹಿಂಪ- ಬಜರಂಗದಳ ಗಂಭೀರ ಆರೋಪ…

Share Below Link

ಶಿವಮೊಗ್ಗ: ಸಂವಿಧಾನ ವಿರೋಧಿ ಹೋರಾಟದಿಂದಾಗಿ ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಿ ಶಿವಮೊಗ್ಗದ ಸಾರ್ವಜನಿ ಕರಿಗೆ ತೊಂದರೆ ಕೊಡಲು ಸಂಚು ರೂಪಿಸುತ್ತಿzರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇಂದು ಜಿಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿತು.
ಮಾ.೧೭ರ ಶುಕ್ರವಾರದಂದು ಜಿಹಾದಿ ಮತಾಂದ ಮನಸ್ಥಿತಿ ಇರುವ ಸಂಘಟನೆಯು ಸಂವಿಧಾನ ನೀಡಿರುವ ಹೋರಾಟದ ಹಕ್ಕಿನ ಷರತ್ತುಗಳನ್ನು ಉಲ್ಲಂಘಿಸಿದೆ. ಸಂವಿಧಾನ ವಿರೋಧಿ ಹೋರಾಟ ವನ್ನು ಮಾಡಿ ಸಮಾಜದ ಶಾಂತಿ ಯನ್ನು ಕೆಡಿಸಲು ಸಂಚು ರೂಪಿ ಸುವ ಉದ್ದೇಶದಿಂದ ಅಸಂವಿಧಾ ನಿಕವಾದ ಮಾರ್ಗವಾಗಿ ಹಾಗೂ ಅಧರ್ಮಿಯವಾಗಿ ಜಿ ಕೇಂ ದ್ರವಾಗಿರುವ ಜಿಧಿಕಾರಿಯ ಕಚೇರಿ ಆವರಣದ ಆಜನ್ ಕೂಗಿರುವುದು ಅಕ್ಷಮ್ಯ ಅಪರಾ ಧವಾಗಿದೆ.

ಈ ಮನಸ್ಥಿತಿ ಇರುವ ಸಂಘಟನೆಯವರು ಪದೇ ಪದೇ ಈ ರೀತಿಯ ಘಟನೆಗಳನ್ನು ಉದ್ದೇಶಪೂರ್ವಕವಾಗಿ ಮಾಡಿ ಮಲೆನಾಡಿನಲ್ಲಿ ಅಶಾಂತಿ ಸೃಷ್ಟಿ ಸಲು ಈ ರೀತಿಯ ವರ್ತನೆ ಮಾಡುತ್ತಿದ್ದು, ಜಿಡಳಿತ ಸೂಕ್ಷ್ಮವಾಗಿ ಗಮನಿಸಿ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು.
ಸದರಿ ಘಟನೆಗೆ ಸಂಬಂಧಿಸಿದಂತೆ ಅಧರ್ಮೀಯವಾಗಿ ನಡೆದ ಮತ್ತು ಈ ಘಟನೆಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳನ್ನು ಹಾಗೂ ಜಿಯ ಶಕ್ತಿಕೇಂದ್ರವಾದ ಜಿಡಳಿತ ಕಚೇರಿ ಆವರಣದಲ್ಲಿ ಅಸಂವಿಧಾನಿಕವಾಗಿ ಆಜನ್ ಕೂಗಿದ ವ್ಯಕ್ತಿಯನ್ನು ಮತ್ತು ಕೂಗಿಸಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಮತ್ತು ಸಂವಿಧಾನಕ್ಕೆ ಹಾಗೂ ಕಾನೂನಿಗೆ ಬೆಲೆ ಕೊಡದ ಗೌರವ ನೀಡದ ದೇಶ ವಿರೋಧಿಗಳನ್ನು ಕೂಡಲೇ ಜಿಡಳಿತ ಗಡಿಪಾರು ಮಾಡಿ ಇಂತಹ ಘಟನೆಗಳು ಮರು ಕಳಿಸದಂತೆ ಎಚ್ಚರವಹಿಸಬೇಕೆಂದು ಆಗ್ರಹ ಪಡಿಸಿದರು.
ಇದೇ ಸಂದರ್ಭದಲ್ಲಿ ಆಜನ್ ಕೂಗಿದ ಜಿಡಳಿತದ ಆವರಣ ದಲ್ಲಿ ಹಿಂದೂ ಸಂಘಟನೆ ಕಾರ್ಯ ಕರ್ತರು ಗೋಮೂತ್ರ ಹಾಕಿ ಶುದ್ಧೀಕರಿಸಲು ಪ್ರಯತ್ನಿಸಿದರು. ಪೊಲೀಸರು ತಡೆಯಲು ಯತ್ನಿಸಿದ ಘಟನೆಯೂ ನಡೆಯಿತು.
ಈ ಸಂದರ್ಭದಲ್ಲಿ ಬಜರಂಗ ದಳದ ವಿಭಾಗ ಸಂಚಾಲಕ ರಾಜೇಶ್‌ಗೌಡ, ದೀನ್‌ದಯಾಳ್, ವಿಹೆಚ್‌ಪಿ ಜಿಧ್ಯಕ್ಷ ವಾಸು ದೇವ್, ಕಾರ್ಯದರ್ಶಿ ನಾರಾ ಯಣ್ ವರ್ಣೇಕರ್, ಪ್ರಮುಖ ರಾದ ರಮೇಶ್‌ಬಾಬು, ಅಂಕೂಶ್, ನಾಗೇಶ್, ಸುರೇಶ್ ಬಾಬು, ನಟರಾಜ್, ಸಚಿನ್ ರಾಯ್ಕರ್ ಮತ್ತಿತರರಿದ್ದರು.