ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ…

Share Below Link

ಶಿವಮೊಗ್ಗ : ಪ್ರಕೃತಿಯ ಮಡಿಲು ಸರ್ವರನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ. ಆದ್ದರಿಂದ ಪ್ರಕೃತಿ ಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದು ಎಂದು ಯೂತ್ ಹಾಸ್ಟೆಲ್ ರಾಷ್ಟ್ರೀಯ ಉಪಾಧ್ಯಕ್ಷ ಮೈಸೂರಿನ ರವಿಕುಮಾರ್ ಹೇಳಿದರು.
ಪ್ರತಿಯೊಬ್ಬರು ಅರೋಗ್ಯ ದಿಂದ ಇರಲು ವ್ಯಾಯಾಮ, ಚಾರಣ, ಸೈಕ್ಲಿಂಗ್ ಅತಿ ಮುಖ್ಯ. ಈ ನಿಟ್ಟಿನಲ್ಲಿ ಯೂತ್ ಹಾಸ್ಟೆಲ್ ಅತ್ಯಂತ ಕಡಿಮೆ ಖರ್ಚನಲ್ಲಿ ಸುರಕ್ಷಿತವಾಗಿ ಹಾಗೂ ಅತ್ಯುತ್ತಮ ಪ್ರದೇಶಗಳಿಗೆ ದೇಶದ್ಯಾಂತ ವರ್ಷ ವೀಡಿ ಕಾರ್ಯಕ್ರಮ ಹಮ್ಮಿಕೊಳ್ಳು ತ್ತಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಚೇರ್‍ಮನ್ ವಾಗೇಶ್, ೧೧೫ ವರ್ಷ ಗಳ ಇತಿಹಾಸ ಇರುವ ಯೂತ್ ಹಾಸ್ಟೆಲ್ ಜೆರ್ಮನಿಯಲ್ಲಿ ಪ್ರಾರಂಭ ಗೊಂಡು, ನಲವತ್ತು ವರ್ಷಗಳ ನಂತರ ಭಾರತದ ಮೈಸೂರಿನಲ್ಲಿ ಪ್ರಾರಂಭಗೊಂಡಿತು. ಈ ಸಂಸ್ಥೆ ಇಂದಿಗೆ ೭೫ ವರ್ಷ ಆಗಿದೆ. ಈ ಸಂದರ್ಭದಲ್ಲಿ ನಮ್ಮ ಘಟಕ ೭೫ ಸಮಾರಂಭ ಏರ್ಪಡಿಸಲು ತೀರ್ಮಾನಿಸಿದೆ. ದೇಶದಲ್ಲಿ ಸದಸ್ಯತ್ವದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದ್ದು, ನಾವೆಲ್ಲರೂ ಸೇರಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎನ್. ಗೋಪಿನಾಥ್ ಮಾತನಾಡಿ, ರಾಷ್ಟೀಯ ಕಾರ್ಯಕ್ರಮಗಳಲ್ಲಿ ನಮ್ಮ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ವಿದೇಶ ಪ್ರವಾಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಶ್ರೀಲಂಕಾಕ್ಕೆ ಪ್ರವಾಸ ಏರ್ಪಡಿಸಲಾಗಿದೆ. ಇತರೆ ದೇಶಗಳಿಗೂ ಕಡಿಮೆ ಖರ್ಚಿನಲ್ಲಿ ಏರ್ಪಡಿಸಬೇಕು ಎಂದರು.
ಮಾಜಿ ರಾಜ್ಯ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತಾನಾಡಿ, ಹಿಮಾಲಯದಲ್ಲಿ ಇರುವಷ್ಟು ಅವಕಾಶ, ನಮ್ಮ ಪಶ್ಚಿಮ ಘಟ್ಟಗಳಲ್ಲು ಚಾರಣಕ್ಕೆ ಉತ್ತಮ ಅವಕಾಶ ಇದೆ. ಈ ನಿಟ್ಟಿನಲ್ಲಿ ಗಮನಹರಿಸಿದರೆ ರಾಜ್ಯ ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿ ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ತಿಳಿಸಿದರು.
ಡಾ. ಪ್ರಕೃತಿ ಮಂಚಾಲೆ, ಭಾರತಿ ಗುರುಪಾದಪ್ಪ, ಮಲ್ಲಿಕಾರ್ಜುನ್, ದಿಲೀಪ್ ನಾಡಿಗ್, ನಾಗರಾಜ್, ಸತೀಶ್, ಗೋಪಮ್ಮ, ಪರಶಿವಮೂರ್ತಿ ಇದ್ದರು.