ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಆರ್‌ಎಸ್‌ಎಸ್ ಸುದ್ದಿಗೆ ಬಂದರೆ ಕಾಂಗ್ರೆಸ್ ಜೀವ ಕಳೆದುಕೊಳ್ಳುತ್ತೆ…

Share Below Link

ಶಿವಮೊಗ್ಗ : ಆರ್‌ಎಸ್‌ಎಸ್ ಸುದ್ದಿಗೆ ಬಂದರೆ ಕಾಂಗ್ರೆಸ್ ಜೀವ ಕಳೆದುಕೊಳ್ಳುತ್ತೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಈಶ್ವರಪ್ಪ ಕಾಂಗ್ರೆಸ್ ನಾಯಕರುಗಳಿಗೆ ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿದರು.
ಕಾಂಗ್ರೆಸ್ ನಾಯಕರಾದ ಪ್ರಿಯಾಂಕ ಖರ್ಗೆ, ಹರಿಪ್ರಸಾದ್, ಮುಂತಾದವರು ಆರ್.ಎಸ್. ಚಟುವಟಿಕೆಗಳನ್ನು ಸರ್ಕಾರಿ ಜಗಗಳಲ್ಲಿ ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿzರೆ. ಇವರ ಈ ಹೇಳಿಕೆಗಳು ಹುಚ್ಚು ಹೇಳಿಕೆಗಳಾಗಿವೆ. ತಾಕತ್ತಿದ್ದರೆ ಆರ್.ಎಸ್.ಎಸ್. ಸುದ್ದಿಗೆ ಬನ್ನಿ ಅದನ್ನು ನಿಷೇಧಿಸಿ ನೋಡೋಣ ಎಂದು ಸವಾಲು ಹಾಕಿದರು.
ಆರ್‌ಎಸ್‌ಎಸ್‌ನಿಂದ ಬಂದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರಮೋದಿ ಮುಂತಾದವರು ಈ ದೇಶದ ಪ್ರಧಾನ ಮಂತ್ರಿ ಗಳಾಗಿzರೆ. ರಾಷ್ಟ್ರಪತಿ-ಉಪರಾಷ್ಟ್ರಪತಿಗಳೂ ಆಗಿzರೆ ಎಂದರು.
ಈ ಹಿಂದಿನ ಪ್ರಧಾನ ಮಂತ್ರಿ ಗಳಾಗಿದ್ದ ನೆಹರೂ, ಇಂದಿರಾಗಾಂಧಿಯವರು ಸಂಘವನ್ನು ನಿಷೇಧಿಸಲು ಹೋಗಿ ಮುಖಭಂಗಕ್ಕೆ ಒಳಗಾಗಿದ್ದನ್ನು ಪ್ರಿಯಾಂಕ ಖರ್ಗೆ, ಹರಿಪ್ರಸಾದ್ ಮರೆತಂತೆ ಇದೆ. ಪ್ರಿಯಾಂಕಖರ್ಗೆ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದನ್ನು ಸಿದ್ಧರಾಮಯ್ಯ ಅವರು ಹರಿದು ಬಿಸಾಕಬೇಕಿತ್ತು. ಆದರೆ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿ, ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಅವರ ಬುದ್ಧಿಗೇಡಿತನ ತೋರಿಸುತ್ತದೆ, ಮುಖ್ಯಮಂತ್ರಿ ಹುz ಕಳೆಯ ಲೆಂದೇ ಖರ್ಗೆ ಈ ಉಪಾಯ ಹೂಡಿzರೆ ಇದನ್ನು ಸಿಎಂ ಅರಿತುಕೊಂಡು ಖರ್ಗೆ ಕರೆದು ಛೀಮಾರಿ ಹಾಕಬೇಕು ಎಂದರು.