ಪರಿಸರ ದಸರಾದಲ್ಲಿ ಪರೋಪಾಕರಂ ಕುಟುಂಬಕ್ಕೆ ಅಭಿನಂದನೆ…
ಶಿವಮೊಗ್ಗ: ಕೇವಲ ಸರ್ಕಾರ ಹಾಗೂ ನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದಷ್ಟೇ ಪರಿಸರ ಸಂರಕ್ಷಣೆ, ಸ್ವಚ್ಛತೆ ಕಷ್ಟ ಸಾಧ್ಯ. ಸಂಘ- ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಪರಿಸರವನ್ನು ಸಂರಕ್ಷಿಸಲು, ನಗರವನ್ನು ಸ್ವಚ್ಛವಾಗಿಡಲು ಸಾಧ್ಯ. ಈ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದರ ಲ್ಲೂ ಪರೋಪಕಾರಂ ಕುಟುಂಬವು ನಡೆಸುತ್ತಿರುವ ಕಾರ್ಯ ಜನರ ಮೆಚ್ಚುಗೆ ಗಳಿಸಿದ್ದು, ಸಾರ್ವಜ ನಿಕರು ಸ್ವ ಇಚ್ಛೆಯಿಂದ ಈ ಕುಟುಂ ಬದ ಸದಸ್ಯರಾಗಿ ಕೆಲಸ ಮಾಡು ತ್ತಿzರೆ ಎಂದು ಶಾಸಕ ಎಸ್.ಎನ್. ಚೆನ್ನಬಸಪ್ಪ (ಚೆನ್ನಿ) ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ವತಿಯಿಂದ ದಸರಾ ಮಹೋತ್ಸವ ಅಂಗವಾಗಿ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂ ಡಿದ್ದ ಪರಿಸರ ದಸರಾ ಕಾರ್ಯ ಕ್ರಮದಲ್ಲಿ ಪರೋಪಕಾರಂ ಕುಟುಂ ಬವನ್ನು ಸೋಮವಾರ ಸಂಜೆ ಅಭಿನಂದಿಸಿ ಸಾಂದರ್ಭಿಕವಾಗಿ ಅವರು ಮಾತನಾಡಿದರು.
ಪಾಲಿಕೆಯಲ್ಲಿ ಪೌರ ಕಾರ್ಮಿ ಕರ ಕೊರತೆ ಇದೆ. ಇರುವಷ್ಟು ಸಿಬ್ಬಂದಿಯನ್ನೇ ಬಳಸಿಕೊಂಡು ಸಾಧ್ಯವಾದಷ್ಟರ ಮಟ್ಟಿಗೆ ನಗರ ದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾ ಗುತ್ತಿದೆ. ಪಾರ್ಕ್‌ಗಳು ನಗರದ ಆಕ್ಸಿಜನ್ ಬ್ಯಾಗ್‌ಗಳಿದ್ದಂತೆ. ಪಾಕ್ ಗಳ ಸ್ವಚ್ಛತೆ, ನಿರ್ವಹಣೆ ಹಾಗೂ ಅಲ್ಲಿರುವ ಗಿಡ- ಮರಗಳ ಸಂರ ಕ್ಷಣೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪರೋಪಕಾರಂ ಕುಟುಂ ಬವು ನಡೆಸುತ್ತಿರುವ ಕಾರ್ಯ ಅನುಕರಣೀಯವಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಅಡಿ ನಗರದ ವಿವಿಧ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮಕ್ಕಳಿಗೆ ಆಟಿಕೆಗಳು, ವ್ಯಾಯಾಮ ಸಲಕರ ಣೆಗಳನ್ನು ಅಳವಡಿಸಲಾಗಿದ್ದು, ನಾಗರೀಕರು ಮತ್ತು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿ zರೆ. ಇದರೊಂದಿಗೆ ಸಾರ್ವಜನಿ ಕರು ಸಂಘ- ಸಂಸ್ಥೆಗಳೊಂದಿಗೆ ಸೇರಿಕೊಂಡು ಪಾರ್ಕ್‌ಗಳ ನಿರ್ವಹಣೆಗೂ ಸಹಕರಿಸಬೇಕೆಂದು ಕೋರಿದರು.
ಪರೋಪಕಾರಂ ಕುಟುಂಬದ ಶ್ರೀಧರ್ ಎನ್.ಎಂ. ಮಾತನಾಡಿ ಪರೋಪಕಾರಂ ಕುಟುಂಬದಲ್ಲಿ ಯಾವುದೇ ಜತಿ, ಧರ್ಮ, ಮತ ಬೇಧವಿಲ್ಲ. ಹಣಕಾಸಿನ ವ್ಯವಹಾ ರವಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ ನಂತಹ ಮತ್ತಿತರೆ ಪದವಿ, ಅಧಿಕಾರ ಸಹ ಇಲ್ಲಿಲ್ಲ. ಸಮಾನ ಮನಸ್ಕರು ಮಾನವ ಜನ್ಮದ ಸಾರ್ಥಕತೆ ಹಾಗೂ ಆಧ್ಯಾತ್ಮದ ಉನ್ನತಿಗಾಗಿ ಸಾಮಾ ಜಿಕ ಸೇವೆ ಮಾಡುವ ಸದುದ್ದೇಶದ ಗುರಿ ಹೊಂದಲಾಗಿದೆ ಎಂದರು.
ಪ್ರಶಸ್ತಿ- ಪುರಸ್ಕಾರ, ಸನ್ಮಾನ- ಅಭಿನಂದನೆಗಳು ನಮ್ಮ ಜವಾಬ್ದಾ ರಿಯನ್ನು ಹೆಚ್ಚಿಸುತ್ತವೆಯೇ ಹೊರತು ನಾವೇನೋ ಮಹಾನ್ ಸಾಧನೆ ಮಾಡಿ ಬಿಟ್ಟಿದ್ದೇವೆ. ಅದಕ್ಕಾಗಿ ನಮಗೆ ಇಂತಹ ಗೌರವ, ಆದರಾತಿತ್ಯ ದೊರೆಯುತ್ತಿದೆ ಎಂದು ಭಾವಿಸಬಾರದು ಎಂದು ಹೇಳಿದರು.
ಜಿಧಿಕಾರಿ ಡಾ. ಸೆಲ್ವಮಣಿ, ಬಸವಕೇಂದ್ರದ ಮರಳಸಿದ್ಧ ಸ್ವಾಮೀಜಿ, ಮೇಯರ್ ಶಿವಕುಮಾರ್, ಕಾರ್ಪೋರೇಟರ್ ಯಮುನಾ ರಂಗನಾಥ್, ಪರೋಪಕಾರಂ ಕುಟುಂಬದ ಅನಿಲ್ ಹೆಗಡೆ, ಡಿ.ಸಿ. ರಾಜಣ್ಣ ದುಮ್ಮಳ್ಳಿ, ಓಂ ಪ್ರಕಾಶ್, ಮಾಲಿನಿ ಕಾನಡೆ, ಮಂಜುನಾಥ್ ಗಾಳಿ ಮತ್ತಿತರರು ಇದ್ದರು.