ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆ ಹಾಕಿಸಿ : ಡಿಸಿ
ಶಿವಮೊಗ್ಗ : ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಕಾಲು ಬಾಯಿ ರೋಗವನ್ನು ತಡೆಯಲು ದನ, ಎಮ್ಮೆ ಮತ್ತು ಕರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕೆಂದು ಜಿಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.
ಜಿಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ೪ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ರಾಷ್ಟ್ರೀಯ ಜನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಯಲ್ಲಿ ಸೆ.೨೬ರಿಂದ ಅ.೨೫ರವರೆಗೆ ಉಚಿತವಾಗಿ ೪ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು ದನ, ಎಮ್ಮೆ ಮತ್ತು ಕರುಗಳಿಗೆ ಲಸಿಕೆ ನೀಡಲಾಗುವುದು ಎಂದರು.
ರೈತರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಿಸಿ, ನಿರ್ಮೂಲನೆ ಮಾಡಲು ಪ್ರತಿ ೬ ತಿಂಗಳಿಗೊಮ್ಮೆ ಈ ರೋಗದ ವಿರುದ್ದ ಲಸಿಕೆ ಹಾಕಿಸುವುದು ಕಡ್ಡಾಯವಾಗಿದ್ದು, ಲಸಿಕೆದಾರರು ನಿಮ್ಮ ಗ್ರಾಮಕ್ಕೆ, ಮನೆ ಬಾಗಿಲಿಗೆ ಭೇಟಿ ನೀಡಿ ಜನುವಾರುಗಳಿಗೆ ಲಸಿಕೆ ಹಾಕುವರು. ಯಾರೂ ಕೂಡ ತಮ್ಮ ಎಮ್ಮೆ, ದನ ಕರುಗಳು ಲಸಿಕೆಯಿಂದ ವಂಚಿತರಾಗದಂತೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದ ಅವರು ಜಿಯಲ್ಲಿ ಶೇ.೧೦೦ ಲಸಿಕಾ ಪ್ರಗತಿ ಸಾಧಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹೊಸನಗರ, ಸೊರಬ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಕೃತಕ ಗರ್ಭಧಾರಣೆ ಪ್ರಗತಿ ಸ್ವಲ್ಪ ಕಡಿಮೆಯಿದ್ದು, ಇದನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹೋರಿ ಬೆದರಿಸುವವರು ಮುಂಚಿತವಾಗಿ ಪಶುಪಾಲನ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಧಿಕಾರಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಪಡೆದು ೧೫ ದಿನ ಮುಂಚಿತವಾಗಿ ಅನುಮತಿ ನೀಡಬೇಕು ಎಂದರು.
ಪೆಟ್ ಶಾಪ್ ನೋಂದಣಿ ಕಡ್ಡಾಯ:
ಪಿವೆನ್ಶನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ (ಪೆಟ್ ಶಾಪ್) ರೂಲ್ಸ್ ೨೦೧೮ರ ಪ್ರಕಾರ ಜಿಯ ಪೆಟ್ ಶಾಪ್ ಮಾಲೀಕರು ತಾವು ಉದ್ದಿಮೆ ಪರವಾನಗಿ ತೆಗೆದು ಕೊಳ್ಳುವ ಮುನ್ನ ರೂ.೫೦೦೦ ಶುಲ್ಕ ನೀಡಿ ಜಿ ಪ್ರಾಣಿ ದಯಾ ಸಂಘ ದಲ್ಲಿ ನೋಂದಣಿ ಮಾಡಿಸಿಕೊಳ್ಳ ಬೇಕು. ನೋಂದಣಿ ಮಾಡಿಸಿ ಕೊಳ್ಳದೇ ಪೆಟ್ ಶಾಪ್ ವಹಿವಾಟು ಮಾಡಿದರೆ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು ಎಂದ ಅವರು, ಪ್ರಸ್ತುತ ನೋಂದಣಿಗೆ ೧೫ ಅರ್ಜಿ ಗಳು ಬಂದಿದ್ದು ಈ ಸಂಬಂಧ ಸಮಿತಿ ರಚಿಸಿ ನಿಯಮಾನುಸಾರ ಅನುಮೋದನೆ ನೀಡುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಪಶುಪಾಲನಾ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಜಿಯಲ್ಲಿ ಒಟ್ಟು ೧,೫೮೬ ಗ್ರಾಮಗಳಿದ್ದು, ೪ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ೬,೩೯,೨೫೦ ಡೋಸ್ ಲಸಿಕೆ ನೀಡ ಲಾಗಿದೆ. ಒಟ್ಟು ೬,೫೩,೫೭೩ ಸಿರಿಂಜ್‌ಗಳು ಲಭ್ಯವಿದ್ದು ಸರಬರಾಜದ ಲಸಿಕೆ ಶೇಖರಿಸಿಡಲು ೪ ವಾಕ್ ಇನ್ ಕೂಲರ್ ಮತ್ತು ೨೩ ಐಸ್‌ಲೈನ್ ರೆಫ್ರಿಜರೇಟರ್‍ಗಳಿವೆ ಹಾಗೂ ಒಟ್ಟು ೪೬೭ ಲಸಿಕಾದಾರರು ಇzರೆ. ಕಳೆದ ೩ನೇ ಲಸಿಕಾ ಅಭಿಯಾನದಲ್ಲಿ ೫,೫೪,೦೧೦ ಜನುವಾರುಗಳಿಗೆ ಲಸಿಕೆ ನೀಡುವ ಮೂಲಕ ಜಿಯಲ್ಲಿ ಶೇ.೯೫ ಪ್ರಗತಿ ಸಾಧಿಸ ಲಾಗಿತ್ತು ಎಂದು ಮಾಹಿತಿ ನೀಡಿದರು
ಲಸಿಕಾ ಅಭಿಯಾನದ ಮಾಹಿತಿ ವೆಬ್‌ಸೈಟ್ ಡಿಡಿಡಿ.Zeqo.hZ.ಜ್ಚಿ.ಜ್ಞಿ ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿ ಗಾಗಿ ಸಮೀಪದ ಪಶಪಾಲನಾ ಇಲಾಖೆಯ ಪಶು ಆಸ್ಪತ್ರೆ ಅಥವಾ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸಂಪರ್ಕಿಸ ಬಹುದೆಂದರು.
ಸಭೆಯಲ್ಲಿ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೊಸ್ಟರ್‌ಗಳನ್ನು ಡಿಸಿ ಮತ್ತು ಇತರೆ ಅಧಿಕಾರಿಗಳು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ವಿವಿಧ ತಾಲ್ಲೂಕುಗಳ ಸಹಾಯಕ ನಿರ್ದೇಶಕರು, ಪಶುವೈದ್ಯರು ಹಾಜರಿದ್ದರು.