ಮುಂದಿನ ಜಾತ್ರೆಯೊಳಗೆ ಚಂದ್ರಗುತಿ ದೇವಳದ ಸಮಗ್ರ ಅಭಿವೃದ್ಧಿ…
ಶಿವಮೊಗ್ಗ : ಚಂದ್ರಗುತ್ತಿ ದೇವಸ್ಥಾನವನ್ನು ಸಮಗ್ರ ಅಭಿವೃದ್ಧಿ ಮಾಡುವ ಉzಶದಿಂದಾಗಿ ಪ್ರಾಧಿಕಾರ ರಚಿಸಲಾಗಿದ್ದು, ಅಭಿವೃದ್ದಿಗೆ ಸಂಪೂರ್ಣ ಅನುದಾನ ತರುವ ಜವಾಬ್ದಾರಿ ನನ್ನದು. ಮುಂದಿನ ಜಾತ್ರೆಯೊಳಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದು ಜಿ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಭರವಸೆ ನೀಡಿದರು.
ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಮೂಲಭೂತ ಸೌಕರ್ಯದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ನಂತರ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ರೂ. ೨.೮೪ ಕೋಟಿ ವೆಚ್ಚದ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ಜನವರಿ ಮಾಹೆಯಲ್ಲಿ ಚಂದ್ರಗುತ್ತಿ ದೇವಾಲಯ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಿದ್ದು, ಇದರಿಂದಾಗಿ ದೇವಾಲಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಕೇಂದ್ರ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.
ದೇವಸ್ಥಾನದ ಮುಖ್ಯ ದ್ವಾರ ದಿಂದ ಹತ್ತಲು ಮೆಟ್ಟಿಲುಗಳಿವೆ. ಆದರೆ ದೇವಸ್ಥಾನದ ಇನ್ನೊಂದು ಕಡೆಯಿಂದ ಇಳಿಯಲು ಮೆಟ್ಟಿಲು ಹಾಗೂ ಛಾವಣಿ ನಿರ್ಮಿಸಲಾಗು ವುದು. ದೇವಸ್ಥಾನದ ಕಿಟಕಿಗಳು ಹಾಳಾಗಿವೆ ಹಾಗೂ ದೇವಸ್ಥಾನ ಕಟ್ಟಡ ಸೋರುತ್ತಿದ್ದು ರಿಪೇರಿ ಮಾಡಲಾಗುವುದು. ದೇವಸ್ಥಾನ ಬಳಿ ಅರಣ್ಯ ವ್ಯಾಪ್ತಿಗೆ ಬರುವ ಹತ್ತು ಎಕರೆ ಜಮೀನಿನಲ್ಲಿ ಜತ್ರೆ ಮತ್ತಿತರೆ ಉತ್ಸವದಲ್ಲಿ ಭಕ್ತಾದಿಗಳು ಉಳಿದು ಕೊಳ್ಳಲು ಡಾರ್ಮಿಟರಿ, ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ಇನ್ನಿತರೆ ಮೂಲಭೂತ ವ್ಯವಸ್ಥೆ ಮಾಡುವ ಯೋಜನೆ ಇದ್ದು ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದ ತಕ್ಷಣ ಕಾಮಗಾರಿ ಆರಂಭಿಸಲಾ ಗುವುದು ಎಂದರು.
ಚಂದ್ರಗುತ್ತಿ ದೇವಾಲಯದ ಮೂಲಭೂತ ಅಭಿವೃದ್ದಿಗಾಗಿ ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆಗಳು ಸೇರಿ ಸಮಗ್ರ ಯೋಜನೆ ತಯಾರಿಸಿ ನೀಡಿರಿ. ಶೇ. ೧೦೦ ರಷ್ಟು ಹಣವನ್ನು ಒದಗಿಸುವ ಜವಾಬ್ದಾರಿ ನನ್ನದಾ ಗಿದ್ದು ಮುಂದಿನ ಜಾತ್ರೆ ವೇಳೆಗೆ ಭಕ್ತಾಧಿಗಳು ಉಳಿಯುವ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯ ಗಳ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು. ಸೊರಬ ತಾಲ್ಲೂಕಿನಲ್ಲಿ ಗುಡವಿ, ಕೋಟಿಪುರ, ಚಂದ್ರಗುತ್ತಿ, ಬಂಗಾರಧಾಮ, ಬನವಾಸಿ ಪ್ರವಾಸಿ ತಾಣಗಳಿವೆ. ಜಿಯಲ್ಲಿ ೬೪ ಪ್ರವಾಸಿ ತಾಣಗಳಿದ್ದು ಜಿ ಉತ್ತಮಪ್ರವಾಸಿ ತಾಣವಾಗುತ್ತಿದೆ ಎಂದರು.
ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಬದಲಾಯಿಸಿ, ಕೇಂದ್ರದ ನಿಯಂತ್ರಣಕ್ಕೆ ಒಳಪಟ್ಟ ಯೋಜನೆ ತಂದಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ಕಾನೂನಾತ್ಮಕವಾಗಿ ಉಳುಮೆ ಮಾಡುತ್ತಿರುವ ಬಗರ್ ಹುಕುಂ ರೈತರನ್ನು ಯಾವುದೇ ಅಧಿಕಾರಿಗಳು ಒಕ್ಕಲೆಬ್ಬಿಸುವಂತಿಲ್ಲ. ಬಡವರಿಗೆ ಹಕ್ಕುಪತ್ರ ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು ಅದನ್ನು ನಾವು ಮಾಡುತ್ತೇವೆ ಎಂದರು.
ಜಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ, ಸಾಗರ ಎಸಿ ವೀರೇಶ್ ಕುಮಾರ್, ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್ ಡಾ.ಸುಜಿತ್ ನಯನ್, ಸೊರಬ ತಹಶೀಲ್ದಾರ್ ಪುರಂದರ, ಸೊರಬ ಇಓ ಶಶಿಧರ್, ಚಂದ್ರಗುತ್ತಿ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಮೀಳಾ ಕುಮಾರಿ ಪ್ರಮುಖರಾದ ಗಣಪತಿ, ಸದಾನಂದಗೌಡ, ಅಣ್ಣಪ್ಪ ಇನ್ನಿತರರಿದ್ದರು.

