ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮತ್ಸರಕ್ಕಿಂತ ಮುತ್ಸದ್ದಿತನ ಅವಶ್ಯಕ…

Share Below Link

ಶಿವಮೊಗ್ಗ : ನಮ್ಮಲ್ಲಿ ಮತ್ಸರ ಕ್ಕಿಂತ ಮುತ್ಸದ್ದಿತನದ ಅವಶ್ಯಕತೆ ಯಿದ್ದು ಅಂತಹ ಸಮಾಜಮುಖಿ ಸ್ಪಂದನೆಯೇ ಬಹು ಎತ್ತರಕ್ಕೆ ನಮ್ಮ ನ್ನು ಕೊಂಡೊಯ್ಯಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಜ್ಯು ಯೇಷನ್ ಡೇ – ೨೦೨೩ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡಿ ದರು.
ನಾವು ದೊಡ್ಡವರಾಗಿ ಬೆಳೆ ದಂತೆಲ್ಲ ಈ ಸಮಾಜಕ್ಕೆ ಸಲ್ಲಿಸ ಬೇಕಾದ ಋಣಭಾರವು ಹೆಚ್ಚುತ್ತಾ ಹೋಗುತ್ತದೆ. ವಯಸ್ಸು ಹೆಚ್ಚಾ ದಂತೆಲ್ಲ ಮನುಷ್ಯ ದುರ್ಬಲನಾ ಗುತ್ತಾ ಹೋಗುತ್ತಾನೆ. ಅದೇ ಒಂದು ಸಂಸ್ಥೆಯ ವಯಸ್ಸು ಹೆಚ್ಚುತ್ತಾ ಹೋದಂತೆ ಅದರ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.

eನದ ಸದ್ಬಳಕೆ ಸಮಾಜದ ಬೆಳವಣಿಗೆಗೆ ಬಳಕೆಯಾಗಲಿ. ಇಂದು ಆತಂಕದ ವಾತಾವರಣ ದಲ್ಲಿ ನಾವಿದ್ದೇವೆ. ಸತ್ಯ ಚಪ್ಪಲ್ಲಿ ಯನ್ನು ಮೆಟ್ಟಿಕೊಳ್ಳುವುದರ ಒಳಗೆ ಸುಳ್ಳು ಜಗತ್ತನ್ನು ಎರಡು ಸುತ್ತು ಹಾಕಿರುವಂತಹ ಉದಾಹರಣೆಗಳ ನಡುವೆ ಬದುಕುತ್ತಿದ್ದೇವೆ.
ಕಣ್ಣಿರಿಗಿಂತ ಬೆವರ ಹನಿಯೇ ಶ್ರೇಷ್ಠ. ಕಣ್ಣೀರು ಕೃತಕವಾಗಿ ಮೂಡಬಹುದು ಅದರೇ ಬೆವರ ಹನಿ ಕಷ್ಟ ಪಟ್ಟಾಗ ಮಾತ್ರ ಬರು ತ್ತದೆ. ಡಾಂಭಿಕತೆಯ ಹೊರತಾಗಿ ಶ್ರಮಿಕ ವರ್ಗದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳಿ ಎಂದು ಹೇಳಿ ದರು.
ಎನ್‌ಇಎಸ್ ಕಾರ್ಯದರ್ಶಿ ಗಳಾದ ಎಸ್.ಎನ್.ನಾಗರಾಜ ಮಾತನಾಡಿ, ವೃತ್ತಿಪರ ನೈತಿಕತೆ ಯನ್ನು ಅನುಸರಿಸಿ. ನಾವು ವೃತ್ತಿ ಪರತೆಯನ್ನು ಎತ್ತಿ ಹಿಡಿದಂತೆಲ್ಲ ವೃತ್ತಿಯ ಕೌಶಲ್ಯತೆ ನಮ್ಮನ್ನು ಸದಾ ರಕ್ಷಿಸುತ್ತದೆ ಎಂದು ಹೇಳಿದರು.
ಎನ್‌ಇಎಸ್ ಉಪಾಧ್ಯಕ್ಷ ರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾ ಯಣ್, ಖಜಂಚಿಗಳಾದ ಡಿ.ಜಿ. ರಮೇಶ್, ನಿರ್ದೇಶಕರಾದ ಹೆಚ್. ಸಿ.ಶಿವಕುಮಾರ್, ಪ್ರಾಂಶುಪಾ ಲರಾದ ಡಾ.ಕೆ.ನಾಗೇಂದ್ರ ಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಎಂಜಿನಿಯರಿಂಗ್ ಎಂಬಿಎ ಎಂಸಿಎ ವಿಭಾಗಗಳ ಸುಮಾರು ೯೦೦ ಕ್ಕು ಹೆಚ್ಚು ವಿದ್ಯಾರ್ಥಿಗಳು ಪದವೀಧರ ಪ್ರತಿe ವಿಧಿ ಪಡೆದರು.