ಜಿಲ್ಲಾ ಸುದ್ದಿತಾಜಾ ಸುದ್ದಿ

ಕೃಷಿ ಲಾಭವಿಲ್ಲದ ಉದ್ಯೋಗವೆಂಬ ಭಾವನೆಯಿಂದ ಬನ್ನಿ…

Share Below Link

ಸಾಗರ: ಕೃಷಿಯಿಂದ ಲಾಭ ವಿಲ್ಲ ಎಂದು ಕೆಲವರು ತಿಳಿದು ಕೊಂಡಿದ್ದು, ಕೃಷಿ ಲಾಭವಿಲ್ಲದ ಉದ್ಯೋಗ ಎಂಬ ಭಾವನೆಯಿಂದ ಹೊರಬರಬೇಕು ಎಂದು ರೋಟರಿ ಜಿ ರಾಜ್ಯಪಾಲೆ ಬಿ.ಸಿ.ಗೀತಾ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿನ ರೋಟರಿ ಕ್ಲಬ್‌ಗೆ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಮಣ್ಣಿನ ಫಲವತ್ತತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ಕುರಿತು ಈ ಬಾರಿ ಜಿ ಯೋಜನೆಯನ್ನಾಗಿ ರೋಟರಿ ಸಂಸ್ಥೆ ಕೈಗೆತ್ತಿಕೊಂಡಿದ್ದು, ಈ ಕುರಿತು ಜಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಿ ಕೊಂಡಾಗ ಮಾತ್ರ ಉತ್ತಮ ಇಳುವರಿ ಸಾಧ್ಯ ಎಂದರು.


ನಾವು ಆಗಾಗ ಆರೋಗ್ಯದ ಕುರಿತು ಪರೀಕ್ಷೆಗೆ ಒಳಪಡುವಂತೆ ಭೂಮಿಯ ಸುಸ್ಥಿರತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಮಣ್ಣು ಪರೀಕ್ಷೆಯ ವಿಧಾನಗಳ ಕುರಿತು ರೈತರಿಗೆ ಮಾಹಿತಿ ಒದಗಿಸಬೇಕು. ಈ ಬಗ್ಗೆ ಈಗಾಗಲೇ ಕೃಷಿ ವಿವಿ ಸಂಶೋಧಕರೊಂದಿಗೆ ಚರ್ಚಿಸಿ ಯೋಜನೆ ಕಾರ್ಯಗತಗೊಳಿಸ ಲಾಗಿದೆ. ಮಣ್ಣಿನ ಮಹತ್ವವನ್ನು ಅರಿತು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿಧಾನಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಹಿಂದೆ ಶಾಲಾ ಪಠ್ಯಗಳಲ್ಲಿ ನೈತಿಕ ಶಿಕ್ಷಣ ಇತ್ತು. ಪ್ರಸ್ತುತ ನಮ್ಮ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ, ಸದ್ಭಾವನೆ, ಸನ್ನಡತೆಯ ಕೊರತೆ ಕಾಣುತ್ತಿದ್ದೇವೆ. ಮೊಬೈಲ್, ಟಿ.ವಿ. ಗೀಳು ಅಂಟಿಕೊಂಡಿದೆ. ಇವರನ್ನು ತಿದ್ದಿ ತೀಡುವ ಜವಾಬ್ದಾರಿ ಪೋಷಕರ ಮೇಲಿದೆ. ಯಾವ ಒಳಿತನ್ನೂ ಹೇಳದ ಧಾರಾವಾಹಿಯ ವ್ಯಾಮೋಹದಿಂದ ಮಹಿಳೆಯರು ಹೊರಬರಬೇಕು. ಮಕ್ಕಳ ವಾಹನ ಚಾಲನೆ, ವ್ಹೀಲಿಂಗ್, ಅತಿಯಾದ ಮೊಬೈಲ್ ಬಳಸುವುದನ್ನು ದೊಡ್ಡ ವರು ಸಹಿಸಿಕೊಂಡಿದ್ದರೆ ಮುಂದೊಂದು ದಿನ ಕೊರಗ ಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸಮಾಜದ ಆಗುಹೋಗುಗಳ ಬಗ್ಗೆ ನಾವು ಚಿಂತನೆ ಮಾಡಬೇಕು ಎಂದರು.
ರೋಟರಿ ವಲಯ ಸೇನಾನಿ ಮಹೇಶ್ ಅಂಕದ ಮಾತನಾಡಿ, ರೋಟರಿ ಸಂಸ್ಥೆಯಿಂದ ರಕ್ತನಿಧಿ ಕೇಂದ್ರ ಆರಂಭಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಜೀವನ್ಮರಣದ ಸಂದರ್ಭದಲ್ಲಿ ಈ ಕೇಂದ್ರ ನೆರವಾಗಿದೆ. ರೋಟರಿ ಸದಸ್ಯರಾದ ಪಿ.ಎಸ್.ಪ್ರಭು ಅವರು ತಾವು ರೋಟರಿ ಸದಸ್ಯರಾದ್ದರಿಂದ ಆಪತ್ಕಾಲದಲ್ಲಿ ರಕ್ತ ದೊರೆತು ಜೀವ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದಿzರೆ. ರೋಟರಿಯಿಂದ ೩-೪ ಎಕರೆ ಜಗ ಖರೀದಿಸಿ ವೃದ್ಧಾಶ್ರಮ ಆರಂಭಿಸುವ ಯೋಜನೆಯಿದೆ. ತಾಳಗುಪ್ಪದ ನಾಲಂದ ಪ್ರೌಢಶಾಲೆಗೆ ಇತ್ತೀಚೆಗೆ ೧.೫ ಲಕ್ಷ ರೂ.ಮೌಲ್ಯದ ಪೀಠೋಪಕರಣಗಳನ್ನು ನೀಡಲಾಗಿದೆ. ರೋಟರಿ ಸಂಸ್ಥೆ ಇನ್ನಷ್ಟು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಭೂಮಿಯ ಫಲವತ್ತತೆ ಕುರಿತು ರೈತರು ಮಣ್ಣನ್ನು ಪರೀಕ್ಷೆಗೆ ತೆಗೆದು ಕೊಂಡು ಹೋಗುವ ಬದಲಿಗೆ ರೈತರೇ ಸ್ವತಃ ಮಣ್ಣು ಪರೀಕ್ಷೆ ಮಾಡಲು ಅನುಕೂಲವಾಗುವಂತೆ ಕಾರ್ಯವಿಧಾನ ಜರಿಗೊಳ್ಳ ಬೇಕಿದೆ. ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ಡಾ.ಗಣಪತಿ ಅವರ ಮಾರ್ಗದರ್ಶನದಲ್ಲಿ ರೈತರ ಭೂಮಿಯಲ್ಲಿ ಮಣ್ಣು ಪರೀಕ್ಷೆ ಪ್ರಯೋಗ ನಡೆಸಲಾಗಿದೆ. ರಾಜ್ಯದಲ್ಲಿ ಸುಮಾರು ೯೦ ಲಕ್ಷ ಹೆಕ್ಟೇರ್ ಭೂಮಿ ತನ್ನ ಫಲವತ್ತತೆ ಕಳೆದುಕೊಂಡಿದೆ. ಇದನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂಬ ಅರಿವು ಬೆಳೆಸಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ, ಕೀಟನಾಶಕ ಮುಂತಾದ ಕಾರಣ ಗಳಿಂದ ಶೇ. ೩೩ ರಷ್ಟು ಭೂಮಿ ತನ್ನ -ಲವತ್ತತೆ ಕಳೆದುಕೊಂಡಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಈ ಬಾರಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಜಯಾನಂದರಾವ್ ಮತ್ತು ಕೆರೆಶಾಲೆ ಸುಧಾರಕ, ಶಿಕ್ಷಣ ಪ್ರೇಮಿ ಎಂ.ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಬಾಲ ಗಾಯನ ಪ್ರತಿಭೆಗಳಾದ ದಿಶಾ ಹೆಗಡೆ ಮತ್ತು ದಿಯಾ ಹೆಗಡೆ ಅವರನ್ನು ಅಭಿನಂದಿಸಲಾಯಿತು.
ರೋಟರಿ ಸಹಾಯಕ ರಾಜ್ಯಪಾಲ ರವಿ ಕೊಟೋಜಿ ಉಪಸ್ಥಿತರಿದ್ದರು. ಗುರುಪ್ರಸಾದ್ ಕೆ. ಅವರು ರಾಜ್ಯಪಾಲರನ್ನು ಪರಿಚಯಿಸಿದರು. ರೋಟರಿ ಕಾರ್ಯದರ್ಶಿ ರಾಜೀವ್ ಬಿ.ಎನ್. ವರದಿ ವಾಚಿಸಿದರು.
ದಿಯಾ ಮತ್ತು ದಿಶಾ ಹೆಗಡೆ ಪ್ರಾರ್ಥಿಸಿದರು. ಶಾಂತಕುಮಾರ್ ಸ್ವಾಗತಿಸಿದರು. ವೆಂಕಟರಾವ್ ವಂದಿಸಿದರು. ಡಾ.ನಿರಂಜನ ಹೆಗಡೆ ಮತ್ತು ಗುರುಪ್ರಸಾದ್ ಕೆ. ನಿರೂಪಿಸಿದರು.