ಸಿಎಂ ಸಿದ್ದರಾಮಯ್ಯರಿಗೆ ಹಿಂದೂಗಳು ಸಿಟ್ಟಿಗೇಳುತ್ತಾರೆಂಬ ಕಲ್ಪನೆಯೇ ಇಲ್ಲ: ಬಿಎಸ್ವೈ…
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯವರು ಅಲ್ಪಸಂಖ್ಯಾತ ರನ್ನು ತೃಪ್ತಿಪಡಿಸುವ ಕೆಲಸ ಮಾಡು ತ್ತಿದ್ದಾರೆ. ಇದರಿಂದ ಹಿಂದುಗಳು ಸಿಟ್ಟುಗೆಳುತ್ತಾರೆ ಎಂಬ ಕಲ್ಪನೆಯೇ ಅವರಿಗಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತನ್ವಿರ್ ಪೀರಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ನೀಡಿ ಈ ಬಗ್ಗೆ ವಿಧಾನ ಮಂಡಲದಲ್ಲಿ ಚರ್ಚೆಯಾಗುತ್ತಿದೆ. ಅವರು ಏನು ಉತ್ತರ ಕೊಡುತ್ತಾರೋ ಕಾದುನೋಡೋಣ. ಆದರೆ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವ ಕೆಲಸ ಮಾಡಿದ್ದಾರೆ. ರಾಜ್ಯದ ಜನ ಕ್ಷಮಿಸುವುದಿಲ್ಲ. ಮುಸ್ಲಿಂ ಜೊತೆ ಸಂಬಂಧ ಇಟ್ಟುಕೊಳ್ಳಲು ನಮ್ಮ ಅಭ್ಯಂತರ ಏನು ಇಲ್ಲ. ಆದರೆ ಯಾರನ್ನೂ ತೃಪ್ತಿಪಡಿಸಲು ಈ ರೀತಿ ಹೇಳಿಕೆ ನೀಡಬಾರದು ಎಂದರು.
ಬರಗಾಲಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಮೆದಲು ರಾಜ್ಯ ಸರ್ಕಾರ ಏನೂ ಮಾಡಬೇಕು ಅದನ್ನು ಮಾಡಲಿ ಆಮೇಲೆ ಕೇಂದ್ರ ಸರ್ಕಾರವನ್ನು ಕೇಳಲಿ. ಕೇಂದ್ರ ಸರ್ಕಾರ ಕೊಡುವ ವರೆಗೂ ಕಾಯಬಾರದು ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಯಾಗಬೇಕು ಎಂದ ಅವರು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ನಾವು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದೆಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ಜನರು ಏನೂ ತೀರ್ಮಾನ ಮಾಡುತ್ತಾರೋ ಕಾದು ನೋಡೋಣ, ನಮಗಂತೂ ಭರವಸೆ ಇದೆ ಎಂದರು.