ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಮುಖ್ಯ…
ಶಿವಮೊಗ್ಗ : ಪ್ರತಿನಿತ್ಯ ಕುಡಿಯಲು ಬಳಸುವ ನೀರು ಶುದ್ಧತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರು ಅವಶ್ಯಕ ಎಂದು ಸಂಪನ್ಮೂಲ ವ್ಯಕ್ತಿ ನಾಗಭೂಷಣ್ ಹೇಳಿದರು.
ವಿಶ್ವ ನೀರಿನ ದಿನ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕ್ಲಬ್ ಸದಸ್ಯರಿಗೆ ಆಯೋಜಿಸಿದ್ದ ನೀರು ಮತ್ತು ನೈರ್ಮಲ್ಯ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಸುರಕ್ಷಿತ ಕುಡಿಯುವ ನೀರು ನೈರ್ಮಲ್ಯ ಆರೋಗ್ಯ ಹಾಗೂ ಮಾನವನ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ನೈರ್ಮಲ್ಯದ ಗುಣಮಟ್ಟವನ್ನು ಇನ್ನು ಸುಧಾರಿಸಬೇಕಿದೆ. ಅಸುರಕ್ಷಿತ ನೀರನ್ನು ಕುಡಿಯುವುದರಿಂದ ಅತಿಸಾರದಂತಹ ಕಾಯಿಲೆಗಳ ಮೂಲಕ ಮನುಷ್ಯನ ಆರೋಗ್ಯ ದುರ್ಬಲಗೊಳಿಸುತ್ತದೆ ಶುದ್ಧ ಸುರಕ್ಷಿತ ನೀರು ಕುಡಿಯುವುದು ಮಾನವನ ಹಕ್ಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಶುದ್ಧ ಕುಡಿಯುವ ನೀರಿನಿಂದ ರೋಗಗಳನ್ನು ತಡೆಗಟ್ಟಬಹುದು. ನೀರು ಮತ್ತು ನೈರ್ಮಲ್ಯದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಜಗತಿಗಳನ್ನು ಮೂಡಿಸಬೇಕು. ನೀರನ್ನು ಅನಾವಶ್ಯಕವಾಗಿ ಉಪಯೋಗಿಸ ಬೇಡಿ, ನೀರಿನ ಪ್ರಾಮುಖ್ಯತೆ ಯನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರವಿ ಕೋಟೊಜಿ, ಜಯಶೀಲ ಶೆಟ್ಟಿ, ಬಸವರಾಜ್ ಬಿ, ಅರುಣ್ ಕುಮಾರ್, ರಮಾನಾಥ್ ಗಿರಿಮಾಜಿ, ಎಸ್ ಕೆ ಕುಮಾರ್, ರಮೇಶ, ಸಂತೋಷ್ ಬಿ ಎ, ಚಂದ್ರು ಜೆಪಿ, ಧರ್ಮೇಂದ್ರ ಸಿಂಗ್ ಹಾಗೂ ಕ್ಲಬ್‌ನ ಎ ಸದಸ್ಯರು ಭಾಗವಹಿಸಿದ್ದರು.