ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಏ.16ರಿಂದ ಮಕ್ಕಳ ಬೇಸಿಗೆ ಶಿಬಿರ…

Share Below Link

ಶಿವಮೊಗ್ಗ: ಹೊಂಗಿರಣ ಸಂಸ್ಥೆಯಿಂದ ಏ.೧೬ರಿಂದ ೨೦ ದಿನಗಳ ಕಾಲ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರದ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್ ಸುದ್ದಿಗೋಷ್ಟಿ ಯಲ್ಲಿ ವಿವರಿಸಿದರು.
ಹೊಂಗಿರಣ ಸಂಸ್ಥೆಯು ಕಳೆದ ೨೬ ವರ್ಷಗಳಿಂದ ರಂಗಭೂಮಿ ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಹೆಸರು ಮಾಡಿದೆ. ಮುಖ್ಯವಾಗಿ ಮಕ್ಕಳ ರಂಗಶಿಬಿರಗಳನ್ನು ಏರ್ಪಡಿಸಿದೆ. ಈ ಬಾರಿ ಕೂಡ ಏ.೧೬ರಿಂದ ೨೦ ದಿನಗಳ ಕಾಲ ವಾಸವಿ ವಿದ್ಯಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪-೩೦ರ ವರೆಗೆ ಶಿಬಿರ ನಡೆಯಲಿದೆ ಎಂದರು.
ಶಿಬಿರದಲ್ಲಿ ಮುಖ್ಯವಾಗಿ ರಂಗ ತರಬೇತಿ, ಜನಪದ ಸಾಹಿತ್ಯ, ನೃತ್ಯ, ಹಾಡು, ಆಕಾಶ ವೀಕ್ಷಣೆ, ಪವಾಡ ರಹಸ್ಯ, ಗೊಂಬೆಯಾಟ, ಮಾಡೆಲಿಂಗ್ ಪ್ರಸಾಧನ ಹೀಗೆ ಹಲವು ಹತ್ತು ವಿಷಯಗಳನ್ನು ಕಲಿಸಲಾಗುತ್ತದೆ. ಜೊತೆಗೆ ಸಾಹಸ ಕ್ರೀಡೆಯೂ ಇರುತ್ತದೆ. ಒಂದು ದಿನದ ಕಿರುಪ್ರವಾಸ ಕೂಡ ಆಯೋಜಿಸಲಾಗಿದೆ. ಮನರಂಜನೆಯ ಜೊತೆಗೆ ಸಾಹಿತ್ಯ, ಸಂಗೀತ, ಕಲೆ ಈ ಎ ವಿಷಯ ಗಳನ್ನು ಕಲಿಸಲಾಗುತ್ತದೆ ಎಂದರು.
ಶಿಬಿರದಲ್ಲಿ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಹೇಳಿಕೊಡಲಿzರೆ. ವೇದ ಚಿತ್ರದ ಜುಂಜಪ್ಪ ಹಾಡಿನ ಖ್ಯಾತಿಯ ಮೋಹನ್ ಕುಮಾರ್ ರಾಷ್ಟ್ರ ಮಟ್ಟದ ಖ್ಯಾತಿಯ ಹುಸೇನಿ, ಆಕಾಶಕಾಯಗಳ ಅಧ್ಯಯನ ನಡೆಸಿರುವ ಹಾರೋಹಳ್ಳಿ ಸ್ವಾಮಿ ಕತೆಗಾರ ಶಿವಕುಮಾರ ಮಾವಲಿ, ರಂಗ ಕಲಾವಿದ ಅಜಯ್ ನೀನಾಸಂ, ಕಾಮಿಡಿ ಕಿಲಾಡಿಯ ಹೊಂಗಿರಣ ಚಂದ್ರು, ಧಾರಾವಾಹಿ ನಟ ಚಂದ್ರಶೇಖರ ಶಾಸ್ತ್ರಿ ಸೇರಿದಂತೆ ಹತ್ತಾರು ಕಲಾವಿದರು, ವಿeನಿಗಳು, ಕುಶಲ ಕರ್ಮಿ ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಭಾಗವಹಿಸಲಿzರೆ ಎಂದರು.
ಶಿಬಿರದ ಮುಕ್ತಾಯ ಸಮಾರಂಭವು ಮೇ ೪ ಮತ್ತು ೫ ರಂದು ಕುವೆಂಪು ರಂಗಮಂದಿರ ದಲ್ಲಿ ನಡೆಯಲಿದೆ. ಶಿಬಿರದಲ್ಲಿ ಕಲಿತ ಮಕ್ಕಳೇ ಈ ಸಮಾರಂಭದಲ್ಲಿ ತಾವು ಕಲಿತ ವಿಷಯಗಳನ್ನು ಪ್ರದರ್ಶನ ಮಾಡಲಿzರೆ ಎಂದ ಅವರು, ಶಿಬಿರದಲ್ಲಿ ೬ರಿಂದ ೧೭ ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ. ಈಗಾಗಲೇ ನೊಂದಣಿ ಆರಂಭವಾಗಿದೆ. ೫೦ ಮಕ್ಕಳಿಗೆ ಮಾತ್ರ ಅವಕಾಶ ಇದೆ. ಹೆಚ್ಚಿನ ವಿವರಗಳಿಗೆ ೯೮೪೪೩೬೪೦೭೧, ೯೭೪೧೯೬೦೩೫೬ ಅನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೊಂಗಿರಣದ ಅಧ್ಯಕ್ಷ ಹೆಚ್.ಎಂ. ಸುಬ್ರಹ್ಮಣ್ಯ, ಶ್ರೀಕಂಠ ಪ್ರಸಾದ್, ಹೊಂಗಿರಣ ಚಂದ್ರು, ಗಿರಿಧರ್ ಇದ್ದರು.