ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿವಮೊಗ್ಗ ನಗರದ ಶಾಲೆಗಳಲ್ಲಿ ಮಕ್ಕಳ ಕಲರವ…

Share Below Link

ಶಿವಮೊಗ್ಗ: ೨೦೨೩ -೨೪ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಯಂತೆ ಇಂದಿನಿಂದ ರಾಜದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳು ಆರಂಭವಾಗಿದ್ದು, ಈ ಹಿನ್ನೆ ಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಕೂಡ ಶಾಲೆಗಳು ಪುನರಾರಂಭ ಗೊಂಡವು.
ಇಂದು ಬೆಳಿಗ್ಗೆ ದುರ್ಗಿಗುಡಿ ಯ ಸರ್ಕಾರಿ ಶಾಲೆಯಲ್ಲಿ ಸಂಭ್ರ ಮ ಮನೆಮಾಡಿತ್ತು. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು, ಪೋಷ ಕರು, ಜನಪ್ರತಿನಿಧಿಗಳು ಸಿದ್ಧತೆ ನಡೆಸಿದ್ದರು. ತಳಿರು ತೋರಣಗ ಳಿಂದ ಶಾಲೆಯನ್ನು ಅಲಂಕರಿಸಲಾ ಗಿತ್ತು. ಬೆಲೂನುಗಳ ಪ್ರದರ್ಶನ ವಿಶೇಷವಾಗಿತ್ತು. ಕಳೆದೆರಡು ದಿನ ಗಳಿಂದ ಶಾಲೆಗಳು ಪ್ರಾರಂಭ ವಾಗಿದ್ದರೂ ಕೂಡ ಸ್ವಚ್ಛತೆ ಮತ್ತು ಸಿದ್ಧತೆಯನ್ನು ಮಾಡಿಕೊಳ್ಳಲಾ ಗಿತ್ತು. ಮಕ್ಕಳೆಲ್ಲರೂ ಯೂನಿ ಫಾರ್ಮ್‌ನಲ್ಲಿ ಬಂದು ಸಂಭ್ರಮ ದಿಂದ ತರಗತಿಗಳಿಗೆ ಆಗಮಿಸಿ ದರು.
ಈ ಸಂದರ್ಭದಲ್ಲಿ ಪ್ರಾರಂ ಭೋತ್ಸವದ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಯೂನಿಫಾರ್ಮ್ ಮತ್ತು ಪುಸ್ತಕಗಳನ್ನು ನೀಡಲಾ ಯಿತು. ಎ ಮಕ್ಕಳಿಗೂ ಸಿಹಿ ಹಂಚಲಾಯಿತು. ಹಾಗೆಯೇ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಕಟೌಟ್ ಅನ್ನು ಪ್ರದರ್ಶಿಸಿ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾ ಡಿದ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್, ಶಿಕ್ಷಣದ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನಮ್ಮ ಜಿಯವರೇ ಶಿಕ್ಷಕಣ ಸಚಿವರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಸ್ಥಳೀಯ ಶಾಸಕರ ಹಾಗೂ ಸಚಿವರ ಸಹಾಯ ಪಡೆದು ಶಿವಮೊಗ್ಗ ನಗರದ ಶಾಲೆಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಶಿಕ್ಷಣವೇ ರಾಷ್ಟ್ರದ ಅಭಿವೃದ್ಧಿಯ ಸಂಕೇತವಾಗಿದೆ. ಮಕ್ಕಳು ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗೆ ಆಗಮಿಸಿzರೆ. ಅವರೆಲ್ಲರಿಗೂ ಒಳ್ಳೆಯದಾಗಲಿ. ಪಾಠದ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಲಿ. ಮಕ್ಕಳ ಬದುಕು ಹಸನಾಗಲಿ ಎಂದು ಹಾರೈಸಿದರು.
ಮುಖ್ಯೋಪಾಧ್ಯಾಯ ಮೋಹನ್ ಮಾತನಾಡಿ, ದುರ್ಗಿ ಗುಡಿ ಶಾಲೆ ರಾಜ್ಯದಲ್ಲಿಯೇ ಹೆಸರು ಮಾಡಿದೆ. ಇಲ್ಲಿ ಆಂಗ್ಲ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಮೂರು ವಿಭಾಗ ಗಳಿವೆ. ಮೂರೂ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಉತ್ತಮ ಬೆಂಬಲ ನೀಡುತ್ತಿzರೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ದುರ್ಗಿಗುಡಿ ಶಾಲೆ ಹೆಸರಾಗಿದೆ ಎಂದರು.
ಪ್ರಮು ಖರಾದ ಶ್ಯಾಮ್‌ಸುಂದರ್, ವಿನಯ್ ತಾಂಡ್ಲೆ, ಬಾಲಾಜಿ, ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಅಧ್ಯಾಪಕರು, ಪೋಷಕರು ಹಾಜರಿದ್ದರು.