ಜಿಲ್ಲಾ ಸುದ್ದಿತಾಜಾ ಸುದ್ದಿ

ಮಕ್ಕಳಿಗೆ ಶ್ರೇಷ್ಠ ಸಂಸ್ಕೃತಿ ಪರಂಪರೆಯ ಪರಿಚಯ ಅಗತ್ಯ…

Share Below Link

ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶ ಗುಣಗಳು ಎಂದೆಂದಿಗೂ ಅಜರಾ ಮರ. ಮಕ್ಕಳಿಗೆ ಬಾಲ್ಯದ ಶ್ರೇಷ್ಠ ಸಂಸ್ಕೃತಿ ಪರಂಪರೆಯ ಪರಿಚಯ ಆಗಬೇಕು ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ ವಿಜಯಕುಮಾರ್ ಹೇಳಿದರು.


ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾ ಟಿಸಿ ಮಾತನಾಡಿದರು.
ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಬದಲಾವಣೆ ಕ್ಷಣಗಳು ಹಾಗೂ ಈ ಪ್ರಪಂಚಕ್ಕೆ ಸಾರಿದ ಸಂದೇಶಗಳು ಹಾಗೂ ರಾಮಾ ಯಣದಂತಹ ಮಹಾನ್ ಕೃತಿ ಯನ್ನು ಲೋಕಕ್ಕೆ ಅರ್ಪಿಸಿದ ಮಹ ರ್ಷಿಯವರ ಸಾಧನೆ ನಾವು ಇಂದು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಧಾರ್ಮಿಕತೆ ಹಾಗೂ ಋಷಿ ಮುನಿಗಳ ಪರಿಚಯವಾಗಬೇಕು. ವಿದ್ಯಾಭ್ಯಾಸದ ಜೊತೆಗೆ ಮಕ್ಕಳಿಗೆ ರಾಮಾಯಣ ಮಹಾಭಾರತ ಹಲವಾರು ಧರ್ಮ ಗ್ರಂಥಗಳ ವಿಚಾರಗಳನ್ನು ತಿಳಿಸುವ ಕೆಲಸಗಳು ಆಗಬೇಕು ಎಂದರು.
ಹಾಗೆ ಆಧ್ಯಾತ್ಮದತ್ತ ಅವರ ಗಮನ ಸೆಳೆಯುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷ ಸತೀಶ್ ಚಂದ್ರ ಮಾತ ನಾಡಿ, ವಾಲ್ಮೀಕಿ ಅವರು ಬರೆದ ರಾಮಾಯಣದಿಂದ ಇಡೀ ಜಗತ್ತೇ ಬದಲಾಗಿದೆ ಆ ಗ್ರಂಥ ಇಂದಿಗೂ ಪ್ರಸ್ತುತವಾಗಿದೆ ಹಲವಾರು ನಿದರ್ಶನಗಳಿಗೆ ದಾರಿ ದೀಪವಾ ಗಿದೆ ಎಂದು ತಿಳಿಸಿದರು.
ರೋಟರಿ ವಿದ್ಯಾ ಸಂಸ್ಥೆ ಚಾರಿ ಟೇಬಲ್ ಟ್ರಸ್ಟ್ ನ ಸಹ ಕಾರ್ಯ ದರ್ಶಿ ಎಸ್ ಆರ್ ನಾಗವೇಣಿ ಮಾತನಾಡಿ, ಪ್ರತಿಯೊಬ್ಬ ಮಹ ನೀಯರ ಜಯಂತಿಗಳು ನಮಗೆ ಆದಷ್ಟು ಪ್ರಾಯವಾಗಿದೆ ಹಾಗೂ ವಿಶೇಷವಾದ ಸಂದೇಶವನ್ನು ತಲುಪಿಸುವ ಕೆಲಸವಾಗುತ್ತಿದೆ ಎಂದು ನುಡಿದರು.
ಸಮಾರಂಭದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷ ಬಿಂದು ವಿಜಯ್ ಕುಮಾರ್, ಸಂತೋಷ್, ಪದ್ಮಿನಿ ಹೋಬಳಿ ದಾರ್, ಗೀತಾ ಚಿಕ್ ಮಠ್, ಸಂಧ್ಯಾ ,ವೀಣ ಕಿಶೋರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಲಾಯಿತು.