ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಿಎಂ ಸಿದ್ದು ಕುರಿತು ಛಲವಾದಿ ನಾರಾಯಣ ಸೈಟ್ ಕಳ್ಳ ಬಂದ ಎಂದು ಲೇವಡಿ…

Share Below Link

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿಗೆ ಹೋದರೂ, ಬಂದರೂ ಕಳ್ಳ ಬಂದ, ಸೈಟ್ ಕಳ್ಳ ಬಂದ ಎಂದು ಜನರು ಲೇವಡಿ ಮಾಡುತ್ತಿzರೆ ಎಂದು ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಕಳ್ಳರೇ ಆಗಿzರೆ. ಸೈಟ್ ವಾಪಾಸ್ಸು ಕೊಟ್ಟ ಮಾತ್ರಕ್ಕೆ ಅವರ ಕಳ್ಳತನ ಮುಚ್ಚಿ ಹೋಗುವುದಿಲ್ಲ. ಭೂಮಿ ಕಬಳಿಸುವುದೇ ಅವರ ಉದ್ದೇಶವಾಗಿತ್ತು. ಅಡಿಕೆ ಕದ್ದರೂ ಕಳ್ಳನೆ, ಆನೆ ಕದ್ದರೂ ಕಳ್ಳನೇ ಹಾಗಾಗಿ ಸಿದ್ದರಾಮಯ್ಯ ಅವರು ಕಳ್ಳರು ಆದ್ದರಿಂದಲೇ ಜನರು ಅವರ ಬಗ್ಗೆ ಮಾತನಾಡುತ್ತಿzರೆ ಎಂದರು.


ಈಗಾಗಲೇ ಕಾಂಗ್ರೆಸ್ ಸರ್ಕಾರದ ಬಗ್ಗೆ ರಾಜ್ಯದ ಜನರಲ್ಲಿ ತಿರಸ್ಕಾರ ಮೂಡಿದೆ. ಅಲಿಖಿತ ಕಾನೂನುಗಳೇ ಹೆಚ್ಚುಆಗುತ್ತಿವೆ. ಬಾಂಬ್ ಬ್ಲಾಸ್ಟ್ ಮಾಡಿದವರು ಅವರಿಗೆ ಬ್ರದರ್‍ಸ್ ಆಗುತ್ತಾರೆ. ಕದ್ದ ಮಾಲು ವಾಪಾಸ್ಸು ಕೊಟ್ಟವರು ಅಪರಾಧಿಗಳಲ್ಲ, ಪಾಕಿಸ್ತಾನಕ್ಕೆ ಜೈ ಅಂದವರು ದೇಶಭಕ್ತರಾಗುತ್ತಾರೆ. ಹೀಗೆ ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರದಿಂದ ಕೂಡಿದೆ. ಸಂಪೂರ್ಣ ಲೂಟಿ ಹೊಡೆಯುತ್ತಿzರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಕೇವಲ ಭ್ರಷ್ಟ ಮಾತ್ರವಲ್ಲ, ಅವರೊಬ್ಬ ಜತಿವಾದಿ, ಭಯೋತ್ಪಾದಕ ಕೂಡ ಕುತಂತ್ರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಅವರು, ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದರು.
ಕೇವಲ ವಾಲ್ಮೀಕಿ ನಿಗಮ ಮಾತ್ರವಲ್ಲ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ, ಕಾರ್ಮಿಕ ಕಲ್ಯಾಣ ನಿಧಿ, ಹೀಗೆ ಅನೇಕ ನಿಗಮಗಳಲ್ಲಿ ಭ್ರಷ್ಟಚಾರ ನಡೆದಿದೆ. ಅಲ್ಲಿನ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಲೂಟಿ ಮಾಡುತ್ತಿzರೆ. ಇದು ವಂಚಕರ ಸರ್ಕಾರವಾಗಿದೆ. ಕೂಡಲೇ ಈ ಸರ್ಕಾರವನ್ನು ವಜ ಮಾಡಬೇಕು ಎಂದರು.
ಈಗ ಭ್ರಷ್ಟಚಾರದ ಸರದಿ ಮಲ್ಲಿಕಾರ್ಜುನ ಖರ್ಗೆಯವರದಾಗಿದೆ. ಸೈಟ್ ಪಡೆದುಕೊಂಡು ಈಗ ಅವರು ಕೂಡ ವಾಪಾಸ್ಸು ಕೊಟ್ಟಿzರೆ. ಯಾಕೆ ಇದ್ದಕ್ಕಿದಂತೆ ೫ ಎಕರೆ ಸೈಟ್‌ನ್ನು ವಾಪಾಸ್ಸು ಕೊಟ್ಟರು. ಯಾವುದೇ ತನಿಖೆಯನ್ನು ಸಿಬಿಐಗೆ ಕೊಟ್ಟರೆ ವಾಪಾಸ್ಸು ಪಡೆಯುತ್ತಾರೆ. ಭೂಮಿ ಕಬಳಿಸುವುದರಲ್ಲಿ ಇವರೆಲ್ಲ ನಿಸೀಮರು, ಮೆದಲು ಆರೋಪ ಬಂದಾಗ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದಿದ್ದರು. ಈಗ ಈ ಇಬ್ಬರು ಕಾಂಗ್ರೆಸ್ ನಾಯಕರು ಜಗ್ಗೇದೇಕೆ ? ಬಗ್ಗಿದ್ದೇಕೆ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಪರಿಸ್ಥಿತಿಯ ಬಗ್ಗೆ ಮತ್ತು ಅಲ್ಲಿನ ಭ್ರಷ್ಟಚಾರದಲ್ಲಿ ಮುಳುಗಿರುವ ಸಚಿವರ ಕುರಿತು ಆರ್ಥಿಕ ದಿವಾಳಿತನ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇವೆ. ಕೂಡಲೇ ಕರ್ನಾಟಕ ರಾಜ್ಯ ಸರ್ಕಾರವನ್ನು ವಜ ಮಾಡುವಂತೆ ಒತ್ತಾಯಿಸಿದ್ದೇನೆ ಎಂದರು.
ಹುಬ್ಬಳ್ಳಿ ಗಲಭೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಅಲ್ಲಿ ಆರೋಪಿಗಳ ಕೇಸ್ ಪಡೆಯಲಾಗಿದೆ. ಯಾರೂ ಪೋಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿದರೂ ಅವರನ್ನೇ ರಾಷ್ಟ್ರಭಕ್ತರು ಎಂದು ಪರಿಗಣಿಸಲಾಗಿದೆ. ಇದೇ ಇವರ ನೀತಿಯಾಗಿದೆ. ನಿನ್ನೆ ಮಾಜಿ ಮಂತ್ರಿಯೊಬ್ಬರು ಬೇಲ್ ತೆಗೆದುಕೊಂಡು ಹೊರಗೆ ಬಂದಿzರೆ. ಇವರು ಹೇಗೆ ಚುನಾವಣೆಯನ್ನು ಎದುರಿಸುತ್ತಾರೆ ಎಂದು ಪ್ರಶ್ನೆ ಮಾಡಿದರು.
ಸಚಿವ ಸಂಪುಟದ ತೀರ್ಮಾನಗಳು ಕೂಡ ವ್ಯಕ್ತಿರಿಕ್ತವಾಗಿವೆ. ಕ್ರಿಮಿನಲ್ ಕೇಸ್ ಇದ್ದವರನ್ನು ಕೇಸ್‌ನಿಂದ ಮುಕ್ತಗೊಳಿಸಲಾಗುತ್ತಿದೆ. ಆಗಾಗಿ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರವೇ ಕ್ರಿಮಿನಲ್ ಆಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಚಂದ್ರಶೇಖರ್, ಶಿವರಾಜ್, ಮಾಲತೇಶ್, ವಿನ್ಸಂಟ್ ರೋಡ್ರಿಗಸ್, ಪದ್ಮಿನಿ ಮುಂತಾದವರು ಇದ್ದರು.