ಜಿಲ್ಲಾ ಸುದ್ದಿತಾಜಾ ಸುದ್ದಿ

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ : ಜಿಪಂ ಸಿಇಒ ಲೋಖಂಡೆ…

Share Below Link

ಶಿವಮೊಗ್ಗ : ಜಿಯ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಒದಗಿಸುತ್ತಿರುವ ಶುದ್ಧ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಪೂರೈಸಲು ಕ್ರಮಕೈಗೊಳ್ಳುವಂತೆ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.
ಜಿ ವ್ಯಾಪ್ತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಡಿ ಜನವಸತಿ ಗಳಿಗೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ಹಾಗೂ ಜಿ ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸುವ ಸಲುವಾಗಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಈಗಾಗಲೇ ಸರ್ಕಾರದಿಂದ ಅನುಮೋದನೆ ಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣ ಗೊಳಿಸುವಂತೆ ಸೂಚಿಸಿದರು.
ಬರುವ ಬೇಸಿಗೆಯಲ್ಲಿ ಗ್ರಾಮೀಣ ಜನರ ಬೇಡಿಕೆಗನು ಸಾರವಾಗಿ ಕುಡಿಯುವ ನೀರನ್ನು ಒದಗಿಸಬೇಕಾದ ಅನಿವಾರ್ಯತೆ ಎದುರಾಗಬಹುದಾದ ಸಂದರ್ಭ ಗಳಲ್ಲಿ ನೀರನ್ನು ಪೂರೈಸುವ ಅಗತ್ಯಗಳಿಗೆ ಹಣಕಾಸನ್ನು ಕಾಯ್ದಿರಿಸಿಕೊಂಡು ಯೋಜನೆ ಗಳನ್ನು ರೂಪಿಸಿ, ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಂತೆ ಸಲಹೆ ನೀಡಿದರು.
ಯಾವುದೇ ಬೇಡಿಕೆಗಳಿಲ್ಲದೆ ಅನಗತ್ಯವಾಗಿ ಕೊಳವೆಬಾವಿ ಕೊರೆಯುವುದು, ನೀರಿನ ಕೊಳವೆ ಗಳನ್ನು ಅಳವಡಿಸುವುದು ಮತ್ತಿತರ ವಿಷಯಗಳಿಗೆ ಹಣ ವ್ಯಯ ಮಾಡದಂತೆ ಸೂಚಿಸಿದ ಅವರು, ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಿ, ಅಗತ್ಯತೆಗನುಸಾರವಾಗಿ ಯೋಜನೆಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.


ಪ್ರತಿವರ್ಷ ಕೆಲವು ಆಯ್ದ ಗ್ರಾಮೀಣ ಪ್ರದೇಶಗಳಲ್ಲಿ ಡಿಸೆಂಬರ್ ನಂತರದ ಮಾಹೆಗಳಲ್ಲಿ ನೀರಿನ ಕೊರತೆ ಉಲ್ಬಣಗೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬಾರದಂತೆ ಗಮನಹರಿಸಬೇಕು. ಬೇಸಿಗೆಯನ್ನು ಸಕಾಲದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬದ್ಧರಾಗಿರುವಂತೆ ಸಲಹೆ ನೀಡಿದರು.
ಶಿವಮೊಗ್ಗ ಸಮೀಪದ ಬುಳ್ಳಾಪುರದಲ್ಲಿ ಸರಬರಾಜಗು ತ್ತಿರುವ ನೀರು ಕಲುಷಿತವಾಗಿದೆ ಅಲ್ಲದೆ ಪ್ಲೋರೈಡ್‌ಯುಕ್ತವಾಗಿದೆ ಮಾತ್ರವಲ್ಲ ದುರ್ವಾಸನೆಯಿಂದ ಕೂಡಿದೆ. ಇಂತಹ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಅದನ್ನು ನಿಯಮಾನುಸಾರ ಸಂಸ್ಕರಿಸಿ, ಶುದ್ಧ ನೀರನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಯ ಅಂತರ ಗಂಗೆ, ತೊಗರ್ಸಿ, ಆವಿನಹಳ್ಳಿ ಮತ್ತು ಹುಂಚದಕಟ್ಟೆ ಗ್ರಾಮಗಳಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕ ಗಳನ್ನು ಸ್ಥಾಪಿಸಲು ಕ್ರಿಯಾ ಯೋಜನೆ ರೂಪಿಸಿ, ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹಾಗೂ ಜಿಯ ತೊಗರ್ಸಿ, ಕೋಣಂದೂರು, ಹೆಚ್ಚೆ, ರಿಪ್ಪನ್ ಪೇಟೆ ಮತ್ತು ಹರಮಘಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಆರಂಭಿಸಲು ಕ್ರಿಯಾಯೋಜನೆ ರೂಪಿಸಿ, ಪಂ.ರಾ.ಇಂ. ಸಾಗರ ವಿಭಾಗಕ್ಕೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು. ಕೇಂದ್ರ ಪುರಸ್ಕೃತ ಗೋಭರ್ದನ್ ಘಟಕ ಅನುಷ್ಟಾನ ಗೊಳಿಸಲು ಎರಡು ಯೋಜನೆಗಳಿಗೆ ಅನುಮೋದನೆಯಾಗಿದ್ದು, ಒಂದು ಘಟಕಕ್ಕೆ ೫೦ಲಕ್ಷ ರೂ. ಬಿಡುಗಡೆ ಯಾಗಿದೆ. ಇನ್ನೂ ಎರಡು ಘಟಕ ಗಳಿಗೆ ಅನುಮೋದನೆ ಪಡೆಯ ಬೇಕಾಗಿದ್ದು, ಆ ಪೈಕಿ ಬೀರನಕೆರೆಯ ಮಠದಲ್ಲಿ ಹಸುಗಳಿರುವ ಬಗ್ಗೆ ಮಾಹಿತಿ ಇದೆ. ಆದರೆ, ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿಯ ಮಠದಲ್ಲಿ ಗೋವುಗಳಲ್ಲಿದಿರುವುದು ಕಂಡುಬಂದಿದೆ. ಆದ್ದರಿಂದ ಅಭಿಯಂತರ ಸಂಗಪ್ಪ ಅವರು ಸೇರಿ ದಂತೆ ಒಂದು ತಂಡದ ಸದಸ್ಯರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಯೋಜನೆಯ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಯಲ್ಲಿ ೭೫೦೦ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾ ಗಿದ್ದು, ಈವರೆಗೆ ಸಿಟಿಜೆನ್ ಪೋರ್ಟಲ್ ಮೂಲಕ ಇಂಡೀಕ ರಿಸಲಾದ ೬೩೨೬ ಫಲಾನುಭವಿಗಳ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಪಂ ಉಪಕಾರ್ಯದರ್ಶಿಗಳಿಗೆ ಸೂಚಿಸಿದರು.
ತುಂಗಾನದಿಯ ನೀರಿನಲ್ಲಿ ಅಲ್ಯುಮಿನಿಯಮ್ ಅಂಶ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಕೆಲವು ದೈನಿಕಗಳಲ್ಲಿ ಬಿತ್ತರಗೊಂಡಿದೆ. ಆದ್ದರಿಂದ ಜಿಯಲ್ಲಿ ಪ್ರಸ್ತುತ ಪರೀಕ್ಷಿಸಲಾಗುತ್ತಿರುವ ನೀರಿನಲ್ಲಿಯೂ ಅಲ್ಯುಮಿನಿಯಂ ಅಂಶ ಇರುವ ಬಗ್ಗೆ ಪರೀಕ್ಷಿಸಬೇಕು. ಅದಕ್ಕಾಗಿ ಅಗತ್ಯವಿರುವ ರಸಾಯಿನಿಕ ಹಾಗೂ ಯಂತ್ರಗಳನ್ನು ಖರೀದಿಸುವಂತೆ ಸೂಚಿಸಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರ ರಾಜೇಂದ್ರ ಪ್ರಸಾದ್, ಶ್ರೀಮತಿ ಜಯಲಕ್ಷ್ಮಮ್ಮ, ಶ್ರೀಮತಿ ಪೂರ್ಣಿಮಾ, ಸಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.