ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಕಸಾಪ ವತಿಯಿಂದ ದತ್ತಿ ಉಪನ್ಯಾಸ…

Share Below Link

ಶಿವಮೊಗ್ಗ: ಜಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿವಿಧ ದತ್ತಿ ನಿಧಿ ಉಪನ್ಯಾಸ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.೮ ರಂದು ಬುಧವಾರ ಬೆಳಗ್ಗೆ ೧೦:೩೦ ಕ್ಕೆ ಕುವೆಂಪು ಶತಮಾ ನೋತ್ಸವ ಶಿಕ್ಷಣ ಮಹಾವಿದ್ಯಾ ಲಯ ಸಹಯೋಗದಲ್ಲಿ ಕಾಲೇ ಜಿನ ಸಭಾಂಗಣದಲ್ಲಿ ಡಾ. ಕೆ.ಎ. ಅಶೋಕ್ ಪೈ ಅವರು ನೀಡಿರುವ ಕಟೀಲು ಅಪ್ಪು ಪೈ ಮತ್ತು ಶ್ರೀಮತಿ ವಿನೋಧಿನಿ ಪೈ ದತ್ತಿ ಆಶಯದಂತೆ ಮಾನಸಿಕ ಆರೋಗ್ಯ-ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ಏರ್ಪ ಡಿಸಲಾಗಿದೆ.


ಖ್ಯಾತ ಮನ ಶಾಸ್ತ್ರಜ್ಞ ರಾದ ಡಾ. ಪ್ರೀತಿ ಶಾನ್ ಭಾಗ ಅವರು ವಿಶೇಷ ಉಪನ್ಯಾಸ ನೀಡಲಿದ್ದು, ಕಸಾಪ ಜಿ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಿ ಕರ್ನಾ ಟಕ ಸುವರ್ಣ ಮಹೋತ್ಸವ ಸಂಭ್ರಮ ವಿಷಯ ಕುರಿತು ಮಾತ ನಾಡಲಿzರೆ. ಕಾಲೇಜಿನ ಪ್ರಾಂಶು ಪಾಲರಾದ ಡಾ.ಜಿ. ಮಧು ಅವರು ಅಧ್ಯಕ್ಷತೆ ವಹಿಸಲಿzರೆ. ಶ್ರೀಕಾಂತ್ ಎನ್.ಎಚ್., ಬೆಳೆಗz ಪ್ರಭಾಕರ್ ಬಿ.ಆರ್., ಟಿ.ಪಿ. ನಾಗರಾಜ್, ಈರುಳ್ಳಿ ನಾಗರಾಜ್ ಎನ್. ಹೆಚ್., ಸುಮಿತ್ರಾ ಕೇಶವ ಮೂರ್ತಿ ಅವರು ಭಾಗವಹಿಸಲಿ zರೆ.
ನ. ೯ ರಂದು ಬೆಳಗ್ಗೆ ೧೧ ಕ್ಕೆ ಅಲ್ ಮಹಮೂದ್ ಶಿಕ್ಷಣ ಮಹಾವಿದ್ಯಾಲಯ ಸಹಯೋಗ ದಲ್ಲಿ ಕಾಲೇಜು ಸಭಾಂಗಣದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಎಂ.ಕೆ. ಸುರೇಶ್ ಕುಮಾರ್ ಅವರು ತಮ್ಮ ತಂದೆ ಎಂ.ಆರ್. ಕೃಷ್ಣಶೆಟ್ಟಿ ಅವರ ಹೆಸರಲ್ಲಿ ನೀಡಿ ರುವ ದತ್ತಿ ಆಶಯದಂತೆ ನೀರು ನಿರ್ವಹಣೆ ಎಲ್ಲರ ಜವಾಬ್ದಾರಿ ವಿಚಾರವಾಗಿ ಮಹಾನಗರ ಪಾಲಿಕೆ ಸದಸ್ಯ ಯಮುನಾ ರಂಗೇಗೌಡ ಅವರು ಮಾತನಾಡಲಿzರೆ. ಕಸಾಪ ಜಿ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಲಿದ್ದು, ಕಾಲೇಜು ಆಡಳಿತಾಧಿಕಾರಿ ಅಬ್ದುಲ್ ಅಹಾದ್ ಅಧ್ಯಕ್ಷತೆ ವಹಿಸಲಿzರೆ. ಇದೇ ಸಂದರ್ಭ ದಲ್ಲಿ ದಿ. ವೈ. ಎಸ್. ಪುಟ್ಟಣ್ಣ ಅವರು ಗುತ್ತಿ ಎಡೇಹಳ್ಳಿ ಸೂರಪ್ಪ ಗೌಡರ ಹೆಸರಲ್ಲಿ ನೀಡಿರುವ ದತ್ತಿ ಆಶಯದಂತೆ ಡಿ.ವಿ. ಗುಂಡಪ್ಪ ನವರ ಬದುಕು ಬರಹ ಕುರಿತು ವಿಶ್ರಾಂತ ಉಪಾಧ್ಯಕ್ಷರಾದ ಎಂ.ಎಸ್. ವಿನಾಯಕ ಅವರು ಉಪನ್ಯಾಸ ನೀಡಲಿzರೆ. ಕಾಲೇಜು ಪ್ರಾಂಶುಪಾಲರಾದ ಡಾ.ಎಂ. ಸೋಮಶೇಖರ್ ಉಪಸ್ಥಿತರಿರುವರು. ಕಸಾಪ ಸದಸ್ಯರು, ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಭಾಗವಹಿಸಲು ಕಸಾಪ ಜಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ವಿನಂತಿಸಿzರೆ.