ದಾನವೇ ಸೇವೆಯ ಪ್ರತಿರೂಪ …
ಶಿವಮೊಗ್ಗ : ಭಾರತದಲ್ಲಿ ಸೇವೆಗೆ ಪ್ರಾಚೀನ ಇತಿಹಾಸವಿದೆ. ಕೌಟಲ್ಯನ ಅರ್ಥಶಾಸ್ತ್ರದಲ್ಲಿ ಸೇವೆ ಯ ಉಖವಿದೆ. ದಾನ ಸೇವೆ ಯ ಪ್ರತಿರೂಪ ಎಂದು ‘ಆಚಾರ್‍ಯರತ್ನ ಪ್ರಶಸ್ತಿ’ ವಿಜೇತ ಡಾ. ಬಾಲಕೃಷ್ಣಹೆಗಡೆ ಹೇಳಿದರು.
ಅವರಿಗೆ ರೋಟರಿ ಶಿವಮೊಗ್ಗ ಜ್ಯೂಬಿಲಿ ಆಯೋಜಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶ್ರಮದಾನ, ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ, ನನಗಲ್ಲ -ನಿನಗೆ ಎಂಬುದೆ ಸಮಾಜಸೇವೆ. ಸ್ವಾರ್ಥಿಗಳು ಏಕಾಂಗಿ ಯಾಗಿರು ತ್ತಾರೆ. ಸ್ವ-ಹಿತ ಮೀರಿದ ಸೇವೆಯಿ ಂದ ರೋಟರಿ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಕುಗ್ರಾ ಮದ ಅನಕ್ಷರಸ್ತ ಮಹಿಳೆ ತುಳಸಿ ಗೌಡರನ್ನು ರಾಷ್ಟ್ರ ಗುರ್ತಿಸಿದ್ದು ಅವರ ನಿಸ್ವಾರ್ಥ ಸೇವೆಯಿಂದ. ನಾವು ಮಾಡುವ ಸೇವಾ ಕಾರ್ಯ ವನ್ನು ಗುರ್ತಿಸಿ ಪ್ರಶಸ್ತಿಗಳು ಹುಡು ಕಿಕೊಂಡು ಬರುತ್ತವೆ, ಸನ್ಮಾನಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ, ಶಿಕಾರಿಪುರದ ರಾಂಗನಾಥರಾವ್, (ಎಸ್.ಆರ್.ರಾವ್) ಮುಂತಾದ ವರು ಕರ್ತವ್ಯದಲ್ಲಿ ಸೇವೆ ಕಂಡು ಕೊಂಡು ಹೆಸರುವಾಸಿ ಯಾದರು. ಸೈನಿಕರ ಪತ್ನಿಯರು ಉತ್ತಮ ಸೇವೆ ಸಲ್ಲಿಸಿ ಎಂದು ಯುದ್ದ ಭೂಮಿಗೆ ಕಳಿಸುತ್ತಾರೆ. ನಮ್ಮ ವಿದ್ವಾಂಸರಾದ ಕೇರಳದ ಮಾಧವ-ನೀಲಕಂಠ ರವರು ಗಣಿತದ ನಿಪುಣರು. ಕ್ಯಾಲ್ಕ್ಯುಲಸ್ ಲೆಕ್ಕದ ಬಗೆಯನ್ನು ಹದಿನಾಲ್ಕನೇ ಶತಮಾನದ ಕಂಡು ಹಿಡಿದಿದ್ದರು ಎಂದರು.
ಅಧ್ಯಕ್ಷ ರೊ.ರೇಣುಕಾರಾದ್ಯ ರವರು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಡಾ.ಬಾಲಕೃಷ್ಣಹೆಗಡೆಯವರು ಆಡು ಮುಟ್ಟದ ಗಿಡವಿಲ್ಲ ಎಂಬಂತೆ ಅವರು ಕಾರ್ಯ ನಿರ್ವಹಿಸದ ವಿಷಯಗಳೆ ಇಲ್ಲ, ಇತಿಹಾಸ, ಸಂಶೋಧನೆ, ಸಂಸ್ಕೃತಿ, ನಾಟಕ, ಸಿನಿಮಾ ಕ್ರೀಡೆ, ಪತ್ರಿಕೋದ್ಯಮ ಹೀಗೆ ಹತ್ತು ಹಲವಾರು ಕಾರ್ಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿರುವು ದರಿಂದ ಇವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. ಇಂತ ವರನ್ನು ಗುರ್ತಿಸಿ ಸನ್ಮಾನಿಸಿ ಗೌರ ವಿಸುವುದೇ ನಮ್ಮ ರೋಟರಿಯ ದೇಯ ಉದ್ದೇಶ ಎಂದು ತಿಳಿಸಿ ದರು.
ರೂಪ ಪುಣ್ಯಕೋಟಿ ಪ್ರಾರ್ಥಿ ಸಿದರು, ವಾಗೇಶ್ ಪ್ರಾಸ್ಥಾವಿಕ ವಾಗಿ ಮಾತನಾಡಿದರು, ಗುರು ಪಾದಪ್ಪನವರು ಸ್ವಾಗತಿಸಿ, ನಾಗ ರಾಜ್ ನಿರೂಪಿಸಿ, ಲಕ್ಷ್ಮೀನಾರಾ ಯಣ್ ವಂದಿಸಿದರು.