ಕವನಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಾಹಿತ್ಯ ನೇರವಾಗಿ ಸರಳವಾಗಿದ್ದರೆ ಚನ್ನ : ಅಸಾದು ಬೇಗ್

Share Below Link

ಶಿವಮೊಗ್ಗ : ಶಾಲಾ ಹಂತದಲ್ಲಿ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸ ಬೇಕು. ಭಾಷಾ ಕಲಿಕೆ, ಸ್ಪಷ್ಟವಾಗಿ ಓದುವುದು ಬರೆಯುವುದು ರೂಢಿಸಬೇಕು. ಅದಕ್ಕಾಗೆ ಕಳೆದ ೧೮ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದೇವೆ. ಅದೇರೀತಿ ಈ ಬಾರಿಯು ಶಾಲಾ ಕಾಲೇಜು ಹಂತ ದಲ್ಲಿ ಸಾಹಿತ್ಯ ಕಮ್ಮಟ ನಡೆಸುತ್ತಿ ದ್ದೇವೆ ಎಂದು ಡಿ. ಮಂಜುನಾಥ ವಿವರಿಸಿದರು.
ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಸಭಾಂಗಣದಲ್ಲಿ ಜೂ.೧೮ ರಂದು ಇಡೀದಿನ ನಡೆದ ಸಾಹಿತ್ಯ ರಚನಾ ಕಮ್ಮಟ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಅಭಿರುಚಿ ಮೂಡಿಸಲು ಕಥೆ, ಕವನ, ಪ್ರಬಂಧ ವಿಚಾರವಾಗಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿzರೆ. ಅವುಗ ಳನ್ನು ಗ್ರಹಿಸಿ. ನಿಮಗೆ ಇಷ್ಟವಾದ ಸಾಹಿತ್ಯ ಬರೆಯುವ ಪ್ರಯತ್ನ ಮಾಡಿ ಎಂದು ವಿವರಿಸಿದರು.
ಸಾಹಿತಿ, ಶಯರಿ ಕವಿ ಎಂದು ಖ್ಯಾತರಾದ ಅಸಾದು ಬೇಗ್ ಅವರು ಕಾವ್ಯ ಎಂದರೆ ಏನು, ಅದನ್ನು ಬರೆಯುವ ಕ್ರಮಗಳು ಹೇಗೆ, ಕಾವ್ಯ ಆಸ್ವಾದಿಸುವ ಕ್ರಮ ಕುರಿತು ಮಾಹಿತಿ ನೀಡಿದರು.
ಕವಿತೆ ಬರೆಯಲು ಉತ್ಸಾಹ ಬೇಕು. ಸಾಹಿತ್ಯದ ವಿದ್ಯಾರ್ಥಿ ಆಗಬೇಕಿಲ್ಲ. ನೇರವಾಗಿ, ಸರಳ ವಾಗಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳುವ ಬಗೆಯನ್ನು ವಿವರಿಸಿ ಹೇಳಿದರು.
ಸಾಹಿತಿ, ಅಂಕಣಕಾರ ಬಿ. ಚಂದ್ರೇಗೌಡರು ಮಾತನಾಡಿ, ಕನ್ನಡದ ಎ ಸಾಹಿತಿಗಳು ಒಂದು ಕಾಲದಲ್ಲಿ ಪ್ರಬಂಧ ಕಾರರಾಗಿದ್ದರು. ಕಣ್ಣಿಗೆ ಕಂಡಿದ್ದನ್ನು ಪ್ರಾಮಾಣಿಕ ವಾಗಿ ಬರೆಯುವುದು. ಆ ಬರವಣಿಗೆಗೆ ಕಲ್ಪನೆ ಸೇರಿಸಬೇಕು. ಅದೂ ಪ್ರಾಮಾಣಿಕವಾಗಿರಬೇಕು. ನಿಮ್ಮ ಸುತ್ತಾ ಮುತ್ತಾ ಎ ಇವೆ. ಅವುಗಳನ್ನು ಗಮನಿಸಬೇಕು. ಎಲ್ಲರೂ ಲೇಖಕರಾಗದಿದ್ದರೂ ಸಾಹಿತ್ಯ ಆಸಕ್ತಿ ರೂಢಿಸಿಕೊಳ್ಳಿ ಎಂದು ವಿವರಿಸಿದರು.
ರಂಗ ನಿರ್ದೇಶಕರು, ಉಪಾಧ್ಯಕ್ಷರಾದ ಡಾ. ಜಿ. ಆರ್. ಲವ ಅವರು ಕಥೆ ಎಂದರೆ ಏನು. ಕಥೆ ಎಲ್ಲರಿಗೂ ಇಷ್ಟ. ಅದನ್ನು ಓದುವ, ಕೇಳುವ, ಹೇಳುವ ಕಲೆಯನ್ನು ವಿವರಿಸುತ್ತಲೆ ಬರೆಯುವ ಕ್ರಮ ಕುರಿತು ವಿವರಿಸಿದರು.
ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಶೋಭಾ ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ, ಸಮ್ಮೇಳನ ದೊಡ್ಡವರಿಗೇ ಮಾತ್ರ ಎಂದು ಕೊಂಡಿದ್ದ ಕಾಲವಿತ್ತು. ಆದರೆ ಶಾಲಾ ಹಂತಕ್ಕೆ ತಂದು ಸಾಹಿತ್ಯ ಮಾರ್ಗದರ್ಶನ ಮಾಡಿ ಮಕ್ಕಳಿಗೆ ಸಮ್ಮೇಳನದ ಅವಕಾಶ ದೊರಕಿಸುತ್ತಿ ರುವ ಡಿ. ಮಂಜುನಾಥ ಮತ್ತು ತಂಡದ ನಿರಂತರ ಪರಿಶ್ರಮದಿಂದ ನಮ್ಮ ಮಕ್ಕಳ ಆಲೋಚನಾ ಕ್ರಮ ಬದಲಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.
ಶಿಕ್ಷಕರಾದ ವಿಜಯಾಶ್ರೀ, ವೈಷ್ಣವಿ ಪ್ರಾರ್ಥನೆ ಹಾಡಿದರು. ಮುಖ್ಯ ಶಿಕ್ಷಕ ವೆಂಕಟೇಶ್ ಸ್ವಾಗತಿಸಿ, ಸಂತೋಷ ವಂದಿಸಿದರು. ಜಿ ಕಾರ್ಯದರ್ಶಿ ಡಿ. ಗಣೇಶ್ ನಿರ್ವಹಿಸಿದರು.

Leave a Reply

Your email address will not be published. Required fields are marked *