ಜಿಲ್ಲಾ ಸುದ್ದಿತಾಜಾ ಸುದ್ದಿ

ಐಐಎಫ್ ರಾಷ್ಟ್ರೀಯ ಅಧ್ಯಕ್ಷರಾಗಿ ಚಂದ್ರಶೇಖರ್ ಅಧಿಕಾರ ಸ್ವೀಕಾರ…

Share Below Link

ಶಿವಮೊಗ್ಗ: ದೇಶದಲ್ಲಿ ಫೌಂಡ್ರಿ ಉದ್ಯಮ ಮತ್ತಷ್ಟು ವಿಸ್ತರಿಸುವ ದೃಷ್ಠಿಯಿಂದ ಜವಾಬ್ದಾರಿಯುತ ಪ್ರಯತ್ನ ನಡೆಸಲಾಗುವುದು. ಬರುವ ದಿನಗಳಲ್ಲಿ ಅತ್ತ್ಯುತ್ತಮ ನಿರ್ಧಾರಗಳ ಮೂಲಕ ಫೌಂಡ್ರಿ ಉದ್ಯಮಕ್ಕೆ ಹೆಚ್ಚಿನ ಸೇವೆ ಒದಗಿಸುವ ವಿಶ್ವಾಸವಿದೆ ಎಂದು ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ. ಎಸ್. ಚಂದ್ರಶೇಖರ್ ಹೇಳಿದರು.
ಐಐಎಫ್ ಸರ್ವ ಸದಸ್ಯರ ಸಭೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಫೌಂಡ್ರಿ ಉದ್ಯಮ ದೇಶಾದ್ಯಂತ ಬಲಿಷ್ಠವಾಗಿ ಬೆಳೆಯುವಲ್ಲಿ ಐಐಎಫ್ ಸಂಸ್ಥೆಯ ಹಿಂದಿನ ಎಲ್ಲ ಅಧ್ಯಕ್ಷರು, ಸದಸ್ಯರ ಅಪಾರ ಶ್ರಮ ಇದ್ದು, ಪ್ರತಿ ವರ್ಷ ಮೆಗಾ ಕಾರ್ಯಕ್ರಮಗಳ ಮೂಲಕ ಫೌಂಡ್ರಿ ಉದ್ಯಮ ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ ಎಂದರು.
ಐಐಎಫ್ ಸಂಸ್ಥೆಯ ಸದಸ್ಯರ ಸಂಖ್ಯೆ ೫೦೦೦ ಗುರಿ ತಲುಪಿಸುವ ಉದ್ದೇಶವಿದ್ದು, ದಕ್ಷಿಣ ವಲಯ ಸೇರಿದಂತೆ ಎಲ್ಲ ವಲಯಗಳಲ್ಲೂ ಉತ್ತಮ ಪ್ರಯತ್ನ ನಡೆಯುತ್ತಿದೆ. ಬರುವ ವರ್ಷಗಳಲ್ಲಿ ಸದಸ್ಯರ ಸಂಖ್ಯೆ ೫೦೦೦ ದಾಟುವ ಭರವಸೆ ಯಿದೆ. ಸಂಸ್ಥೆಯು ಎಲ್ಲ ಸದಸ್ಯರ ಸಹಕಾರ ಮುಖ್ಯ ಎಂದರು.
ವಿ ಕಾಸ್ಟ್ ಥೀಮ್ ಆಶಯದೊಂದಿಗೆ ಐಐಎಫ್ ಕಾರ್ಯ ನಿರ್ವಹಿಸಲಿದ್ದು, ಹೊಸ ತಂತ್ರeನದ ಸಂಪೂರ್ಣ ಬಳಕೆ ಮಾಡಿಕೊಳ್ಳಲಾಗುವುದು. ದೇಶಾದ್ಯಂತ ಎಲ್ಲ ಫೌಂಡ್ರಿ ಉದ್ಯಮಿಗಳಿಗೆ ಹಾಗೂ ಹೊಸ ದಾಗಿ ಉದ್ಯಮ ಆರಂಭಿಸುವವರಿಗೆ ಸೂಕ್ತ ಮಾರ್ಗದರ್ಶನ, ವಿಶೇಷ ತರಬೇತಿ ಉಪನ್ಯಾಸಗಳು, ಮೆಗಾ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶಕ್ತಿ ತುಂಬುವ ಕಾರ್ಯ ನಡೆಸಲಾಗುತ್ತದೆ ಎಂದರು.
ಐಐಎಫ್ ಸರ್ವ ಸದಸ್ಯರ ಸಭೆಯಲ್ಲಿ ಕೊಯಮತ್ತೂರಿನ ಮುತ್ತುಕುಮಾರ್.ಎಸ್. ಗೌರವ ಕಾರ್ಯದರ್ಶಿಯಾಗಿ, ನಾಗಪುರದ ಸುಶೀಲ್ ಶರ್ಮಾ ಖಜಂಚಿ ಯಾಗಿ ಅಧಿಕಾರ ವಹಿಸಿಕೊಂಡರು. ಶಿವಮೊಗ್ಗದ ವಿಜಯ್ ಟೆಕ್ನೋಕ್ರ್ಯಾಟ್ಸ್‌ನ ಡಿ.ಜಿ.ಬೆನಕಪ್ಪ, ಪಿಯರ್ ಲೈಟ್ ಲೈನರ್ಸ್‌ನ ಅಂಕಿತ್ ಎಸ.ದಿವೇಕರ್, ಶ್ರೇಯೋನಿಧಿ ಎಂಟರ್‌ಪ್ರೈಸ್ ಜಿ.ವಿ.ಕಿರಣ್‌ಕುಮಾರ್ ಐಐಎಫ್ ೨೦೨೩-೨೫ ಸಾಲಿನ ರಾಷ್ಟ್ರೀಯ ಕೌನ್ಸಿಲ್‌ಗೆ ಚುನಾಯಿತರಾಗಿzರೆ.
ದೇಶದ ೧೫ ರಾಜ್ಯಗಳ ನೂರಾರು ಫೌಂಡ್ರಿ ಸದಸ್ಯರು ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡಿ ದ್ದರು. ಐಐಎಫ್ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ವಿನಿತ್ ಜೈನ್, ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಗುಪ್ತಾ, ನಿಕಟಪೂರ್ವ ಖಜಂಚಿ ಎಸ್.ಕುಪ್ಪಸ್ವಾಮಿ, ಐಐಎಫ್ ಮಾಜಿ ಅಧ್ಯಕ್ಷ ದೇವೆಂದ್ರ ಜೈನ್, ಡಾ. ಅಭಿಷಿಕ್ತ ಚೌದರಿ ಮತ್ತಿತರರು ಉಪಸ್ಥಿತರಿದ್ದರು. ಐಐಎಫ್ ಶಿವಮೊಗ್ಗ ಘಟಕದ ಪದಾಧಿಕಾರಿಗಳು ಹಾಜರಿದ್ದರು.