ಸಿಇಟಿ: ನ್ಯಾಯಕ್ಕೆ ಆಗ್ರಹಿಸಿ ಎಬಿವಿಪಿಯಿಂದ ರಸ್ತೆ ತಡೆದು ಪ್ರತಿಭಟನೆ…
ಶಿವಮೊಗ್ಗ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ೨೦೨೪ರ ಪರೀಕ್ಷೆಯಲ್ಲಿ ಆಗಿರುವ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿ ಗಳಿಗೆ ನ್ಯಾಯ ನೀಡ ಬೇಕೆಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಶಿವಪ್ಪನಾಯಕ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾ ಯಿತು.
ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರ್, ಮೆಡಿಕಲ್, ಡೆಂಟಲ್ ಮತ್ತು ಇತರೆ ಸೀಟು ಗಳನ್ನು ಸಮರ್ಥವಾಗಿ ಅರ್ಹತೆ ಆಧಾರದಲ್ಲಿ ಹಂಚಿಕೆ ಮಾಡುವ ದೃಷ್ಟಿಯಿಂದ ಸಿಇಟಿ ಆರಂಭವಾ ಗಿದೆ. ಆದರೆ, ಈಗ ಈ ಸಿಇಟಿ ಪರೀಕ್ಷೆಯಲ್ಲಿ ಅನೇಕ ನ್ಯೂನ್ಯತೆ ಗಳು ಕಂಡು ಬರುತ್ತಿವೆ. ವಿದ್ಯಾರ್ಥಿ ಗಳ ಪಾಲಿಗೆ ನಂಬಿಕೆಯನ್ನು ಕಳೆದು ಕೊಂಡಿವೆ. ರಾಜ್ಯ ಸರ್ಕಾರಗಳ ನ್ಯೂನ್ಯತೆ ಮತ್ತು ಇಚ್ಛಾಶಕ್ತಿ ಕೊರತೆಯಿಂದ ಮನಬಂದಂತೆ ಪರೀಕ್ಷೆಗಳನ್ನ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೆಇಎಯಿಂದ ಹತ್ತು ಹಲವಾರು ಪರೀಕ್ಷೆಗಳು ನಡೆಯುತ್ತಿ ದ್ದವು. ಆದರೆ ಈಗ ಪರೀಕ್ಷೆಗಳಲ್ಲಿ ಅಕ್ರಮದ ಕರಿನೆರಳು ಬಿದ್ದಿದೆ. ಒಂದು ಒಳ್ಳೆಯ ಸಂಸ್ಥೆಯನ್ನೇ ದಿಕ್ಕುತಪ್ಪಿಸುವ ಕೆಲಸ ನಡೆದಿದೆ. ಪ್ರಸ್ತುತ ವರ್ಷದ ಸಿಇಟಿ ಪರೀಕ್ಷೆ ಯಲ್ಲಿ ಒಂದು ದೊಡ್ಡ ಅವಾಂತ ರವೇ ಆಗಿದೆ. ಸಿಇಟಿಯಲ್ಲಿ ಪಠ್ಯದಲ್ಲಿ ಇಲ್ಲದ ಭೌತಶಾಸ್ತ್ರದಲ್ಲಿ ೧೦, ಗಣಿತದಲ್ಲಿ ೧೪, ರಸಾಯನ ಶಾಸ್ತ್ರದಲ್ಲಿ ೨೩, ಜೀವಶಾಸ್ತ್ರದಲ್ಲಿ ೧೨ ಪ್ರಶ್ನೆಗಳನ್ನು ಕೇಳಲಾಗಿದೆ. ಇದರಿಂದ ವಿದ್ಯಾ ರ್ಥಿಗಳಿಗೆ ಅತ್ಯಂತ ಸಮಸ್ಯೆ ಯಾಗಿದೆ. ಇದನ್ನು ಎಬಿವಿಪಿ ಖಂಡಿಸುತ್ತದೆ ಎಂದು ತಿಳಿಸಿದರು.
ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿರುವುದರಿಂದ ಸುಮಾರು ೩ ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಟವಾಡ ಲಾಗಿದೆ. ಆದ್ದರಿಂದ ಸಮಸ್ಯೆ ಸೃಷ್ಟಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಬೇಕು. ಸಿಇಟಿ ಗೊಂದಲ ಬಗೆಹರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾ ಗಿದೆ.
ಪ್ರತಿಭಟನೆಯಲ್ಲಿ ಪ್ರವೀಣ್, ರವಿ, ಶರಣ್, ವರುಣ್, ಅಭಿಷೇಕ್, ಪುನೀತ್, ಕಾರ್ತಿಕ್, ಜೀವಿತ್ ಸೇರಿದಂತೆ ಹಲವರಿದ್ದರು.