ನೈಜಿಲ್ ನಿಧನಕ್ಕೆ ಗಣ್ಯರ ಸಂತಾಪ…
ಶಿವಮೊಗ್ಗ : ಜಯನಗರ ನಿವಾಸಿ ಹಾಗೂ ಕ್ರೈಸ್ತ ಸಮಾಜದ ಮುಖಂಡರಾದ ಡಿ. ಆಂಟೋನಿ ಅವರ ಮೊಮ್ಮಗ, ನವೀನ್-ನಿಶಾ ದಂಪತಿಗಳ ಪುತ್ರ ನೈಜಿಲ್ (೨೦) ಅಕಾಲಿಕವಾಗಿ ನಿಧನರಾಗಿzರೆ.
ಮೃತರು ಅಜ್ಜ, ತಂದೆ, ತಾಯಿ ಮತ್ತು ಸಹೋದರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯ ಪೂಜಾವಿಧಿಗಳು ಸೆ.೩೦ರ ಇಂದು ಸಂಜೆ ೪ ಗಂಟೆಗೆ ನಗರದ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ನೆರವೇರಿತು, ನಂತರ ಅಂತ್ಯ ಸಂಸ್ಕಾರವು ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಹತ್ತಿರದ ಚಿರಶಾಂತಿ ಧಾಮ ( ಕ್ರೈಸ್ತ ಸಮಾಧಿ) ದಲ್ಲಿ ನಡೆಯಿತು.
ಸಂತಾಪ: ನೈಜಿಲ್ ಅವರ ನಿಧನಕ್ಕೆ ಸೇಕ್ರೆಡ್ ಹಾರ್ಟ್ ಚರ್ಚ್ನ ಪ್ರಧಾನ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ, ಸೇಕ್ರೆಡ್ ಹಾರ್ಟ್ ಚರ್ಚ್ನ ಯುವ ಸಂಘನೆ, ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರಾದ ರಾಕೇಶ್ ಡಿಸೋಜ, ಜೋಸೆಫ್ ಟೆಲ್ಲಿಸ್, ಕಿರಣ್ ಫರ್ನಾಂಡಿಸ್, ಸ್ವಾಮಿನಾಥನ್, ವಿನ್ಸೆಂಟ್ ರೋಡ್ರಿಗಸ್, ಪ್ಯಾಟ್ರಿಕ್ ಲೋಬೋ, ರಾಬರ್ಟ್ ಡಿಸೋಜ ರೇಮಂಡ್ ಡಿಮೆಲ್ಲೋ, ಚಿರಂಜೀವಿ ಬಾಬು, ಅಂತೋಣಿ ಬ್ರಿಟ್ಟೋ, ಮರಿಯಪ್ಪ, ಚಿನ್ನಪ್ಪ, ಸ್ಟ್ಯಾನಿ ಮಾರ್ಟಿಸ್, ಜಯಶೀಲನ್ ಸೇರಿದಂತೆ ಇನ್ನಿತರ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.



