ಸಂಭ್ರಮ ಶನಿವಾರ ಮಕ್ಕಳ ಕಲಿಕೆಗೆ ಪೂರಕ
ನಂದವಾಡ: ಇಲ್ಲಿನ ಸರ್ಕಾರಿ ಹೆಣ್ಮು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಿಂಗಳ ೩ನೇ ಶನಿವಾರ ‘ಸಂಭ್ರಮ ಶನಿವಾರ’ ಕಾರ್‍ಯಕ್ರಮ ಆಯೋಜಿಸಲಾಯಿತು.
ಡಿಎಸ್‌ಇಆರ್‌ಟಿ ನಿರ್ದೇಶನ ದಂತೆ ‘ಸಂಭ್ರಮ ಶನಿವಾರ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಯರು ಸಂತಸದಿಂದ ಭಾಗವಹಿಸುವ ಮೂಲಕ ಯಶಸ್ವಿ ಗೊಳಿಸಿದರು. ಆರೋಗ್ಯಕರ ಜೀವನ ಶೈಲಿ ವಿಷಯದೊಂದಿಗೆ ೧ನೇ ತರಗತಿಯಿಂದ ೭ನೇ ತರಗತಿ ವರೆಗೆ ತಂಡಗಳಾಗಿ ಮಾಡಿ ನಿರೂಪಕ ನೇತೃತ್ವದಲ್ಲಿ ಚಟುವಟಿಕೆ ಮಾಡಿಸಲಾಯಿತು.
ಮಕ್ಕಳು ಅರಿವು, ಅನುಭವ, ಅವಲೋಕನದೊಂದಿಗೆ ಅಭಿಪ್ರಾಯ ಮಂಡಿಸಿ ಚಟುವಟಿಕೆ ಯಲ್ಲಿ ಪಾಲ್ಗೊಂಡರು. ಬ್ಯಾಗ್‌ರಹಿತ ದಿನವಾದ ‘ಸಂಭ್ರಮ ಶನಿವಾರ’ ಕಾರ್ಯಕ್ರಮ ಆಯೋಜಿಸಿದ್ದು ಮಕ್ಕಳಿಗೆ ಸಹಕಾರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.