ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಅವಗುಣಗಳಿಂದ ಮುಕ್ತರಾಗಲು ಹಬ್ಬಗಳ ಆಚರಣೆ ಸಹಾರಿ

Share Below Link

ಭದ್ರಾವತಿ: ನಾವು ನಮ್ಮ ಜೀವನದಲ್ಲಿ ಸುಖ, ಸಂತೋಷ, ಶಾಂತಿ, ನೆಮ್ಮದಿ, ಖುಷಿಯಿಂದ ಬದುಕಬೇಕು, ನಮ್ಮ ಆಸೆ ಆಕಾಂಕ್ಷೆಗಳು ಈಡೇರಬೇಕು ಅದಕ್ಕಾಗಿ ದೇವರ ಪೂಜೆ ಪ್ರಾರ್ಥನೆ ಮಾಡುತ್ತೇವೆ. ಇದರ ಜೊತೆಯಲ್ಲಿ ನಮ್ಮ ಕಷ್ಟ ಕಾರ್ಪಣ್ಯಗಳ ನಿವಾರಣೆಯೂ ಸಹ ಆಗಬೇಕು ಎಂದು ಸಹ ಬೇಡಿಕೊಳ್ಳುತ್ತೇವೆ. ಅವುಗಳನ್ನು ದೇವಿಯು ಭಕ್ತರ ಭಕ್ತಾನುಸಾರ ಈಡೇರಿಸುತ್ತಾಳೆ ಎಂದು ಗೌರಿಗzಯ ಆವಧೂತರಾದ ಶ್ರೀ ವಿನಯ್ ಗುರೂಜಿ ನುಡಿದರು.
ಅವರು ನಗರದಲ್ಲಿನ ಅವರ ಭಕ್ತ ವೃಂದದವರು ಸಿzರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ನವರಾತ್ರಿ ಹಬ್ಬದ ಪ್ರಯುಕ್ತ ಭದ್ರಾವತಿಯ ಅಭಿವೃದ್ಧಿಗಾಗಿ ದುರ್ಗ ಸಪ್ತಶತಿ ಪರಾಯಣ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತರನ್ನು ಉದ್ದೇಶಿಸಿ ಅಶೀರ್ವಚನ ನೀಡಿದರು.


ನಾವುಗಳು ನಮ್ಮ ಎ ಅವಗುಣಗಳಿಂದ ಮುಕ್ತರಾಗ ಬೇಕು. ಅದಕ್ಕೆ ಹಬ್ಬಗಳ ಆಚರಣೆ ಮಾಡುವುದು. ಈ ಹಬ್ಬದ ಸಂದರ್ಭದಲ್ಲಿ ಸಂಸಾರಿಗಳು ತಮ್ಮ ಸಂಸಾರ ದುಖಃ ಕಷ್ಟಗಳ ನಿವಾರಣೆ ಬಗ್ಗೆ, ಸನ್ಯಾಸಿಗಳು ಮೋಕ್ಷ ಸಾಧನೆಗಾಗಿ, ನಾಡಿನ ಶಾಂತಿ, ನೆಮ್ಮದಿಗಾಗಿ ಪೂಜೆ ಪುನಕಸ್ಕಾರ ಗಳನ್ನು ಉಪವಾಸ, ಸಾಧನೆಗಳನ್ನು ಮಾಡುತ್ತಾರೆ ಎಂದರು.
ಈ ಸಂಧರ್ಭದಲ್ಲಿ ನಾವು ದೇವಿಯನ್ನು ಯಾವ ಭಾವದಲ್ಲಿ ಪೂಜಿಸುತ್ತೇವೊ ಆ ರೀತಿಯಲ್ಲಿ ಆಶೀರ್ವಾದ ಮಾಡುತ್ತಾಳೆ. ಅದರೆ ಪೂಜೆ ಮಾಡುವ ಉದ್ದೇಶ, ಆಚರಣೆಯನ್ನು ಮಂತ್ರ, ಭಾವ ಪ್ರತಿಷ್ಟೆ ತಂತ್ರ ಪ್ರತಿಷ್ಠೆ, ಯಂತ್ರ ಪ್ರತಿಷ್ಟೆ, ಕರ್ಮ ಪ್ರತಿಷ್ಟೆ, ಭಕ್ತಿಯ ಭಜನೆಗಳನ್ನು, ಇವುಗಳ ಹಿನ್ನಲೆ ಹಾಗು ಇದರ ರೀತಿ ನೀತಿಯನ್ನು ತಿಳಿದುಕೊಂಡು ಮಾಡಬೇಕು. ಇದರಲ್ಲಿ ಆಯಾಯ ವರ್ಗದವರು ಅವರವರ ಪದ್ದತಿಯಂತೆ ಮಾಡು ತ್ತಾರೆ. ಇದರಿಂದ ಆಕೆ ಸಂತೃಪ್ತಗೊಂಡು ಉತ್ತಮ ಫಲವನ್ನು ಕೊಡುತ್ತಾಳೆ ಎಂದರು.
ಪೂಜೆ ಮಾಡುವಲ್ಲಿ ದೇವರ ಮಂತ್ರಗಳನ್ನು ಹೇಳುತ್ತೇವೆ. ಅದರ ಮಹತ್ವ ಗೊತ್ತಿರುವುದಿಲ್ಲ. ಆದರೆ ಅದನ್ನು ತಿಳಿದು ಹೇಳಿದಾಗ ಉತ್ತಮ ಫಲ ದೊರೆಯುತ್ತದೆ. ಆದರೆ ಭಕ್ತಿ ಮಾರ್ಗದಲ್ಲಿ ಮಾಡುವ ದೇವರ ಪೂಜೆಯಲ್ಲಿ ತಪ್ಪಾದರೆ ಯಾವ ಅನರ್ಥ ಉಂಟಾಗುವುದಿಲ್ಲ ಹಾಗು ತೊಂದರೆ ಆಗುವುದಿಲ್ಲ. ಆದರೆ ಬೇರೆ ರೀತಿಯಲ್ಲಿ ಪದ್ದತಿಯಲ್ಲಿ ಮಾಡುವಾಗ ತಪ್ಪಾದರೆ ತೊಂದರೆ ತಾಪತ್ರಯಗಳು ಉಂಟಾಗ ಬಹುದು ಎಂದು ಎಚ್ಚರಿಸಿದರು.
ಇಂದು eನವನ್ನು ಪಡೆಯುವುದು ದೊಡ್ಡದಲ್ಲ, ಆದರೆ eನವನ್ನು ಪಡೆದ ಮೇಲೆ ನಾವು ಯಾವ ರೀತಿಯಲ್ಲಿ ನಡೆದು ಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ನನಗೆ ಒಳ್ಳೆಯದಾಗಿzರೆ, ಅದು ಇನ್ನೊಬ್ಬರಿಗೂ ಒಳ್ಳೆಯ ದಾಗಬೇಕು ಎಂದು ಬಯಸುವುದೆ ಮಾನವ ಧರ್ಮ, ಇದರ ಜೊತೆಗೆ ಹೋಮ, ಹವನ, ಮಂಡಲ ಪೂಜೆಗಳನ್ನು ಮಾಡುತ್ತೇವೆ. ಅದರೆ ಅವುಗಳನ್ನು ಕ್ರಮವರಿತು ಮಾಡಬೇಕು. ಇಲ್ಲದಿದ್ದರೆ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಪೂಜೆ ಎಂದ ಮೇಲೆ ಎಲ್ಲಿಯೋ ಹೇಗೆ ಬೇಕಾದರೆ ಹಾಗೆ ಮಾಡುವುದು ಸರಿಯಲ್ಲ. ಈ ರೀತಿ ತಪ್ಪುಗಳು ಬಹಳ ಆಗುತ್ತದೆ. ಇದರ ಬಗ್ಗೆ ಬಹಳ ಎಚ್ಚರದಿಂದ ಇದ್ದು ಮಾಡಬೇಕು. ಲೋಪ ಆಗದಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ದೈವ ಪೋಪಕ್ಕೆ ತುತ್ತಾಗಬೇಕಾ ಗುತ್ತದೆ ಎಂದು ಎಚ್ಚರಿಸಿದರು.
ದೇವರ ಪೂಜೆಯ ಹೆಸರಿನಲ್ಲಿ ನಾವು ದೇವರಿಗೆ ಕೊಡಬೇಕಾದ ವಸ್ತುಗಳನ್ನು ದಾನಗಳನ್ನು ಕೊಡುತ್ತೇವೆ. ಆದರೆ ಅವುಗಳನ್ನು ಕೊಡುವಾಗ ಅವುಗಳು ಪರಿಶುಧ್ದವಾಗಿ ಇರುವುದು ಬಹಳ ಮುಖ್ಯ. ಕಳಪೆ ಅಥವ ಹಾಳಾಗಿರುವ ವಸ್ತುಗಳನ್ನು ಎಂದಿಗೂ ಕೊಡಬಾರದು. ಕೊಟ್ಟರೆ ಅದಕ್ಕೆ ತಕ್ಕಂತೆ ಕೆಟ್ಟ ಫಲಗಳನ್ನು ದೇವಿ ಅನುಗ್ರಹಿಸಿ ಅವುಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಂದು ಪೂಜೆ ಪನಸ್ಕಾರದ ಹೆಸರಿನಲ್ಲಿ ಆಗುತ್ತಿರುವ ತಪ್ಪು, ಪ್ರಮಾದಗಳು, ದೇವರ ಮನೆಯಲ್ಲಿ ಹಲವಾರು ಫೋಟೊಗಳು ಅವುಗಳ ಪೂಜೆ, ಅಲಂಕಾರ ಮಾಡುವಲ್ಲಿ ತಪ್ಪುಗಳು, ಮಂತ್ರಗಳ ಉಚ್ಚಾರಣೆಗಳಲ್ಲಿನ ತಪ್ಪು ಸೇರಿದಂತೆ ಇತರ ತಪ್ಪುಗಳ ಬಗ್ಗೆ ಸರಿಪಡಿಸಿ ಮಾಡುವ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸಿದ್ದು ವಿಶೇಷವಾಗಿತ್ತು.
ಮೈಸೂರಿನ ವಿಶ್ವ ವಿಖ್ಯಾತ ದಸರಾ ಹಬ್ಬದ ಸಮಯದಲ್ಲಿ ಕೆಲ ಸಂಘಟನೆಗಳು ಇತ್ತೀಚೆಗೆ ಮಹಿಷಾ ದಸರಾ ಆಚರಣೆ ಮಾಡುವ ಬಗ್ಗೆ ಪ್ರಚಾರ ಮಾಡಿ ಅದರಂತೆ ಮಾಡುತ್ತಿರುವ ಜೊತೆಗೆ ದಸರಾ ಹಬ್ಬಕ್ಕೆ ಕಪ್ಪು ಚುಕ್ಕೆ ತರುತ್ತಿರುವ ಬಗ್ಗೆ ಹೊಸನಾವಿಕ ಪತ್ರಿಕಾ ಪ್ರತಿನಿಧಿ ಪ್ರಶ್ನಿಸಿದಾಗ, ದವಿ ಭಕ್ತಿ ಗುಣ ಇರುವವರು ದಸರಾ ಹಬ್ಬದಲ್ಲಿ ದೇವರ ಪೂಜೆ ಮಾಡುತ್ತಾರೆ ನಂತರ ಅದರ ಫಲವನ್ನು ಪಡೆಯುತ್ತಾರೆ. ಯಾರು ರಾಕ್ಷಸ ಗುಣ, ಮಹಿಷಿ ಮನೋಭಾವವನ್ನು ಹೊಂದಿರುತ್ತಾರೆ ಅವರು ಮಹಿಷಾ ದಸರಾ ಹಬ್ಬವನ್ನು ಮಾಡುತ್ತಾರೆ ಅದರ ಫಲವನ್ನು ಅವರುಗಳು ಮುಂದಿನ ದಿನಗಳಲ್ಲಿ ಉಣ್ಣುತ್ತಾರೆ. ಇಂದು ಯಾರು ಏನು ಮಾಡುವುದು ಹೇಳುವುದಕ್ಕೆ ಅವಕಾಶ ಇರುವ ಅದರಂತೆ ಮಾಡುತ್ತಾರೆ. ಇದಕ್ಕೆ ಯಾವುದೆ ನಿಭಂದನೆಗಳು ಇರುವುದಿಲ್ಲ. ಆದರೆ ಹೇಳುವಲ್ಲಿ ಆಚರಿಸುವಲ್ಲಿ ರೀತಿ ನೀತಿ ಇರಬೇಕು ಎಂದರು.
ಇಂತಹ ತಪ್ಪುಗಳನ್ನು ತಪ್ಪು ಎಂದು ಹೇಳುವವರು ಯಾರೂ ಸ್ಪಷ್ಟವಾಗಿ ಹೇಳುವುದಿಲ್ಲ. ಕಾರಣ ಅವರುಗಳಿಗೆ ಅವರ ಅಸ್ತಿತ್ವದ ಭಯ. ಹಾಗಾಗಿ ತಪ್ಪು ಸರಿ ಯಾವುದು ಎಂದು ಹೇಳುವುದ ಹೇಗೆ. ಅವರವರು ತಿಳಿದು ಆಚರಣೆ ಮಾಡಿದರೆ ಅವರವರಿಗೆ ಒಳ್ಳೆಯದು. ಇಂದು ಬಹಳಷ್ಟು ಧರ್ಮದ ಅನರ್ಥಗಳನ್ನು ಮಾಡುತ್ತಿzರೆ ಅದರ ಫಲವನ್ನು ಹೇಗೆ ಅನುಭವಿಸುತ್ತಿzರೆ ಎಂದು ನೋಡುತ್ತಿzರೆ. ಅದರೂ ಇವುಗಳನ್ನು ನೋಡಿ ತಿಳಿದು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅವರುಗಳು ಮಾಡಿದ ಫಲವನ್ನು ಅನುಭವಿಸುವುದು ನಿಶ್ಚಿತ. ಇದನ್ನು ಯಾರೂ ತಪ್ಪಿಸಲು ಆಗುವುದಿಲ್ಲ ಎಂದು ಎಚ್ಚರಿಸಿದರು.
ಶಾರದಾ ಶ್ರೀನಿವಾಸ್, ಅನ್ನಪೂರ್ಣ ಸತೀಶ್, ಶಶಿಕಲಾ, ಲತಾ ಮೋರೆ, ಆಶಾ ಪುಟ್ಟಸ್ವಾಮಿ, ಸೇರಿದಂತೆ ನಗರದ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರುಗಳು ದುರ್ಗಾ ಸಪ್ತಶತಿ ಪರಾಯಾಣ ಮಾಡಿದರು.
ಶ್ರೀ ಬಸವೇಶ್ವರ ಧರ್ಮ ಸಂಸ್ಥೆಯ ಶಿವಕುಮಾರ್, ಎಂ.ಎಸ್. ರವಿ, ಅಶೋಕ್, ನಟರಾಜ್, ಟಿ.ಎಂ.ಮೂರ್ತಿ, ರವಿ ಕುಮಾರ್, ಶಶಿಕಲಾ, ಸೇರಿದಂತೆ ಇತರರು ಉಪಸ್ಥಿತರಿ ದ್ದರು. ಎಸ್.ಎಸ್.ಹೆಗಡೆ ಪ್ರಾರ್ಥಿಸಿ, ಮಲ್ಲಿಕಾರ್ಜುನ್ ಸರ್ವರನ್ನೂ ಸ್ವಾಗತಿಸಿದರು. ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಯೋಧ ಗೀರೀಶ್ ವಂದಿಸಿದರು.