ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಕಳೆದುಹೋದ ಮೊಬೈಲ್ ಫೋನ್ ಪತ್ತೆ ಮಾಡುವ ಉದ್ದೇಶದಿಂದ ಸಿಇಐಆರ್ ಆರಂಭ…

Share Below Link

ಶಿವಮೊಗ್ಗ: ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಸಿಇಐ ಆರ್(ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಸಿ ರಿಜಿಸ್ಟರ್) ಪೋರ್ಟಲ್ ಅನ್ನು ದೂರ ಸಂಪರ್ಕ ಇಲಾ ಖೆಯು ಅಭಿವೃದ್ದಿ ಪಡಿಸಿದ್ದು, ಸದರಿ ಪೋರ್ಟಲ್‌ನ ಸಹಾಯ ದಿಂದ ನಿಮ್ಮ ಮೊಬೈಲ್ ಕಳೆದು ಹೋದಲ್ಲಿ ನೀವು ಮನೆಯ ಕುಳಿತುಕೊಂಡು ಪತ್ತೆ ಹಚ್ಚಬ ಹುದು ಎಂದು ಜಿ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಹೇಳಿ zರೆ.
ಅವರು ಇಂದು ನಗರದ ಡಿಎ ಆರ್ ಪೊಲೀಸ್ ಸಭಾಂಗಣದಲ್ಲಿ ಪತ್ತೆಹಚ್ಚಲಾದ ಮೊಬೈಲ್ ಫೋನುಗಳನ್ನು ಸಂಬಂಧಪಟ್ಟ ಮಾಲಿಕರಿಗೆ ಹಿಂದಿರುಗಿಸುವ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಮೊಬೈಲ್ ಕಳೆದು ಹೋದಾಗ ಎಫ್‌ಐಆರ್ ಮಾಡುವ ಅವಶ್ಯಕತೆ ಇಲ್ಲ. ಸಿಇಐಆರ್ ಪೋರ್ಟಲ್‌ಗೆ ಹೋಗಿ ನಿಮ್ಮ ಆಧಾರ್ ಹಾಗೂ ಮೊಬೈಲ್ ವಿವರಗಳನ್ನು ನಮೂದಿ ಸಿದಾಗ ಮೊಬೈಲ್ ಕದ್ದ ವ್ಯಕ್ತಿ ಬೇರೆ ಯವರಿಗೆ ಮಾರಾಟ ಮಾಡಿದಾಗ ಅಥವಾ ನೀವು ಕಳೆದುಕೊಂಡ ಮೊಬೈಲ್‌ಗೆ ಯಾವುದೇ ಸಿಮ್ ಹಾಕಿದರೂ ಲೊಕೇಶ್‌ನ ಕೂಡ ಲೇನಿಮಗೆ ತಿಳಿಯುತ್ತದೆ. ಪೊಲೀ ಸರಿಗೆ ನೀವು ಮಾಹಿತಿ ನೀಡಿದರೆ ಅವರು ಜವಾಬ್ದಾರಿಯಿಂದ ನಿಮ್ಮ ಮೊಬೈಲ್ ಪತ್ತೆಹಚ್ಚಿ ಹಿಂದಿರು ಗಿಸುತ್ತಾರೆ. ಸದರಿ ಪೋರ್ಟ್‌ಲ್ ಸಹಾಯದಿಂದ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆ ನಿರೀಕ್ಷಕರ ನೇತೃತ್ವದ ತಂಡ ೧೦೦ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು, ಇಂದು ಹಿಂದಿರುಗಿಸಲಾಗುತ್ತದೆ ಎಂದರು.
ಜಿಯಲ್ಲಿ ೨೦೦ಕ್ಕೂ ಹೆಚ್ಚು ಮೊಬೈಲ್ ಕಳೆದುಕೊಂಡ ಕೇಸು ದಾಖಲಾಗಿದ್ದು, ೧೪೪ ಮೊಬೈಲ್ ಅನ್ನು ರಿಕವರಿ ಮಾಡಲಾಗಿದೆ. ಕೆಲವರು ಮೊಬೈಲ್ ಕಳೆದುಕೊ ಂಡು ಸಿಗುವುದಿಲ್ಲ ಎಂದು ಭಾವಿಸಿ ದ್ದರು. ಅಂತಹ ಮೊಬೈಲ್ ಕೂಡ ಈ ಪೋರ್ಟಲ್ ಸಹಾಯದಿಂದ ದೊರೆತಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿ ರಕ್ಷಣಾಧಿಕಾರಿ ಅನಿಲ್ ಭೂಮರೆಡ್ಡಿ, ಸಿಇಎನ್ ಠಾಣೆಯ ನಿರೀಕ್ಷಕರಾದ ಸಂತೋಷ್ ಕುಮಾ ರ್ ಪಾಟೀಲ್, ಎಎಸ್‌ಐ ವಿರೂ ಪಾಕ್ಷ ಮೊದಲಾದವರಿದ್ದರು.