ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಿಬಿಎಸ್‌ಇ: ಶ್ರೀ ಸಾಯಿ ಗುರುಕುಲ ಶಾಲೆಗೆ ಸತತ ೧೦ನೇ ಬಾರಿ ಶೇ.೧೦೦ ಫಲಿತಾಂಶ…

Share Below Link

ಹೊನ್ನಾಳಿ: ಶ್ರೀ ಸಾಯಿ ಗುರುಕುಲ ವಸತಿಯುತ ಸಿಬಿಎಸ್‌ಇ ಶಾಲೆಗೆ ಗ್ರೇಡ್ ೧೦ನೇ ತರಗತಿಯಲ್ಲಿ ಶೇ.೧೦೦ ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ತಿಳಿಸಿದರು.
ದಾವಣಗೆರೆ ಜಿಯಲ್ಲಿ ಕಳೆದ ೧೦ ವರ್ಷಗಳಿಂದಲೂ ಸತತವಾಗಿ ಶೇ.೧೦೦ ಫಲಿತಾಂಶ ಪಡೆಯುತ್ತಿ ರುವ ಸಿ.ಬಿ.ಎಸ್.ಇ. ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದ ಅವರು, ೨೦೨೩-೨೪ನೇ ಸಾಲಿನ ಗ್ರೇಡ್ ೧೦ನೇ ತರಗತಿಯ ಪರೀಕ್ಷೆಗೆ ೪೬ ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ ೧೨ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ೨೦ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ೧೪ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾಗಿzರೆ ಎಂದರು.
ಎಂ.ಆರ್. ಶ್ರೇಯಾ ೫೦೦ ಅಂಕಗಳಿಗೆ ೪೭೧ ಅಂಕಗಳನ್ನು ಪಡೆದು ಶೇ.೯೪.೨ ಪ್ರಥಮ ಸ್ಥಾನ, ಎಂ.ಮೇಘರಾಜ್ ೫೦೦ ಅಂಕ ಗಳಿಗೆ ೪೬೨ ಅಂಕಗಳನ್ನು ಪಡೆದು ಶೇ.೯೨.೪ ದ್ವಿತೀಯ ಸ್ಥಾನ, ಎಂ.ಜಿ. ತನುಶ್ರೀ ೫೦೦ ಅಂಕಗಳಿಗೆ ೪೫೭ ಅಂಕಗಳನ್ನು ಪಡೆದು ಶೇ.೯೧.೪೦ ತೃತೀಯ ಸ್ಥಾನ ಪಡೆದಿzರೆ.
ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಡಿ.ಜಿ. ಶಾಂತನಗೌಡ, ಖಂಜಂಚಿ ಡಿ.ಎಸ್. ಸೋಮಪ್ಪ, ಉಪಾಧ್ಯಕ್ಷ ಡಿ.ಎಚ್. ಶಂಕ್ರಪ್ಪಗೌಡ, ನಿರ್ದೇಶಕರಾದ ವಾಣಿ ಸುರೇಂದ್ರ ಗೌಡ, ಡಿ.ಎಸ್.ಪ್ರದೀಪ್ ಗೌಡ, ಡಿ.ಎಸ್. ಅರುಣ್, ಎಚ್.ಬಿ. ಅರುಣ್, ಗೌರಮ್ಮ, ಜಿ.ಆರ್. ಶೀಲಾ, ಪ್ರಾಂಶುಪಾಲ ಎಚ್.ಎಂ. ದರ್ಶನ್, ಶಿಕ್ಷಣ ಸಂಯೋಜಕ ಎ.ಜಿ.ಹರೀಶ್ ಕುಮಾರ್ ಮತ್ತು ಬೋಧಕ ವರ್ಗದವರು ಅಭಿನಂದನೆ ಸಲ್ಲಿಸಿzರೆ.

This image has an empty alt attribute; its file name is Arya-coll.gif