ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಿಬಿಎಸ್‌ಇ:ಸಿದ್ಧಗಂಗಾ ಶಾಲೆಗೆ ೧೦ನೇ ತರಗತಿ ಶೇ.೧೦೦ ಫಲಿತಾಂಶ

Share Below Link

ದಾವಣಗೆರೆ : ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ೧೦ನೇ ತರಗತಿ ಸಿ.ಬಿ.ಎಸ್.ಇ. ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಗೆ ೧೦೦ಕ್ಕೆ ೧೦೦ ಫಲಿತಾಂಶ ಬಂದಿದೆ.
ಮೋತಿ ವೀರಪ್ಪ ಕಾಲೇಜಿನ ಪ್ರೊಫೆಸರ್ ರವಿಕುಮಾರ್ ಡಿ. ಮತ್ತು ಬಾಡಾ ಕ್ಲಸ್ಟರ್ ಸಿ.ಆರ್.ಪಿ. ಉಷಾ ವಿ.ಸಿ. ಅವರ ಪುತ್ರ ದ್ರುವಕುಮಾರ್ ರೆಡ್ಡಿ ಆರ್. ೫೦೦ಕ್ಕೆ ೪೭೪ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿzನೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿ ಕನ್ನಡ ೯೯, ಇಂಗ್ಲೀಷ್ ೮೬, ಗಣಿತ ೯೬, ವಿeನ ೯೫, ಸಮಾಜ ೯೮, ಅಂಕಗಳನ್ನು ಪಡೆದು ಶೇಕಡ ೯೪.೮೦ ಅಂಕಗಳನ್ನು ಗಳಿಸಿzನೆ.
ತೇಜಸ್ವಿನಿ ಹೆಚ್.ಎಂ. ದ್ವಿತೀಯ ಸ್ಥಾನ (೪೬೦), ಲಕ್ಷ್ಮೀ ಎನ್. (೪೫೮)ತತೀಯ ಸ್ಥಾನ, ಸಿರಿ ಸಿ.ಆರ್. (೪೫೫), ತೇಜಸ್ ಕೆ.ಎ. (೪೫೧), ಸಿಂಚನ ವಿ. (೪೫೦) ಅಂಕಗಳನ್ನು ಪಡೆದು ಶೇ. ೯೦ಕ್ಕಿಂತ ಅಧಿಕ ಅಂಕ ಪಡೆದವರಾಗಿzರೆ. ೨೦ ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ, ೫೫ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿzರೆ.
ಶಾಲೆಗೆ ೧೦೦ಕ್ಕೆ ೧೦೦ ಫಲಿತಾಂಶ ಕೊಟ್ಟಿರುವ ಎಲ್ಲ ಮಕ್ಕಳನ್ನು, ಅವರ ಪಾಲಕರನ್ನು ಸಿದ್ಧಗಂಗಾ ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯರಾದ ಗಾಯಿತ್ರಿ ಚಿಮ್ಮಡ್ ಅಭಿನಂದಿಸಿzರೆ.
ಅತ್ಯುತ್ತಮ ಫಲಿತಾಂಶ ನೀಡಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಕಾರ್ಯದರ್ಶಿ ಡಿ.ಎಸ್. ಹೇಮಂತ್ ಮತ್ತು ನಿರ್ದೇಶಕರಾದ ಡಾ|| ಡಿ.ಎಸ್. ಜಯಂತ್‌ರವರು ಸನ್ಮಾನಿಸಿ ಅಭಿನಂದಿಸಿದರು.

This image has an empty alt attribute; its file name is Arya-coll.gif