ಜಾತಿ ಗಣತಿ: ಸಿಎಂ ಸಿದ್ದುಗೆ ತೀವ್ರ ಮುಖಭಂಗ: ಈಶ್ವರಪ್ಪ ಟಾಂಗ್…
ಶಿವಮೊಗ್ಗ: ಜತಿ ಗಣತಿಗೆ ಸಂಬಂಧಿಸಿದಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯ ಸಂಪುಟದ ಅನೇಕ ಸಚಿವರು ಗಣತಿಗೆ ತೀವ್ರ ವಿರೋಧ ವ್ಯಕ್ತಪಡಿ ಸಿದ್ದು, ಇದು ಮುಖ್ಯ ಮಂತ್ರಿಸಿದ್ದರಾಮಯ್ಯ ಅವರಿಗೆ ಆದ ಮುಖಭಂಗ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಫ ವ್ಯಾಖ್ಯಾನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜವನ್ನು ಛಿದ್ರಗೊಳಿ ಸಲು ಜತಿ ಗಣತಿ ನೆಪದಲ್ಲಿ ಸಿದ್ದರಾಮಯ್ಯ ೩೩೧ ಹೊಸ ಜತಿಗಳನ್ನು ಸೃಷ್ಟಿಸಿದರು. ಈಗ ಸಚಿವ ಸಂಪುಟದ ಸದಸ್ಯರಿಗೇ ಅದರ ಗಂಭೀರತೆಯ ಮನವರಿಕೆ ಆಗಿದೆ. ಗಣತಿ ವಿರುದ್ಧ ರಾಜ್ಯದ ಇತಿಹಾಸದ ನಡೆಯ ಬಾರದ ವಿದ್ಯಮಾನ ನಡೆದಿರುವುದು ಈಗ ಸಿದ್ದರಾಮಯ್ಯ ಓರ್ವ ಶಕ್ತಿಹೀನ ಮುಖ್ಯಮಂತ್ರಿ ಎಂಬುದನ್ನು ಸಾಬೀತು ಪಡಿಸಿದೆ ಎಂದು ಟೀಕಿಸಿದರು.

ಈ ಹಿಂದೆ ಸಿದ್ದರಾಮಯ್ಯ ೧೬೫ ಕೋಟಿ ರೂ.ವೆಚ್ಚ ಮಾಡಿ ಕಾಂತರಾಜ್ ವರದಿ ಸಿದ್ದಪಡಿಸಿದ್ದರು. ಎಂತಹ ಪರಿಸ್ಥಿತಿ ಬಂದರೂ ಅದನ್ನು ಜರಿಗೊಳಿಸಿಯೇ ಸಿದ್ಧ ಎಂದು ಗುಡುಗಿದ್ದರು. ಇವರ ಅಂದಿನ ಶಕ್ತಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಬಗ್ಗಿತ್ತು. ಆದರೆ ನಂತರ ದೆಹಲಿಗೆ ಹೋಗಿ ಹಿಂತಿರುಗಿದ ಬಳಿಕ ಏಕಾಏಕಿ ಕಾಂತರಾಜ್ ವರದಿ ಜರಿಯ ಬಗ್ಗೆ ಮನಕ್ಕೆ ಶರಣಾದರು. ೧೬೫ ಕೋಟಿ ರೂ. ವೆಚ್ಚದ ವರದಿಗೆ ಬೆಂಕಿ ಇಟ್ಟರು. ಆ ವರದಿಯನ್ನು ಜರಿ ಮಡದೇ ಬಿಡುವುದಿಲ್ಲ ಎಂದು ಹೇಳಿದ್ದ ಅವರ ಛಲ ಈಗ ಎಲ್ಲಿ ಹೋಯಿತು ಎಂದು ಟಾಂಗ್ ನೀಡಿದರಲ್ಲದೇ, ಹಠ ಹಿಡಿದು ಜತಿ ಗಣತಿ ಜರಿಗೊಳಿಸಲು ಸಿದ್ದರಾಮಯ್ಯ ಮುಂದಾಗಿದ್ದೇ ಆದಲ್ಲಿ ಅವರು ಮುಖ್ಯಮಂತ್ರಿ ಖುರ್ಚಿ ಕಳೆದು ಕೊಳ್ಳುವುದು ಶತಃಸಿದ್ಧ ಎಂದು ಭವಿಷ್ಯ ನುಡಿದರು.

ಈಗ ೪೨೦ ಕೋಟಿ ರೂ. ವೆಚ್ಚದಲ್ಲಿ ಹೊಸ ಜತಿ ಗಣತಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸೆ.೨೨ರಿಂದ ಅ.೭ರ ವರೆಗೆ ಗಣತಿ ನಡೆಯಲಿದೆ ಎಂದಿzರೆ. ಪ್ರತಿ ಜಾತಿಗೂ ಕ್ರಿಶ್ಚಿಯನ್ ಧರ್ಮ ಸೇರಿಸಲಾಗಿದೆ. ಇದನ್ನು ಹಿಂದೂ ಸಮಾಜದವರು ಯಾರೂ ಒಪ್ಪುವುದಿಲ್ಲ. ಮತ್ತೆ ಈ ಆರ್ಥಿಕ ಹಾನಿ ಬೇಡ ಎಂದ ಅವರು ಅವರ ಸಂಪುಟದ ಸಚಿವರೇ ಈಗಿನ ಜತಿಗಣತಿಯನ್ನು ವಿರೋಧಿಸುತ್ತಿzರೆ. ಆ ಎಲ್ಲ ಹಿಂದೂ ಪರ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆ ಬಗೆಹರಿಸಲು ತಮ್ಮ ಸರ್ಕಾರ ೬.೫೦ಕೋಟಿ. ರೂ.ಬಿಡುಗಡೆ ಮಾಡಿದೆ ಎಂದು ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅದಕ್ಕೆ ಅವರಿಗೆ ಅಭಿನಂದಿಸುತ್ತೇನೆ. ಆದೇಶ ಕೇವಲ ಆದೇಶವಾಗಿ ಉಳಿಯಬಾರದು. ತಕ್ಷಣ ಅನುಷ್ಟಾನಕ್ಕೆ ಬರಬೆರಕು. ಸಂಸದ ಬಿ.ವೈ. ರಾಘವೇಂದ್ರ ಅವರು ಇದಕ್ಕೆ ಸಹಕರಿಸಬೇಕು ಎಂದು ಈಶ್ವರಪ್ಪ ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಅಧ್ಯಕ್ಷ ಕೆ.ಇ.ಕಾಂತೇಶ್, ಪ್ರಮುಖರಾದ ಈ.ವಿಶ್ವಾಸ್, ನಕುಲ, ಮೋಹನ ಮೊದಲಾದವರಿದ್ದರು.
