ಮಹಿಳಾ ಅಧಿಕಾರಿಗೆ ಶಾಸಕರ ಪುತ್ರನ ಬೆದರಿಕೆ ಪ್ರಕರಣ: ಬಿಜೆಪಿಯಿಂದ ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ
ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಗಣಿ ಇಲಾಖೆ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಬಸವೇಶ್ ಅಶ್ಲೀಲ ಪದ ಬಳಸಿದ ವೀಡಿಯೋ ಎಡಿಟೆಡ್ ಎಂದಾದರೆ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಎಂದು ಬಿಜೆಪಿ ಸವಾಲು ಹಾಕಿದೆ.

ಪ್ರಕರಣ ವಿರೋಧಿಸಿ ಶಾಸಕ ಬಿ.ಕೆ. ಸಂಗಮೇಶ್ ಹಾಗೂ ಅವರ ಪುತ್ರ ಬಸವೇಶ್ ವಿರುದ್ಧ ನಗರದಲ್ಲಿ ಬಿಜೆಪಿ ನಡೆಸಿದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ಧರ್ಮಪ್ರಸಾದ್ ಅವರು, ಮಹಿಳಾ ಅಧಿಕಾರಿಗೆ ಬಸವೇಶ್ ನೀಚ ಪದ ಬಳಸಿದ ವೀಡಿಯೋ ಹೊರಬಿದ್ದ ನಂತರ ಅದು ಎಡಿಟೆಡ್ ವೀಡಿಯೋ ಎಂದು ತಳ್ಳಿ ಹಾಕುವ ಪ್ರಯತ್ನಗಳು ಸಾಮಾಜಿಕ ಜಲತಾಣದಲ್ಲಿ ಕಂಡುಬರುತ್ತಿದೆ. ಇಡೀ ಭದ್ರಾವತಿಗೆ ಬಸವೇಶ್ ಧ್ವನಿ ತಿಳಿದಿದೆ. ಹಾಗೆ ಅದು ಎಡಿಟೆಡ್ ವೀಡಿಯೋ ಆದರೆ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ. ಎಂದು ಸವಾಲು ಹಾಕಿದರು. ಕ್ಷೇತ್ರದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಅದಕ್ಕೆ ಶಾಸಕರೇ ಕುಮ್ಮಕ್ಕು ನೀಡುತ್ತಿzರೆ ಎಂದು ಆರೋಪಿಸಿದ ಅವರು, ತಾಕತ್ ಇದ್ದರೆ ನಮ್ಮ ವಿರುದ್ದ ಹೋರಾಡಿ ಎಂದು ಸವಾಲು ಹಾಕಿದರು.
ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿನ ಅಧಿಕಾರಿಗಳ ಮೇಲೂ ಸಹ ದೌರ್ಜನ್ಯ ನಡೆಯು ತ್ತಿದ್ದು, ಅವರುಗಳಿಗಾಗಿ ಇಂದು ನಾವು ಹೋರಾಡುತಿzವೆ. ರಮೇಶ್ ಎನ್ನುವವರು ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವುದು ಸಾಬೀತಾದರೂ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಕ್ರಮ ಮರಳು ದಂಧೆ ನಡೆಯುತ್ತಿರುವುದು ತಿಳಿದಿದ್ದರೂ, ಇದನ್ನು ತಡೆಯದಂತೆ ಸಿಎಂ, ಡಿಸಿಎಂ ಗಳಿಂದ ಫೋನ್ ಮಾಡಿಸುತ್ತಾರೆ. ಅಧಿಕಾರಿಗಳ ಮೇಲೂ ಸಹ ಶಾಸಕರ ಕುಟುಂಬದ ದೌರ್ಜನ್ಯ ನಡೆಯು ತ್ತಿದ್ದು, ಇದು ಇಡೀ ಭದ್ರಾವತಿಗೇ ಗೊತ್ತಿದೆ ಎಂದರು.
ಮಹಿಳಾ ಅಧಿಕಾರಿಗೆ ನೀಚ ಪದ ಬಳಸಿ ನಿಂದಿಸಿದ ಬಸವೇಶ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಮಂಗೋಟೆ ರುದ್ರೇಶ್, ಮಂಜುಳಾ, ಸತೀಶ್ (ಟೈಲರ್), ಜಿ. ಆನಂದಕುಮಾರ್ ಸೇರಿದಂತೆ ಹಲವರು ಇದ್ದರು.