ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಸ್ವಾಭಿಮಾನದ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸದೃಢರಾಗಿ…

Share Below Link

ಶಿಕಾರಿಪುರ : ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಸಾಧ್ಯವಿಲ್ಲ. ಸ್ವಾಭಿಮಾನದ ಬದುಕು ಕಟ್ಟಿ ಕೊಂಡು ಆರ್ಥಿಕವಾಗಿ ಸದೃಢ ರಾಗಲು ಸರ್ಕಾರ ಹೈನುಗಾರಿಕೆ, ಕುಕ್ಕುಟೋಧ್ಯಮ ಮತ್ತಿತರ ಕ್ಷೇತ್ರದ ಮೂಲಕ ಜನತೆಗೆ ಹಲವು ಸೌಲಭ್ಯ ವನ್ನು ಕಲ್ಪಿಸಿಕೊಟ್ಟಿದ್ದು ಸದುಪಯೋಗದ ಮೂಲಕ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ರಾಜ್ಯ ಕುಕ್ಕುಟ ಮಹಾಮಂಡಳ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಯಿಂದ ಗ್ರಾಮೀಣ ರೈತ ಮಹಿಳಾ ಅರ್ಹ ಫಲಾನುಭವಿಗಳಿಗೆ ೨೦೨೫ -೨೬ನೇ ಸಾಲಿನಲ್ಲಿ ಉಚಿತವಾಗಿ ನಾಟಿ ಕೋಳಿ ಮರಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ದೇಶದಲ್ಲಿ ಸರ್ಕಾರಿ ನೌಕರರು ಕೇವಲ ಶೇ.೩ ಮಾತ್ರವಿದ್ದು,ಶೇ.೭೫ ಕೃಷಿಯಿಂದ ಉದ್ಯೋಗ ಸೃಷ್ಟಿ ಯಾಗಿದೆ ಉಳಿದ ಶೇ.೨೨ ವಿವಿಧ ರೀತಿಯ ಖಾಸಗಿ ಸಂಸ್ಥೆ, ಸ್ವಉದ್ಯೋಗದ ಮೂಲಕ ಬದುಕನ್ನು ಕಟ್ಟಿಕೊಂಡಿzರೆ ಎಂದ ಅವರು, ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಸಾಧ್ಯವಿಲ್ಲ ಎಂದು ಸರ್ಕಾರ ಹೈನುಗಾರಿಕೆ, ಕುಕ್ಕುಟೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಸರ್ಕಾರಿ ನೌಕರರು ಸೀಮಿತ ವೇತನ ಪಡೆಯಬೇಕಾಗಿದೆ ಸ್ವ ಉದ್ಯೋಗಿ ಗಳು ಹೈನುಗಾರಿಕೆ ಕುಕ್ಕುಟೋದ್ಯಮದ ಮೂಲಕ ಮಾಸಿಕ ಸ್ವಸಾಮರ್ಥ್ಯದಿಂದ ಲಕ್ಷಾಂತರ ಆದಾಯ ಗಳಿಸಲು ಸಾದ್ಯ ಎಂದರಿತು ಸರ್ಕಾರ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ಸ್ಥಳೀಯ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವಿ ಮಾತನಾಡಿ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೋಳಿ ಉತ್ವನ್ನಗಳ ಮಾರಾಟ ವ್ಯವಸ್ಥೆ ಸುಧಾರಿಸುವ ಜತೆಗೆ ಕುಕ್ಕುಟೋದ್ಯಮ ಅವಲಂಭಿತ ರೈತರಿಗೆ ನ್ಯಾಯ ಸಮ್ಮತವಾದ ಬೆಲೆ ದೊರಕುವಂತೆ ಮಾಡುವುದು ಕಾರ್ಯಕ್ರಮದ ಗುರಿಯಾಗಿದ್ದು, ಕೋಳಿ ಸಾಕಾಣಿಕೆ ತಂತ್ರeನ, ರೋಗ ನಿರ್ವಹಣೆ, ಆಹಾರ ನಿರ್ವಹಣೆ ಮತ್ತಿತರ ವಿಷಯಗಳಲ್ಲಿ ರೈತರಿಗೆ ತರಬೇತಿ ನೀಡಲಾಗುವುದು ಎಂದರು.
ತಹಸೀಲ್ದಾರ್ ಮಂಜುಳಾ ಶಂಕರ ಭಜಂತ್ರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ಟಿಎ ಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್ ಬಸವರಾಜ್ ಮುಖಂಡ ಮಹೇಶ್ ಹುಲ್ಮಾರ್,ಸಿ ದ್ದಲಿಂಗ (ನ್ಯಾಮತಿ) ಸಹಿತ ಇಲಾಖೆ ಅಧಿಕಾರಿಗಳು ಫಲಾನುಭವಿಗಳು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.