ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಕಾರ್ಯ: ಗೋಪಿನಾಥ್

Share Below Link

ಶಿವಮೊಗ್ಗ: ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಕಾರ್ಯ ಆಗಿ ದ್ದು, ಪ್ರತಿಯೊಬ್ಬ ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂ ದಾಗಬೇಕು ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿ ನಾಥ್ ಹೇಳಿದರು.
ವಿಶ್ವ ಸೈಕಲ್ ದಿನದ ಪ್ರಯುಕ್ತ ಶಿವಮೊಗ್ಗ ಸೈಕಲ್ ಕ್ಲಬ್, ಯೂತ್ ಹಾಸ್ಟೆಲ್ಸ್ ವತಿಯಿಂದ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರವನ್ನು ಸಂಜೀವಿನಿ ರಕ್ತ ನಿದಿಯಲ್ಲಿ ಉದ್ಘಾಟಿಸಿ ಮಾತ ನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇದ್ದು, ರಕ್ತದಾನ ಶಿಬಿರಗಳು ಹೆಚ್ಚು ಆಯೋಜನೆ ಆಗಬೇಕು. ಇದ ರಿಂದ ರಕ್ತದ ಪೂರೈಕೆ ಹೆಚ್ಚಿಸಲು ಸಾಧ್ಯವಿದೆ. ಅಗತ್ಯವಿರುವವರಿಗೆ ರಕ್ತದ ಲಭ್ಯತೆ ದೊರಕುತ್ತದೆ ಎಂದು ತಿಳಿಸಿದರು.


ತರುಣೋದಯ ಘಟಕ ಚಾರಣದ ಜತೆಯಲ್ಲಿ ನಿರಂತರ ವಾಗಿ ಸಮಾಜಮುಖಿ ಕಾರ್ಯಗ ಳನ್ನು ನಡೆಸಿಕೊಂಡು ಬರುತ್ತಿದೆ. ಸದಸ್ಯರು ರಕ್ತದಾನ ಮಾಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ರಕ್ತದಾನ ಪ್ರಸ್ತುತ ಸಮ ಯದಲ್ಲಿ ಅತ್ಯಂತ ಮುಖ್ಯ ಎಂದರು.
ಯೂತ್ ಹಾಸ್ಟೆಲ್ ಅಸೋಸಿ ಯೇಷನ್ ಚೇರ್‌ಮನ್ ಎಸ್. ಎಸ್.ವಾಗೀಶ್ ಮಾತನಾಡಿ, ಶಿವ ಮೊಗ್ಗ ಸೈಕಲ್ ಕ್ಲಬ್ ಪ್ರಾರಂಭ ದಿಂದಲೂ ನಗರದಲ್ಲಿ ಅತ್ಯುತ್ತಮ ವಾಗಿ ಜನ ಉಪಯೋಗಿ ಕಾರ್ಯ ಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಹಲವಾರು ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಸೈಕಲ್ ಜಥಾ ಮೂಲಕ ಅರಿವು ಮೂಡಿಸುತ್ತಿzರೆ. ವಿಶ್ಚ ಸೈಕಲ್ ದಿನಾಚರಣೆ ಪ್ರಯುಕ್ತ ರಕ್ತದಾನ ಆಯೋಜಿಸಲಾಗಿದೆ ಎಂದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್‍ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸೈಕಲ್ ಕ್ಲಬ್ ಸದಸ್ಯರು ಪ್ರತಿ ವರ್ಷ ಎರಡುಬಾರಿ ರಕ್ತದಾನ ಶಿಬಿರ ಏರ್ಪಡಿಸಿ ಹಲ ವಾರು ರೋಗಿಗಳಿಗೆ ಅನುಕೂಲ ಮಾಡಿ ಕೊಡುತ್ತಿzರೆ. ಇವರ ಜನೋಪಯೋಗಿ ಕಾರ್ಯಗಳು ಎಲ್ಲರ ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.
ಸುರೇಶ್ ಕುಮಾರ್ ಸ್ವಾಗತಿಸಿ ದರು. ಗಿರೀಶ್ ಕಾಮತ್ ವಂದಿಸಿ ದರು. ಶ್ರೀಕಾಂತ್ ನಿರೂಪಿಸಿದರು.