ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿಜೆಪಿಯಿಂದ ಚನ್ನಬಸಪ್ಪ ನಾಮಪತ್ರ ಸಲ್ಲಿಕೆ…

Share Below Link

ಶಿವಮೊಗ: ಕೊನೆಯ ಕ್ಷಣ ದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಇಂದು ತಮ್ಮ ಅಪಾರ ಬೆಂಬಲಿಗ ರೊಂದಿಗೆ ನಾಮಪತ್ರ ಸಲ್ಲಿಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿದ್ದ ಬೆಂಬಲಿಗರು ಹಾಗೂ ಕಾರ್ಯ ಕರ್ತರ ಜೊತೆಗೆ ಮೆರವಣಿಗೆಯಲ್ಲಿ ಸಾಗಿದರು. ಘೋಷಣೆಗಳನ್ನು ಕೂಗುತ್ತಾ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ಅವರು ತಮ್ಮ ನಾಯಕ ಕೆ.ಎಸ್. ಈಶ್ವರಪ್ಪನವರ ಮನೆಗೆ ತೆರಳಿ ಅವರ ಕಾಲಿಗೆ ನಮ ಸ್ಕರಿಸಿ ಆಶೀರ್ವಾದ ಪಡೆದರು. ಚೆನ್ನಬಸಪ್ಪ ಅವರನ್ನು ಪ್ರೀತಿ ಯಿಂದ ತಬ್ಬಿ ನೀನು ಗೆದ್ದೇ ಗೆಲ್ಲು ತ್ತೀಯಾ ಯಾವ ಆತಂಕವೂ ಬೇಡ ಎಂದು ಈಶ್ವರಪ್ಪ ವಿಶ್ವಾಸ ತುಂಬಿದರು.
ನಂತರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದೇ ಬರುತ್ತದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿ ಯಲ್ಲಿ ಕಾರ್ಯಕರ್ತರು, ಜವಾ ಬ್ದಾರಿಯುತವಾಗಿ ನಡೆದು ಕೊಳ್ಳುತ್ತಿzರೆ ಎಂದರು.
ಶಿವಮೊಗ್ಗದಲ್ಲಿ ಈ ಬಾರಿ ತ್ರಿಕೋನಸ್ಪರ್ಧೆ ಆಗುವ ಎ ಲಕ್ಷಣಗಳಿವೆ. ಕಳೆದ ಬಾರಿ ೪೬ ಸಾವಿರ ಮತಗಳ ಅಂತರದಿಂದ ಗೆದ್ದಿzವು. ಈ ಬಾರಿ ೬೦ಸಾವಿರಕ್ಕೂ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ. ನಾನು ರಾಜದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಬೇಕಾಗಿದೆ. ಶಿವಮೊಗ್ಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಅಭ್ಯರ್ಥಿ ಎಸ್.ಎನ್. ಚನ್ನ ಬಸಪ್ಪ ಮಾತನಾಡಿ, ಹಿರಿಯರಾದ ಈಶ್ಪರಪ್ಪನವರ ಮಾರ್ಗದರ್ಶನ ದಲ್ಲಿಯೇ ಈ ಚುನಾವಣೆಯನ್ನು ನಡೆಸುತ್ತೇನೆ. ಕಾರ್ಯಕರ್ತರೆಲ್ಲ ಉತ್ಸಾಹದಿಂದ ಇzರೆ. ಈಶ್ವರಪ್ಪ ನವರಿಗೆ ಹೇಗೆ ಗೆಲ್ಲಬೇಕೆಂಬುದು ಕರಗತವಾಗಿದೆ. ಅವರ ಹಾದಿ ಯ ಸಾಗುತ್ತೇನೆ. ಸುಮಾರು ೬೦ ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಶ್ವರಪ್ಪ, ಡಿ. ಎಸ್.ಅರುಣ್ ಇದ್ದರು.