ಕಾಂಗ್ರೆಸ್ ಯೋಜನೆಗೆಳಿಗೆ ಬಾವುಟ ಹಾರಿಸಿದ್ದೇ ಬಿಜೆಪಿ ಸಾಧನೆ…
ಶಿವಮೊಗ್ಗ: ಶಿವಮೊಗ್ಗ ಲೋಕಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಏ. ೧೫ರಂದು ನಾಮಪತ್ರ ಸಲ್ಲಿಸಲಿzರೆ ಎಂದು ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ನಾಮಪತ್ರ ಸಲ್ಲಿಕೆ ದಿನ ಡಿಸಿಎಂ ಡಿ.ಕೆ. ಶಿವಕುಮಾರ್, ಬೈಂದೂರಿನ ಮಾಜಿ ಶಾಸಕ ಸುಕುಮಾರ ಶೆಟ್ಟಿ, ಗೋಪಾಲ ಪೂಜರಿ ಸೇರಿದಂತೆ ಜಿಯ ಎ ಕಾಂಗ್ರೆಸ್ ಶಾಸಕರು, ಮುಖಂಡರು ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿzರೆ. ಅಂದು ಬೆಳಗ್ಗೆ ೧೦.೩೦ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜರ್, ನೆಹರೂ ರಸ್ತೆ, ಗೋಪಿ ಸರ್ಕಲ್ ವರೆಗೆ ಮೆರವಣಿಗೆ ನಡೆಯಲಿದೆ. ಸಾವಿರಾರು ಜನ ಭಾಗವಹಿಸಲಿzರೆ ಎಂದರು.
ಈಗಾಗಲೇ ಒಳ್ಳೆಯ ಪ್ರಚಾರ ಮಾಡುತ್ತಿzವೆ. ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಪ್ರತಿದಿನ ೧೬-೧೭ ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿzರೆ. ಮೊದ ಮೊದಲು ನಾನು ಅವರ ಜೊತೆ ಹೋಗುತ್ತಿz. ಈಗ ಅವರೇ ಸಮರ್ಥವಾಗಿ ಪ್ರಚಾರ ಕಾರ್ಯ ದಲ್ಲಿ ತೊಡಗಿzರೆ ಎಂದರು.
ಯಾವುದೇ ಚುನಾವಣೆಗಳು ಜನರ ಮೇಲೆ ಒತ್ತಡ ತರಬಾರದು. ಒತ್ತಡ ಹಾಕಿ ಮತ ಪಡೆಯ ಬಾರದು. ಜನರೇ ಸ್ವತಂತ್ರವಾಗಿ ನಿರ್ಧರಿಸಿ ಸರ್ಕಾರ ರಚನೆಗೆ ಕಾರಣ ವಾಗಬೇಕು. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಜನರು ಒಪ್ಪಿಕೊಂಡಿzರೆ. ಈ ಬಾರಿ ಕೇಂದ್ರ ದಲ್ಲಿ ಖಂಡಿತಾ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂದರು.
ಸಂಸದ ರಾಘವೇಂದ್ರ ಅವರು ಹಸಿ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತಾರೆ. ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಸಂಸದ ರಾಘವೇಂದ್ರ ಅವರು ಬೆರಳು ಚೀಪುವ ಮಗುವಾಗಿ zಗಲೇ ನಾನು ಅವರ ಅಪ್ಪ ಬಿ.ಎಸ್. ಯಡಿಯೂರಪ್ಪನವರ ಪರ ಚುನಾವಣಾ ಪ್ರಚಾರ ಮಾಡಿz ಎಂಬುದು ಅವರಿಗೆ ನೆನಪಿರಲಿ. ರಾಘವೇಂದ್ರ ಅವರಿಗೆ ಅನ್ನದ ಋಣ ಬೇಕು. ಎಲ್ಲಿ ಹೋಗಿದೆ ಅದು. ರಾಜ್ಯ ಸರ್ಕಾರ ಅಕ್ಕಿ ಕೇಳಿದರೆ ಕೊಡಲಿಲ್ಲ. ಈಗ ಭಾರತ್ ಅಕ್ಕಿ ಎಲ್ಲಿದೆ ಎಂದು ಪ್ರಶ್ನಿಸಿದರು.
ಗೀತಾ ಶಿವರಾಜ್ ಕುಮಾರ್ ಅವರ ಸಾಧನೆ ಬಗ್ಗೆ ರಾಘವೇಂದ್ರ ಪ್ರಶ್ನಿಸುತ್ತಾರೆ. ಆದರೆ ಇವರ ಸಾಧನೆ ಏನೆಂದು ಮೊದಲು ಹೇಳಲಿ ರೈಲು ಬಿಟ್ಟಿದ್ದು ನಾನು ಎನ್ನುತ್ತಾರೆ. ಬೆಂಗಳೂರಿನಿಂದ ತಾಳಗುಪ್ಪದವರೆಗೆ ಆಗಿನ ಕಾಲದಲ್ಲಿಯೇ ರೈಲು ಬಿಟ್ಟಿದ್ದು ಬಂಗಾರಪ್ಪನವರು. ಹಾಗೆಯೇ ಹೆzರಿಗಳು ಕೂಡ ಆಗಿನ ಕಾಂಗ್ರೆಸ್ ಸರ್ಕಾರದಲ್ಲಿಯೇ ಆಗಿವೆ. ವಿಮಾನ ನಿಲ್ದಾಣದ ನಿರ್ವಹಣೆ ಕೂಡ ರಾಜ್ಯ ಸರ್ಕಾರವೇ ಮಾಡುತ್ತಿದೆ. ಕಾಂಗ್ರೆಸ್ ಯೋಜನೆಗಳಿಗೆ ಬಿಜೆಪಿಯವರು ಕೇವಲ ಬಾವುಟ ಹಾರಿಸಿದ್ದಾರೆ. ಈ ಸತ್ಯಗಳು ಅವರಿಗೆ ಗೊತ್ತಿರಲಿ ಎಂದರು.
ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವ ಮೊದಲು ಅವರದೇ ಪಕ್ಷದ ಬಿ ಟೀಂ ನಿಂದ ಸ್ಪರ್ಧಿಸಿರುವ ಮತ್ತು ಇವರ ಅಪ್ಪ, ಮಕ್ಕಳ ಬಗ್ಗೆ ಬೀದಿಯಲ್ಲಿ ಹರಾಜಕುತ್ತಿರುವ ಕೆ.ಎಸ್. ಈಶ್ವರಪ್ಪನವರಿಗೆ ಮೊದಲು ಉತ್ತರ ಕೊಡಲಿ. ಈಶ್ವರಪ್ಪ ಅವರನ್ನು ನೋಡಿದರೆ ಕನಿಕರ ಬರುತ್ತದೆ. ಈ ಸ್ಥಿತಿಗೆ ಅವರನ್ನು ತರಬಾರದಿತ್ತು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಆಯನೂರು ಮಂಜುನಾಥ್, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಕಲೀಂ ಪಾಶಾ, ಕಲಗೋಡು ರತ್ನಾಕರ್ ಮುಂತಾದವರಿದ್ದರು.