ಸಿಎಂ ಸಿದ್ದು ವಿರುದ್ಧ ಸಿಡಿದೆದ್ದ ಬಿಜೆಪಿ ಮಹಿಳಾ ಮೋರ್ಚಾ…
ಶಿವಮೊಗ್ಗ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಕ್ಷಮೆಯಾಚಿಸುವಂತೆ ಆಗ್ರಹಿಸಿ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ ಜಿಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾಸೀತಾರಾಮ್ ಅವರ ಬಗ್ಗೆ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಅಸಂಸ್ಕೃತ ಮತ್ತು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕೇಂದ್ರ ಸಚಿವ ಸಂಪುಟದಲ್ಲಿ ಪ್ರಭಾವಿ ಹುz ಯನ್ನು ಅಲಂಕರಿಸಿರುವ ದೇಶದ ಹಣಕಾಸು ನೀತಿಗಳನ್ನು ನಿರ್ಧರಿ ಸುವ ಮಹಿಳಾ ನಾಯಕಿಯನ್ನು ಮುಖ್ಯಮಂತ್ರಿಗಳು ಪದೇ ಪದೇ ಏಕವಚನದಲ್ಲಿ ಹಗುರವಾಗಿ ಸಂಭೋದಿಸುತ್ತಿರುವುದು ಸಂಸದೀಯ ಮಲ್ಯಗಳಿಗೆ ಮತ್ತು ಮಹಿಳೆಯರ ಘನತೆಗೆ ಮಾಡಿದ ನೇರ ಅಪಮಾನವಾಗಿದೆ. ಇದು ಕನ್ನಡಿಗರ ಸಂಸ್ಕತಿಯನ್ನು ಪ್ರತಿನಿಧಿಸುವುದಿಲ್ಲ. ಒಬ್ಬ ಮುಖ್ಯಮಂತ್ರಿ ಯಾಗಿ ಮಹಿಳೆಯ ಬಗ್ಗೆ ಕೀಳು ಮಟ್ಟದ ಭಾಷೆಯ ಬಳಕೆ ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದಂತೆ ಹಾಗೂ ಅತ್ಯಂತ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಬಾಯಿಯಿಂದ ಈ ರೀತಿಯ ಹೇಳಿಕೆಗಳು ಬರುವುದು ವಿಷಾಧನೀಯ. ಕೂಡಲೇ ಮುಖ್ಯಮಂತ್ರಿಗಳು ನಿರ್ಮಲಾ ಸೀತಾರಾಮ್ ಅವರ ಹಾಗೂ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಈ ರೀತಿಯ ಅಸಭ್ಯ ವರ್ತನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಗರ ಮಹಿಳಾ ಮೋರ್ಚಾ ಆಗ್ರಹಿಸಿದೆ.
ಬಿಜೆಪಿ ಮಹಿಳಾ ಮೋರ್ಚದ ನಗರಾಧ್ಯಕ್ಷರಾದ ರಶ್ಮೀಶ್ರೀನಿವಾಸ್, ಜಿ ಕಾರ್ಯದರ್ಶಿ ಸುರೇಖಾ ಮುರಳೀಧರ್, ನಗರ ಪ್ರಧಾನ ಕಾರ್ಯದರ್ಶಿ ಯಶೋಧಾ ವೈಷ್ಣವ್, ನಿರ್ಮಲಾ, ಶಾಂತಾ ಸುರೇಂದ್ರ, ಸುಮಾ ಭೂಪಾಳಂ, ಜಗದೀಶ್, ಮಾಲತೇಶ್, ಮಂಜುನಾಥ್ ನವುಲೆ, ಮಂಗಳಾ ನಾಗೇಂದ್ರ, ಚೈತ್ರಾನಾಯಕ್ ಮೊದಲಾದವರಿದ್ದರು.
