ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಸ್ತೆ ಗುಂಡಿ ದುರಸ್ತಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ…

Share Below Link

ಭದ್ರಾವತಿ : ಬಿಜೆಪಿ ಭದ್ರಾವತಿ ಮಂಡಲದಿಂದ ರಾಜದ್ಯಂತ ಹದಗೆಟ್ಟ ರಸ್ತೆಗಳ ದುರಸ್ತಿ ಮಾಡದೆ ನಿರ್ಲಕ್ಷ ತೋರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭದ್ರಾವತಿಯ ಬಿ.ಎಚ್. ರಸ್ತೆ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
ಪ್ರಮುಖರಾದ ಎನ್ ವಿಶ್ವನಾಥ ರಾವ್, ಉಕ್ಕುಂದ ಶಾಂತಣ್ಣ, ಸಿzಪುರ ಪರಮೇಶಣ್ಣ, ಕರುಣಾಕರ್, ಸುಬ್ರಮಣಿ, ಎಂಎಸ್ ಸುರೇಶಪ್ಪ, ಸಿzಪುರ ನಂಜಪ್ಪ ಹಾಗೂ ಸುಲೋಚನ ಪ್ರಕಾಶ್ ಸರ್.ಎಂ.ವಿ. ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಸ್ತೆ ತಡೆಗೆ ಮತ್ತು ರಸ್ತೆ ದುರಸ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭದ್ರಾವತಿಯಲ್ಲಿ ಹದಗೆಟ್ಟ ರಸ್ತೆಗಳಲ್ಲಿ ಇರುವ ಒಂದು ಗುಂಡಿಯನ್ನು ಬಿಜೆಪಿ ಕಾರ್ಯಕರ್ತರೇ ದುರಸ್ತಿ ಮಾಡಿ, ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ರಾಜ್ಯ ಸರ್ಕಾರಕ್ಕೆ ಚೀಮಾರಿ ಹಾಕಲಾಯಿತು.
ನಂತರ ಮಾತನಾಡಿದ ಮಂಡಲ ಅಧ್ಯಕ್ಷ ಧರ್ಮ ಪ್ರಸಾದ್, ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರಂಟಿ ಯನ್ನು ನೀಡದೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳದೆ ಜನ ಹಿತ ಮರೆತಿರುವುದರಿಂದ ಮುಖ್ಯಮಂತ್ರಿಗಳು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಪ್ರಮುಖರಾದ ಚೆನ್ನೇಶ್ , ರಘು ರಾವ್, ಮೊಸರಳ್ಳಿ ಅಣ್ಣಪ್ಪ, ಮಂಡಲದ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು , ಹಿರಿಯ ಮುಖಂಡರು ಮೋರ್ಚಗಳ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.